Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ

ಅಮ್ಮ ನಾನೇನು ತಪ್ಪು ಮಾಡಿದೆ ?

July 21, 2015 – 12:14 pm | By Ashok Joshi

ಭಾವಕಟ್ಟು

July 20, 2015 – 3:31 pm | By Nagaraj KV
3

     ಅಣೆಕಟ್ಟಿನಲ್ಲಿ ನೀರಿದೆ. ಒಳಹರಿವು ಹೆಚ್ಚಾದಂತೆ ನೀರನ್ನು ಕ್ರೆಸ್ಟ್ ಗೇಟ್ ತೆರೆದು ಹೊರಬಿಡಲಾಗುತ್ತದೆ. ನೀರನ್ನು ಹೊರಬಿಡದೆಹೋದರೆ? ಅಣೆಕಟ್ಟು ತುಂಬಿ ಹೆಚ್ಚಾದ ನೀರು ಹೊರಬರುತ್ತದೆ. ನೀರಿನ ದಬ್ಬುವ ಶಕ್ತಿ ಒಳಹರಿವು ಹೆಚ್ಚಾದಂತೆ ಹೆಚ್ಚುತ್ತಾ ಹೋಗಿ ಅಣೆಕಟ್ಟಿಗೆ ಅಪಾಯವಾಗಬಹುದು. ಭೂಕಂಪ, ಪ್ರಕೃತಿ ವಿಕೋಪ, ಮಾನವ ನಿರ್ಮಿತ ಅನಾಹುತ, ಇತ್ಯಾದಿ ಯಾವುದೇ …

ಪ್ರೀತಿಯು ಅದೊಂದು ಬೀಜವಾದರೆ

July 20, 2015 – 10:58 am | By Ashok Joshi

ಪ್ರೀತಿಯು ಅದೊಂದು ಬೀಜವಾದರೆ   (ಪ್ಯಾರ ವೋ ಬೀಜ್ ಹೈ)
 
ಅದೊಂದು ರೀತಿಯ ಬೀಜವಿದು ಪ್ರೀತಿ
ಒಮ್ಮುಖವಾಗದು ಅದರ ನೀತಿ
ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ
ಒಬ್ಬಂಟಿ ಬದುಕದು, ಅದರ ಗತಿ
ಬದುಕಿದರೆ ಇಬ್ಬರಲ್ಲೂ,
ಸತ್ತರೆ ಕೂಡಿಯೇ ಸಾಯುವ ಮತಿ
ಹರಿವ ಝರಿಯದು ಪ್ರೀತಿ
ದಂಡೆಗಳ ಕಟ್ಟೆಗಳ ಸರೋವರವಲ್ಲವದು
ದಂಡೆ ಕಾಣದ ಸಾಗರವೂ ಅಲ್ಲವದು,
ಚಿಮ್ಮುವ ಬುಗ್ಗೆಯದು ಅಷ್ಟೆ …..ಹರಿಯುತ್ತಿಹುದು
ಯುಗಯುಗಗಳಿಂದ
ನದಿಯ …

ನಿಸ್ವಾರ್ಥ ಪ್ರಕೃತಿಗೊಂದು ಪತ್ರ

July 17, 2015 – 9:46 am | By Uma Bhatkhande

ನಿಸ್ವಾರ್ಥ ಪ್ರಕೃತಿಗೊಂದು ಪತ್ರ
ಓ ಬಂಧು ಬಾಂಧವರೇ
ಓ ನೆತ್ತರ ಹಂಚಿಕೊಂಡ ಒಡನಾಡಿಗಳೇ
ಈ ಭವ ಬಂಧನದ ಜಾಲದಿಂದ
ಮುಕ್ತಿ ಪಡೆಯುವ ಇಚ್ಚೆಯಿಂದು
ಕಳಚ ಬೇಕಿದೆ ಈ ಸ್ವಾರ್ಥ ಸರಪಳಿಯಿಂದ
ಕ್ಷಮೆಯಾಚಿಸುತ ಬಯಕೆಯ ತೋಡಿಕೊಳುವೆ
ಸ್ವಾರ್ಥವಿಲ್ಲದ ಈ ಅನರ್ಘ್ಯ
ಪ್ರಕೃತಿಯಲಿ ಬೆಸೆಯಲೊಸುಗ
ವಿನಯದಿ ವಿನಂತಿಯು ಈ ಸೃಷ್ಠಿಗಿಂದು
ಓ ಮೇಘಮಂದಾರವೇ
ಓ ಘನ ಕಾರ್ಮೋಡಗಳೇ
ನಿನ್ನೊಡಲಲಿ ಒಂದು ಮೋಡವಾಗಿಸು
ಜಲಧಾರೆ ಸುರಿಸಿ ಧರೆ ತಂಪಾಗಿಸುವೆ
ಓ ದಟ್ಟ ಕಾನನವೆ
ಓ …

ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ………

July 16, 2015 – 5:36 am | By Ashok Joshi

ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ………
ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ, ಎಂದು ಒಂದೆಡೆ ಇಂಜಿನೀಯರಿಂಗ್ ಮೆಡಿಕಲ್ ಕಾಲೇಜುಗಳು ತಲೆಯೆತ್ತುತ್ತಿದ್ದರೆ, ಊರಿಗೊಂದು, ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮಿಗಳು ಹುಟ್ಟಿ ನಮ್ಮ ಮಠಕ್ಕೂ ಒಂದು …

ನಮ್ಮ ನಿಮ್ಮ ಕಥೆ

July 15, 2015 – 12:08 pm | By Anagha Kiran

ನಮ್ಮ ನಿಮ್ಮೆಲ್ಲರ ಬದುಕು ಒಂದೊಂದು ಕಥೆ…
ಸ್ವಲ್ಪ ಸುಖವಿದೆ, ಮತ್ತಿದೆ ಒಂದಿಷ್ಟು ವ್ಯಥೆ.
ಸಿರಿವಂತನ ಮನೆಯಲಿ ಕೊಳೆಯುತಿದೆ ಹಣದ ಕಂತೆ
ಆದರೂ ಅವನಿಗಿಲ್ಲ ನೆಮ್ಮದಿ ನಿಶ್ಚಿಂತೆ
ಬಡವನಿಗೆ ಮನೆಯೇ ಇಲ್ಲ… ತುತ್ತು ಕೂಳಿಗೂ ಚಿಂತೆ
ಅವನ ಬಾಳಿನುದ್ದಕ್ಕೂ ಕಷ್ಟ ಕೋಟಲೆಗಳ ಸಂತೆ
ಎಲ್ಲರ ಬದುಕೂ ಸಾಗುತಿದೆ ಸಮುದ್ರದಲೆಗಳಲಿ ದೋಣಿ ಸಾಗಿದಂತೆ
ನಗುತ ತನ್ನ ದೋಣಿಯ ದಾಟಿಸುವವನೆ …

ತಲ್ಲಣಿಸದಿರು ಮನುಜ…

July 15, 2015 – 11:56 am | By Anagha Kiran

ಏಕಿಷ್ಟು ತಲ್ಲಣ ಓ ಮನುಜ… ನಿಧಾನಿಸು
ಒಂದಿಷ್ಟು ಸಮಾಧಾನ ನೀ ಸಾಧಿಸು…
ಸಮಯಕ್ಕೆ ಬಂಧಿಯಾಗಿ ನೀ ಅದೆಷ್ಟು ಓಡುವೆ?
ಇನಿತಾದರೂ ವಿಶ್ರಾಂತಿ ನಿನಗೆ ಬೇಡವೇ?
ಸಾಧನೆಯ ವೇಗದಲಿ ಕಳೆದು ಹೋಗಿದೆ ಬಾಲ್ಯ
ಮುಗ್ಧ ನಗು ತುಂಟಾಟಗಳ ನೆನಪುಗಳಷ್ಟೇ ಲಭ್ಯ…
ದಿನಗಳವೆಷ್ಟಾಯ್ತೋ ಸೂರ್ಯಾಸ್ತದ ರಂಗು ನೋಡಿ
ಕೊಳಕ್ಕೆ ಕವಣೆ ಬೀಸಿ ಅಲೆಗಳು ಏಳುವಂತೆ ಮಾಡಿ
ಸಾಧಿಸುವ ಭರದಲ್ಲಿ ಕಳೆದುಕೊಂಡದ್ದು ಎಷ್ಟೋ?
ಕಣ್ರೆಪ್ಪೆ ಸೇರಿಸದ …

ನಾನೂ ಒಬ್ಬ ಓದುಗ. ಇನ್ನೂ ಬದುಕಿದ್ದೇನೆ!

July 15, 2015 – 11:38 am | By Gururaj Kulkarni

ಒಬ್ಬ ಓದುಗನಾಗಿ ನನಗೇನು ಬೇಕು ಎಂದು ನನಗಿನ್ನೂ ಯಾವುದೇ ಒಂದು ನಿರ್ಧಾರವಂತೂ ಇಲ್ಲ. ಯಾವುದೇ ಒಂದು ಪುಸ್ತಕವನ್ನು ಓದುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವದು ನನ್ನ ಅಭ್ಯಾಸ. ಇದು ಇಂದಿನ ಎಲ್ಲಾ ಪ್ರಜ್ಞೆಯುಳ್ಳ ಓದುಗ ಪುಸ್ತಕ ಆಯ್ದುಕೊಳ್ಳುವಾಗ ಅನುಸರಿಸುವ ಪ್ರಕ್ರಿಯೆ ಎಂದು ಭಾವಿಸುತ್ತೇನೆ. ಅಲ್ಲೊಂದು ಇಲ್ಲೊಂದು ವೇದಿಕೆಗಳು ಓದುಗರಿಗೆ …

ಸಂಪ್ರದಾಯಗಳು ಮತ್ತು ನಾವು

July 14, 2015 – 6:17 am | By Nagaraj KV
chained elephant

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು, ಕೈಗೆ …

ಗುರಿ ಸಾಧನೆಗೆ ಗರಿ ಯಶೋಧರ !

July 9, 2015 – 4:52 am | By Uma Bhatkhande

ಗುರಿ ಸಾಧನೆಗೆ ಗರಿ ಯಶೋಧರ !
ಸಿದ್ದಾರ್ಥನ ಬುದ್ಧನ ಮಾಡಿ
ಜಗದೊಳು ಮೆರೆಸಿದ ಯಶೋಧರ !
ತ್ಯಾಗ ಅಭಿಮಾನದ ಸಂಕೇತಕೆ
ಕಳಸವು ನೀ ಯಶೋಧರ !
ಅಘೋರಘನ ರಾತ್ರಿಯದಂದು
ಸಖಿಯ ಕಡೆಯ ನೋಟವ
ಕಣ್ತುಂಬುವ ನೆಪದಲಿ ಅಂದು
ಸಿದ್ಧಾರ್ಥನು ಬಳಿ ನಿಂದಿರಲು
ಗಾಢ ನಿದ್ರೆಯೊಳಿಹಳೆಂದು ಭ್ರಮಿಸಿರಲು
ಕಣ್ಣಿಟ್ಟರೆ ಗುರಿಯದು ಸಖನದು
ಕಲುಕುವ ಭಯದಿ ಬಾಹ್ಯದಿ ಕಣ್ಮುಚ್ಚಿರಲು
ಅಂತರಂಗವದು ಎಚ್ಚೆತ್ತಿರಲು
ಮುಂದಿಹ ಸಿದ್ಧಾರ್ಥನ ನೆರಳಿನ ಭಾಸಕೆ
ನಿನ್ನೊಡಲಲಿ ಕೋಲಾಹಲ ಎದ್ದಿರಲು
ತಡೆಯಲೆ …