Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ

ಮಾನಸಿಕ ಶಕ್ತಿ

September 1, 2017 – 11:10 am | By rkashramdwd

ಮಾನಸಿಕ ಶಕ್ತಿ
ಉಪನಿಷತ್ತುಗಳು ಮಹಾನ್ ಗ್ರಂಥಗಳು. ಬೇರೆ ಜನಾಂಗಗಳಿಗೆ ಹೋಲಿಸಿದರೆ, ನಮ್ಮದು ಹೆಮ್ಮೆಪಟ್ಟುಕೊಳ್ಳಬೇಕಾದ ಋಷಿಪರಂಪರೆ. ಹೀಗಿದ್ದಾಗ್ಯೂ, ನಾವು ದುರ್ಬಲರು, ತುಂಬಾ ದುರ್ಬಲರು ಎನ್ನುವುದನ್ನು ನಾನು ನಿಮಗೆ ಹೇಳಲೇಬೇಕಾಗಿದೆ. ಎಲ್ಲಕ್ಕಿಂತ ಮೊದಲು ನಮ್ಮ ದೈಹಿಕ ದೌರ್ಬಲ್ಯ. ಈ ದೈಹಿಕ ದೌರ್ಬಲ್ಯವೇ ನಮ್ಮೆಲ್ಲ ದುಃಖದುಮ್ಮಾನಗಳ ಮೂರನೆಯ ಒಂದು ಭಾಗಕ್ಕೆ ಕಾರಣವಾಗಿದೆ.
ನಾವು ಗಿಣಿಯಂತೆ …

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ

August 31, 2017 – 5:22 am | By kkoulagi

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ
ಒಂದೆರಡು ದಿನಗಳಿಂದ
ಹೊಟ್ಟೆಯಲ್ಲಿ ಚಿಟ್ಟೆಗಳ ಹಾರಾಟ
ಇನ್ನಿಲ್ಲದ ಗಲಿಬಿಲಿ..
ಏಕೆಂದು ಕೇಳುವದಿಲ್ಲ
ನಾನು ಬಲ್ಲೆ..
“ಇನ್ನು face book
ತೆಗೆಯುವದಿಲ್ಲ
ಅನವಶ್ಯಕವಾಗಿ
ಪ್ರತಿಕ್ರಿಯಿಸುವದಿಲ್ಲ
ಎಂದೆಲ್ಲ ವೀರಪ್ರತಿಜ್ಞೆಮಾಡಿ…”
ಅರ್ಧದಿನವೂ ಆಗಿಲ್ಲ
ಆಗಲೇ ತಟ್ಟೆಯಲ್ಲಿಯ
ಅನ್ನ ರುಚಿಸುತ್ತಿಲ್ಲ…
ಏನೋ ಅನ್ಯಮನಸ್ಕತೆ..
ನನಗೆ ಗೊತ್ತಾಗಿದೆ
“ಬಿಟ್ಟೇಬಿಟ್ಟೆ” ಅಂದುಕೊಂಡಷ್ಟೂ
ಬೆನ್ನೇರುವ ಬೇತಾಳವಿದು…

ಬದುಕಿಗೆ ಭಗವದ್ಗೀತೆ – ವೇದಾದಿಗಳು ಅನುಭವದ ಬಾಗಿಲಿನವರೆಗೆ ಮಾತ್ರ

August 29, 2017 – 9:15 am | By arathivb

ಬದುಕಿಗೆ ಭಗವದ್ಗೀತೆ – ವೇದಾದಿಗಳು ಅನುಭವದ ಬಾಗಿಲಿನವರೆಗೆ ಮಾತ್ರ
‘ವೇದಕರ್ಮಗಳನ್ನು ಭೋಗಪ್ರಾಪ್ತಿಗಾಗಿಯಷ್ಟೇ ಬಳಸುತ್ತ, ಸತ್ವರಜಸ್ತಮೋಗುಣಗಳಿಗೆ ಅಧೀನರಾಗಿರುತ್ತ ಹುಟ್ಟುಸಾವುಗಳ ಚಕ್ರಕ್ಕೆ ಸಿಲುಕಿ ಅಶಾಂತರಾಗುವ ಜನರಂತೆ ನೀನೂ ಆಗಬೇಡ. ತ್ರಿಗುಣಗಳನ್ನು ಮೀರಿದವನಾಗು. ಸಮತ್ವವನ್ನು ಸಿದ್ಧಿಸಿಕೋ’ ಎಂದು ಅರ್ಜುನನಿಗೆ ಕೃಷ್ಣನು ಕಿವಿಮಾತುಗಳನ್ನು ಹೇಳುತ್ತಿದ್ದನಷ್ಟೆ?
ತ್ರಿಗುಣಗಳು ನಮ್ಮ ವಿಚಾರ-ವ್ಯಾಪರದ ಮೂಲದ್ರವ್ಯಗಳು. ಅವುಗಳ ಪಾಶದಲ್ಲಿರುವ ತನಕ ನಾವು …

ಜ್ಞಾನಕ್ಕೆ ಮಿತಿಯಿಲ್ಲ

August 26, 2017 – 9:14 am | By rkashramdwd

ಜ್ಞಾನಕ್ಕೆ ಮಿತಿಯಿಲ್ಲ
ಸ್ವಾಮಿ ಶಂಕರಾಚಾರ್ಯರು ಒಮ್ಮೆ ತಮ್ಮ ಶಿಷ್ಯರೊಂದಿಗೆ ಸಮುದ್ರದ ದಂಡೆಯ ಮೇಲೆ ಬಹಳ ದೂರ ನಡೆದಿದ್ದರು. ಮರಳ ದಂಡೆ ಮೇಲೆ ಸ್ವಲ್ಪ ಹೊತ್ತು ಕುಳಿತರು. ಶಿಷ್ಯರು ತಮ್ಮ ಸಂದೇಹಗಳಿಗೆ ಅವರಿಂದ ಉತ್ತರ ಪಡೆದು ತಮ್ಮ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳುತ್ತಿದ್ದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಶಿಷ್ಯನೊಬ್ಬನಿಗೆ ಗುರುಗಳನ್ನು ಹೊಗಳುವ ಆಸೆಯಾಯಿತು.
“ತಾವು …

ಚಿತ್ರ – ಹಂಪಿ – ಯಾಕಂದ್ರೆ – ಅಂಥದಿಂಥದು

August 24, 2017 – 6:03 am | By kkoulagi

ಚಿತ್ರ – ಹಂಪಿ – ಯಾಕಂದ್ರೆ – ಅಂಥದಿಂಥದು
ಮುತ್ತು ರತ್ನಗಳನು
ಬಳ್ಳದಿಂದ ಅಳೆದು ಮಾರಿದ
ದತ್ತಿ ದಾನ ಧರ್ಮಗಳಿಗೆ
ತಮ್ಮ ಧನವ ತೂರಿದ
ಆಳರಸರ ವೈಭವದ ಚಿತ್ರ ನೆನೆದಾಗಲೆಲ್ಲ ನೆನಪಾಗುವದು
ವಿಜಯನಗರ ವೈಭವ..
ಅದು ಅಂಥದಿಂಥದಲ್ಲ…
ತನ್ನದೇ ಆದ ಇತಿಹಾಸ
ನಿರ್ಮಿಸಿದ ಕಾಲ..
ಇದೀಗ ಅದು ಹಾಳು ಹಂಪಿ..
ಇವೆರಡನ್ನೂ …

ಬದುಕಿಗೆ ಭಗವದ್ಗೀತೆ – ತ್ರಿಗುಣಗಳನ್ನೂ ಮೆಟ್ಟಿ ಮೇಲೇಳು ಪಾರ್ಥ

August 22, 2017 – 9:03 am | By arathivb

ಬದುಕಿಗೆ ಭಗವದ್ಗೀತೆ – ತ್ರಿಗುಣಗಳನ್ನೂ ಮೆಟ್ಟಿ ಮೇಲೇಳು ಪಾರ್ಥ
ವೇದವು ಭೋಗ-ಯೋಗಗಳೆರಡಕ್ಕೂ ಧರ್ಮದ ಹಾದಿಯನ್ನು ತೋರಿಕೊಡುತ್ತದೆ. ಆದರೆ, ಯೋಗದ ನೆಲೆಗೇರದೆ, ವೇದಕರ್ಮವನ್ನು ಕೇವಲ ಭೋಗಪ್ರಾಪ್ತಿಗಾಗಿ ಬಳಸಿಕೊಳ್ಳುತ್ತ, ಅಷ್ಟಕ್ಕೇ ಪಂಡಿತಂ-ಮನ್ಯರಾಗಿ ಮೆರೆಯುವ ’ವೇದವಾದರತ’ರನ್ನು ಕೃಷ್ಣನು ಖಂಡಿಸಿದ್ದನ್ನು ನೋಡಿದ್ದೇವೆ. ಮಾತನ್ನು ಮುಂದುವರೆಸುತ್ತಾನೆ ಕೃಷ್ಣ-
ತ್ರೈಗುಣ್ಯ ವಿಷಯಾವೇದಾ ನಿಸ್ತ್ರೈಗುಣ್ಯೋ ಭವಾರ್ಜುನ – ವೇದ(ಕರ್ಮ)ಗಳು ತ್ರಿಗುಣದ …

ಆಸ್ತಿಕ – ನಾಸ್ತಿಕ

August 18, 2017 – 6:18 am | By rkashramdwd

ಆಸ್ತಿಕ – ನಾಸ್ತಿಕ

ದೇವರಿದ್ದಾನೆ ಎಂಬ ನಂಬಿಕೆ, ವಿಶ್ವಾಸ, ಭಕ್ತಿ ಇರುವವರನ್ನು ಆಸ್ತಿಕರು ಎಂದು, ದೇವರು ಇಲ್ಲ, ಅದು ಬರೀ ಮನುಷ್ಯನ ಕಲ್ಪನೆ, ಎಲ್ಲವೂ ಯಾವುದೋ ಒಂದು ಪ್ರಕೃತಿ ನಿಯಮದಂತೆ ನಡೆಯುತ್ತದೆ, ವಿಧಿ-ದೇವರ ಇಚ್ಛೆ-ಎಂದು ತಿಳಿಯುವುದು ಪುರುಷ ಪ್ರಯತ್ನಕ್ಕೆ – ಪುರುಷ ಸಂಕಲ್ಪಕ್ಕೆ ಅಪಚಾರ ಎನ್ನುವವರನ್ನು ನಾಸ್ತಿಕರು ಎನ್ನುತ್ತೇವೆ.

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ

August 17, 2017 – 5:19 am | By kkoulagi

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ
ಕನಸಿನ ರಾಜಕುಮಾರ
ಖಂಡಿತ ಬರುತ್ತಾನೆ…
ಮಾಯಾ ಕುದುರೆಯಮೇಲೆ
ಕೂಡಿಸಿಕೊಂಡು
ಯಕ್ಷಿಣಿಯರ ಲೋಕಕ್ಕೆ
ಕರೆದೊಯ್ಯುತ್ತಾನೆ
ಎಂದೆಲ್ಲ ಕನಸು
ಕಂಡವಳದು ಈಗ
ಚಿಂತಾಜನಕ ಸ್ಥಿತಿ…
ಅತ್ತೂ. ಅತ್ತೂ
ಗಂಟಲು ಕಟ್ಟಿದೆ…
ಸದಾ ಯಾರದೋ
ಬೆದರಿಕೆ ಭಯದಲ್ಲಿ
ಮುದುರಿ ಹಿಡಿಮುಷ್ಟಿಯಾಗಿ
ಮೂಲೆ ಸೇರಿ
ಶೂನ್ಯ ನಿಟ್ಟಿಸುತ್ತ …

ಬದುಕಿಗೆ ಭಗವದ್ಗೀತೆ – ವೇದಜ್ಞತ್ವದ ಹಾದಿ

August 14, 2017 – 9:08 am | By arathivb

ಬದುಕಿಗೆ ಭಗವದ್ಗೀತೆ – ವೇದಜ್ಞತ್ವದ ಹಾದಿ
ವೇದವನ್ನು ಸುಮ್ಮನೆ ಭಾಗಶಃ ಪಠಣ, ಮನನ ಸಂಶೋಧನ ಮಾಡುವವರೆಲ್ಲ, ಪರಿಪೂರ್ಣಾರ್ಥದಲ್ಲಿ ’ವೇದಜ್ಞ’ರೆನಿಸಲಾರರು. ವೇದಸಾಹಿತ್ಯದ ಅರ್ಥವನ್ನು ಗ್ರಹಿಸಲು ಸಂಸ್ಕೃತ ಹಾಗೂ ವೇದಾಂಗಗಳ ಕ್ರಮಯುತ ಅಧ್ಯಯನದಿಂದ ಸಿದ್ಧಿಸುವ ವೇದಭಾಷೆ-ಪರಿಭಾಷೆಗಳ ಪರಿಣತಿ ಅತ್ಯವಶ್ಯಕ. ಆದರೆ ಅಷ್ಟರಿಂದಲೇ ಅದರ ಅಧ್ಯಾತ್ಮ ರಹಸ್ಯಭಾಗಗಳು ಗ್ರಾಹ್ಯವಾಗುವುದಿಲ್ಲ ಎನ್ನುವುದೂ ಸತ್ಯ. ವೇದದ ದೇವತಾಸ್ತುತಿ, …

ಅಳ್ಳಿಟ್ಟು ಅರಳ್ಳಿಟ್ಟು

August 12, 2017 – 10:22 am | By vijaya inamdar

ಅಳ್ಳಿಟ್ಟು–
ಇದು ಉತ್ತರಕರ್ನಾಟಕದ ಸುಪ್ರಸಿದ್ಧವಾದ ತಿಂಡಿ ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರು ಅನಾದಿಕಾಲದಿಂದಲೂ ತಿನ್ನುತ್ತಾ ಬಂದಾರ.ಇದು ಅಳ್ಳಿನ ಜೊಳದಿಂದ ಮಾಡಿದ ಪದಾರ್ಥ.
ಇದನ್ನ ಹ್ಯಂಗ ಮಾಡುದಪಾ ಅಂದ್ರ?ಮೊದಲು ಅಳ್ಳೀನ ಜೋಳ ನೀರಾಗ ಹಾಕಿ ಹತ್ತಿಪ್ಪತ್ತು ನಿಮಿಷ ಕುದಿಸಿ ನೀರಿನಿಂದ ಹೊರಗ ತಗಿಬೇಕು,ನೀರನ್ನ ಎಲ್ಲಾ ಬಸದು ಜೋಳ ನೆರಳಾಗ ಆರಲಿಕ್ಕೆ ಇಡಬೇಕು
.ಆಮೇಲೆ …