Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Category

Articles in Philosophy (ತತ್ವಶಾಸ್ತ್ರ)

ಆತ್ಮಸ್ಥನೊಬ್ಬನೇ ಕರ್ಮಾತೀತ

May 23, 2018 – 5:11 am | By arathivb

ಆತ್ಮಸ್ಥನೊಬ್ಬನೇ ಕರ್ಮಾತೀತ
‘ತನಗೂ ಜಗತ್ತಿಗೂ ಹಿತಸಾಧಕ ‘‘ಯಜ್ಞನೀತಿ’’ ಅನುಸರಿಸದೆ ಭೋಗಾತುರದಲ್ಲಿ ಪಾಪಾಯುವಾಗಿ ಬದುಕುವ ವ್ಯಕ್ತಿಯ ಜೀವನ ವ್ಯರ್ಥ’ ಎಂಬ ಕೃಷ್ಣೋಕ್ತಿ ಮನನ ಮಾಡಿದ್ದೆವಷ್ಟೆ.
ನಮ್ಮ ಮನೋಬುದ್ಧಿಗಳಲ್ಲಿ ಲೇಶಮಾತ್ರವಾದರೂ ಭೋಗಾಸಕ್ತಿ ಇದ್ದರೂ ನಾವು ಕರ್ಮದಲ್ಲಿ ತೊಡಗುವುದು ಅನಿವಾರ್ಯ. ‘ಕರ್ಮ’ವೆಂದರೆ ಕೇವಲ ವೇದೋಕ್ತ ಕರ್ಮಕಾಂಡವೂ, ಭೌತಿಕ ಕ್ರಿಯಾಕಲಾಪಗಳಷ್ಟೇ ಅಲ್ಲ. ನಮ್ಮ ಮನೋಬುದ್ಧಿಗಳ ಸ್ಥೂಲ-ಸೂಕ್ಷ್ಮ-ವ್ಯಾಪಾರಗಳೂ …

ಲಂಗುಲಗಾಮಿಲ್ಲದೆ ಬದುಕುವವನು ಪಾಪಾಯು

May 16, 2018 – 5:15 am | By arathivb

ಲಂಗುಲಗಾಮಿಲ್ಲದೆ ಬದುಕುವವನು ಪಾಪಾಯು
ಜೀವಿಗಳ ಅಸ್ತಿತ್ವಕ್ಕೆ ಆಧಾರವಾದ ಅನ್ನವೂ, ಅದಕ್ಕೆ ಆಧಾರವಾದ ಮಳೆಬೆಳೆಗಳೂ, ಅದಕ್ಕೆ ಪೋಷಕವಾದ ಕರ್ಮಗಳನ್ನು ನಿರ್ದೇಶಿಸುವ ವೇದವೂ, ವೇದಕ್ಕೆ ಆಧಾರವಾದ ಅಕ್ಷರತತ್ವವೂ ‘ಯಜ್ಞ’ದಲ್ಲೇ ಪ್ರತಿಷ್ಠಿತವಾಗಿವೆ ಎನ್ನುವುದನ್ನು ಕೃಷ್ಣ ಹೇಳಿದ.
‘ಯಜ್ಞ’ವೆಂದರೆ ‘ವೇದೋಕ್ತವಾದ ಯಾಗಾದಿ ಕರ್ಮ’ಗಳಷ್ಟೇ ಅಲ್ಲ. ಭಾವಶುದ್ಧಿ ಹಾಗೂ ಸಮರ್ಪಣಭಾವಗಳಿದ್ದಲ್ಲಿ ಎಲ್ಲ ದೈಹಿಕ ಮಾನಸಿಕ ಬೌದ್ಧಿಕಕರ್ಮಗಳೂ …

ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ

May 9, 2018 – 5:06 am | By arathivb

ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ||
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಂ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ||
(ಭ.ಗೀ.: 3.14-15)
‘ಜೀವಿಗಳು ಅನ್ನ(ಆಹಾರ)ದಿಂದಾಗಿ ಹುಟ್ಟುತ್ತವೆ/ಬಾಳುತ್ತವೆ. ಅನ್ನವು ಉತ್ಪತ್ತಿಯಾಗುವುದು ಮಳೆಯಿಂದ. ಮಳೆಯು ಯಜ್ಞದಿಂದಾಗಿ (ಪ್ರಚೋದಿತವಾಗಿ) ಉಂಟಾಗುತ್ತದೆ, …

ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ

May 2, 2018 – 4:53 am | By arathivb

ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ||
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಂ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ||
(ಭ.ಗೀ.: 3.14-15)
‘ಜೀವಿಗಳು ಅನ್ನ(ಆಹಾರ)ದಿಂದಾಗಿ ಹುಟ್ಟುತ್ತವೆ/ಬಾಳುತ್ತವೆ. ಅನ್ನವು ಉತ್ಪತ್ತಿಯಾಗುವುದು ಮಳೆಯಿಂದ. ಮಳೆಯು ಯಜ್ಞದಿಂದಾಗಿ (ಪ್ರಚೋದಿತವಾಗಿ) …

ತನಗಾಗಿ ಮಾತ್ರವೇ ಬದುಕುವುದು ಪಾಪ

April 25, 2018 – 5:36 am | By arathivb

ತನಗಾಗಿ ಮಾತ್ರವೇ ಬದುಕುವುದು ಪಾಪ
ಮಾಡುವುದೆಲ್ಲವನ್ನೂ ‘ಯಜ್ಞ’ಭಾವದಿಂದ ಮಾಡಿ, ದೇವತಾರ್ಪಣ ಮಾಡಬೇಕು; ದೇವತಾಪ್ರಸಾದವಾಗಿ ಸಿಕ್ಕಿದ ಕರ್ಮಫಲವನ್ನು ಸಹಮಾನವರೊಂದಿಗೆ ಹಂಚಿಕೊಂಡೇ ಭೋಗಿಸಬೇಕು, ಇಲ್ಲದಿದ್ದರೆ ಅದು ‘ಕಳ್ಳತನ’ವೆನಿಸುತ್ತದೆ – ಎನ್ನುವ ಕೃಷ್ಣನ ಉಪದೇಶವನ್ನು ಚರ್ಚಿಸುತ್ತಿದ್ದೆವು.
ಇತರರ ‘ವಸ್ತು’ವನ್ನು ಕದ್ದರೆ ಮಾತ್ರವೇ ಕಳ್ಳತನವಲ್ಲ. ಕೃತಿಚೌರ್ಯ ಕೀರ್ತಿಚೌರ್ಯ ಕೃತಘ್ನತೆಗಳೂ ಕಳ್ಳತನಗಳ ರೂಪಗಳೇ! ನಮ್ಮ ದೇಶದ ಅದೆಷ್ಟೋ …

ಯಜ್ಞವೇ ಜೀವನನೀತಿ

April 17, 2018 – 5:29 am | By arathivb

ಯಜ್ಞವೇ ಜೀವನನೀತಿ
‘‘ದೇವತಾಯಜ್ಞಗಳ ಫಲವನ್ನು ಪಡೆದವನು ಅದನ್ನು ಸಹಮಾನವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ಭೋಗಿಸಿದರೆ ‘ಕಳ್ಳ’ನೆನಿಸುತ್ತಾನೆ’’ ಎಂದು ಕೃಷ್ಣನು ಎಚ್ಚರಿಸಿದ್ದನ್ನು ನೋಡಿದ್ದೇವೆ. ‘ಮಾತಾಪಿತೃಗಳ, ಗುರುಹಿರಿಯರ, ಬಂಧುಮಿತ್ರರ, ನೆರೆಕೆರೆಯವರ, ಸರ್ಕಾರದ, ಸಮಾಜದ, ಪಶುಪಕ್ಷಿಗಳ ಹಾಗೂ ನಿಸರ್ಗದ ಋಣವನ್ನು ಹೊತ್ತಿರುವ ನಾವು ನಮ್ಮ ಪುಣ್ಯವನ್ನೂ ಹಾಗೂ ನಾವು ಪಡೆದ ದೇವತಾಪ್ರಸಾದವನ್ನೂ ಸಹಮಾನವರೊಂದಿಗೆ ಹಂಚಿಕೊಳ್ಳುವುದೇ …

ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ

April 10, 2018 – 5:45 am | By arathivb

ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ
‘ದೇವತಾಯಜ್ಞದ ಮೂಲಕ ಭೋಗಯೋಗಾದಿಗಳನ್ನು ಪಡೆಯಬಹುದು. ಈ ಮೂಲಕ ಶ್ರೇಯಸ್ಸುಂಟಾಗುತ್ತದೆ ಎನ್ನುವ ವಿಚಾರವನ್ನು ಸೃಷ್ಟಿಕರ್ತನು ಸೃಷ್ಟಿಯ ಆದಿಯಲ್ಲೇ ಉಪದೇಶಿಸಿದ್ದನು’ ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ‘ಯಜ್ಞ ಎಂದರೇನು? ಅದರಿಂದ ಸರ್ವತೋಮುಖ ಶ್ರೇಯಸ್ಸು ಹೇಗೆ ಆಗುತ್ತದೆ?’ ಎನ್ನುವ ವಿಚಾರವನ್ನೂ ಚರ್ಚಿಸಿದ್ದೇವೆ. ಇದೇ ವಿಚಾರವನ್ನೇ ಭಗವಾನ್ ಕೃಷ್ಣನು ಮುಂದುವರೆಸುತ್ತಾನೆ;
ಇಷ್ಟಾನ್ …

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ

April 3, 2018 – 5:38 am | By arathivb

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ
ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ || (3.10-11)
ಎಂಬ ಶ್ಲೋಕವನ್ನು ಚರ್ಚಿಸುತ್ತಿದ್ದೆವು. ಬ್ರಹ್ಮನು ‘ದೇವತೆಗಳನ್ನು ಯಜ್ಞದ ಮೂಲಕ ತೃಪ್ತಿಪಡಿಸಿ’ …

ಯಜ್ಞ ಎಂದರೇನು?

March 27, 2018 – 5:46 am | By arathivb

ಯಜ್ಞ ಎಂದರೇನು?
‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ ಹೇಳುತ್ತಾನೆ:
ಸಹಯಜ್ಞಾಃ ಪ್ರಜಾಃ ಸೃಷ್ಟಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷವೊಸ್ತಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ …

ಅನಗತ್ಯ ಕರ್ಮವನ್ನು ಬಿಡು

March 20, 2018 – 9:05 am | By arathivb

ಅನಗತ್ಯ ಕರ್ಮವನ್ನು ಬಿಡು
‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ ಹೊರತು ಕರ್ತವ್ಯಕರ್ಮಗಳಿಂದಲ್ಲ’ ಎಂದು ಮುಂದೆ ಸೂಚಿಸುತ್ತಾನೆ:
ಯಜ್ಞಾರ್ಥಾತ್ ಕರ್ಮಣೊನ್ಯತ್ರ
ಲೋಕೊಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ
ಮುಕ್ತಸಂಗಃ ಸಮಾಚರ …