Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by Uma Bhatkhande

ಕಲಿಕೆ

April 20, 2018 – 4:54 am | By Uma Bhatkhande

ಕಲಿಕೆ
ಬಾನಾಡಿಗಳಂತೆ ನನಗೂ ರೆಕ್ಕೆ ಬೇಕು
ಅವುಗಳಂತೆ ಹಾರಲು ಗರಿಗಳು ಬೇಕು.
ಗಿಡ ಮರ ಟೊಂಗೆಯಲಿ ಕೂಡಲು ಬೇಕು.
ಹಕ್ಕಿಗಳಂತೆಯೆ ಪ್ರಕೃತಿ ಪ್ರೇಮವನು ಬೆಳೆಸಲು ಬೇಕು.
ನೂಲು ನಾರಿನಲಿ ಗೂಡನು ಕಟ್ಟಲು ಬೇಕು
ಸರಳತೆಯ ಪಾಠ ಕಲಿಯಲು ಬೇಕು.
ಪುಟ್ಟ ಮರಿಗಳಿಗೆ ಗುಟುಕನು ನೀಡಲು ಬೇಕು.
ಹಾಗೇ, ಮಮತೆಯ …

ಮೌನ ನಡಿಗೆ

April 6, 2018 – 5:08 am | By Uma Bhatkhande

ಮೌನ ನಡಿಗೆ
ಮೌನ, ದೀರ್ಘಮೌನ, ಮೌನದ ನಡಿಗೆ
ಅಂತರಾಳದೊಳು ಹುದುಗಿಹ ನೂರು
ಮಾತಿನ ಒಡೆದಿತ್ತು ಗಡಿಗೆ.
ಭಾವ ಭಾವನೆಗಳು ತೂರಿ ಬರುತಿರೆ ಅಡಿಗಡಿಗೆ
ಎಂದೆಂದೋ ಹುದುಗಿಹ ತಪ್ಪು ಒಪ್ಪುಗಳು
ಒಮ್ಮೆ ದುಃಖ ಒಮ್ಮೆ ನಗುವಾಗಿ ಹರಿದಿರೆ
ಕಡಗೋಲಂದದಿ ತಿರುತಿರುಗಿ ಮಂಥನಕ್ಕೆ
ಬಿದ್ದಿರೆ, ಹಾ! ಇದು ಅಸಮ್ಮತ ನಡಿಗೆ
ಓಹೋ …

ಹಗಲಿನ ತಾಯಿ ಕತ್ತಲು!

November 22, 2017 – 6:15 am | By Uma Bhatkhande

ಹಗಲಿನ ತಾಯಿ ಕತ್ತಲು!
ಮೊನ್ನೆ ದೀಪಾವಳಿ ಹಬ್ಬ ತುಂಬಾ ವಿಜ್ರಂಭಣೆಯಿಂದ ಆಚರಿಸಿದೆವು. ಇದೇನು, ದೀಪಾವಳಿ ಮುಗಿದು ಒಂದು ಮಾಸವೇ ಕಳೆಯಿತು. ಈಗ ದೀಪಾವಳಿಯ ಬಗ್ಗೆ, ಏನಿದು? ಎಂದು ಹೇಳ್ತಿರಬಹುದು ಓದುಗರು. ಹೌದು, ದೀಪಾವಳಿ ಮತ್ತೆ ಮತ್ತೆ ಪ್ರತಿವರ್ಷದಂತೆ ಬಂದೇ ಬರುತ್ತೆ. ಈ ಬಾರಿ ದೀಪಾವಳಿ ನನಗೆ ಒಂದು ವಿಶೇಷ. …

ಹೀಗೊಂದು ದಿನ

November 15, 2017 – 10:27 am | By Uma Bhatkhande

ಹೀಗೊಂದು ದಿನ
ಮನೆಯವರೆಲ್ಲಾ ಪ್ರವಾಸಕ್ಕೆಂದು ಹೊರಡುತ್ತಿದ್ದರು. ನನಗೆ ಪ್ರವಾಸ ತುಂಬಾ ಖುಷಿಕೊಡುವ ವಿಷಯ. ಮಿನಿಬಸ್‍ನಲ್ಲಿ ಹಾಡುತ್ತಾ ಕುಣಿಯುತ್ತಾ ಹೋಗುತ್ತಿದ್ದೆವು. ಮೊದಲು ಸಮುದ್ರದಲ್ಲಿ ಆಡುವುದು ಎಂದು ನಿರ್ಧರಿಸಲಾಗಿತ್ತು. ನಡುವೆ ಇನ್ನೇನು ಸ್ವಲ್ಪವೇ ದೂರದಲ್ಲಿ ಸಮುದ್ರ ಇತ್ತು. ತೆರೆಗಳ ಮಿಂಚಿನ ಓಟ ದೂರದಿಂದ ಕಾಣಿಸುತ್ತಿತ್ತು. ಮನೆಯವರೆಲ್ಲಾ ಎಲ್ಲೆಲ್ಲೊ ಅಡ್ಡಾಡುತ್ತಾ ಹೋದರು. ನಾನು …

ಪಂಜರದ ಗಿಳಿ

October 16, 2017 – 11:10 am | By Uma Bhatkhande

ಪಂಜರದ ಗಿಳಿ
ಪಂಜರದೊಳೊಂದು ಗಿಳಿ
ಮೂಕ ವೇದನೆಯಿಂದಲಿ
ಬಾನ ತುದಿಯನೆ ನೋಡುತಲಿರೆ
ಬಳಗಗಳೆದರ ಕೂಡಿ ಬಾನಲಿ ಹಾರುತಿರೆ
ಒಂಟಿ ತಾನೆನ್ನುವ ಭಾವದಲಿ
ಮುಗಿಲ ತಾಯಿಯ ಸ್ಮರಿಸಿ ದುಃಖದಲಿ
ಗಿಡ, ಮರ, ಪೊಟರೆ ಗೂಡು
ಆಹಾ! ಎಂಥ ಸುಖಕರ ಆ ಜೀವನವು.
ಪಂಜರದೊಳು ನಾನಿಂದು
ಕಾನನದ ಸೊಬಗು ಕಾಣೆ
ವನದ ಹಣ್ಣು, ಪುಷ್ಪ ಕಾಣೆ
ಹಸಿರು …

ನನ್ನದೂ ಒಂದು ಜೀವ

October 9, 2017 – 8:49 am | By Uma Bhatkhande

ನನ್ನದೂ ಒಂದು ಜೀವ
“ಎಷ್ಟು ದಿನ ಆಯ್ತು ನನ್ನ ಬಟ್ಟೆ ತೊಳೆಯದೆ ಹಾಗೇ ಉಳಿದಿದೆ. ನನಗೆ ಬೇಕಾದ ಬಟ್ಟೆನೆ ಇಲ್ಲ ಇವತ್ತು” ಗಂಡನ ಗೊಣಗಾಟ. “ಅಮ್ಮ ನನ್ನ ಶೂ ಎಲ್ಲಿಟ್ಟೀ?” ಸಿಗತಾನೇ ಇಲ್ಲ. ಸಾಕ್ಸೂ ತೊಳೆದಿಲ್ಲ ವಾಸನೆ ಬರ್ತಾ ಇದೆ. ತೊಳೆದ ಸಾಕ್ಸು ಎಲ್ಲವ್ವ? ಮಗನ ತೊಳಲಾಟ. “ಅಮ್ಮಾ ನಂಗೆ …

ಬಾಲ್ಯದ ನೆನಪಿನಂಗಳದಲ್ಲಿ.

September 18, 2017 – 5:42 am | By Uma Bhatkhande

ಬಾಲ್ಯದ ನೆನಪಿನಂಗಳದಲ್ಲಿ.

ಬಾಲ್ಯ ಅನ್ನೊದೇ ಹಾಗೆ! ಆಗಾಗ ಮರುಕಳಿಸುತ್ತಲೇ ಇರುತ್ತದೆ. ಎಷ್ಟೇ ವಯಸ್ಸಾದವರಾದರೂ ಯುವಕ, ಯುವತಿಯರೂ ಬಾಲ್ಯದ ನೆನಪಿನಂಗಳದಲ್ಲಿ ಈಜದೇ ಇರಲು ಸಾಧ್ಯವಿಲ್ಲ. ಒಂದು ಅತ್ಯಂತ ಸಿಹಿ ಘಟನೆ ಅಥವಾ ಅತ್ಯಂತ ಸಿಹಿ ಘಟನೆಗಳು ಅಚ್ಚಳಿಯದೆ ಉಳಿಯುವಂತಹದು. ಹೌದು, ನಾವು ಆಗಾಗ ಚೈತನ್ಯ ವೃದ್ಧಿಸಿಕೊಳ್ಳಲು ಈ ಬಾಲ್ಯದ ನೆನಪು …

ಕವಿ

July 31, 2017 – 5:02 am | By Uma Bhatkhande

ಕವಿ
ತಂಪಕಾನನದಲಿ ಮನ ಚಲಿಸಿ
ತನುಮನ ಚಲಿಸಿ
ಹೆಜ್ಜೆ ಹೆಜ್ಜೆಗೂ ಮೈಮನಪುಳಕ!
ಭಾವ ಭಾವನೆಗಳ ನಿಗೂಢ ಕೈಚಳಕ,
ವ್ಯಕ್ತ, ಅವ್ಯಕ್ತ ಶಾಂತಚಿತ್ತ
ಕಾವ್ಯ ಕವನದಲಿ ಅಭಿವ್ಯಕ್ತ.
ಟೊಂಗೆ ಟೊಂಗೆಯ ಘರ್ಷ
ಇಂದ್ರಿಯಕೆ ಇಬ್ಬನಿಯ ತುಂತುರು ಸ್ಪರ್ಷ
ಹಕ್ಕಿ ಪಕ್ಷಿಗಳ ಇಂಚರದ ಸೋಗು
ಕರಣಗಳಿಗೆ ತಾನನದ ಕೂಗು!
ಅಂತರಾಳದಲಿ ನಿಶ್ಯಬ್ದ
ಬಾಹ್ಯದೇಹವು ಅಲುಗದೆ ಸ್ತಬ್ಧ

ನಮ್ಮವರು

July 17, 2017 – 4:37 am | By Uma Bhatkhande

ನಮ್ಮವರು
ನಮ್ಮವರು ನಮ್ಮನರಿತವರು
ನಮ್ಮ ನಗುವಲ್ಲಿ ನಗುವವರು
ದುಃಖದಲಿ ದುಃಖಿಸಿ
ಕಣ್ಣಂಚಿನ ಕಂಬನಿಯನೊರೆಸುವರು
ನಮ್ಮವರು
ಮನಕಲುಕಿ ಕದಡಿರಲು
ಹಿತನುಡಿಯಲಿ ಮನ ಹಗುರಾಗಿಸುವರು
ಕರುಣೆ, ಮಮತೆ, ವಾತ್ಸಲ್ಯವರಿತು
ಉದಾರತೆಯ ಮೆರೆದವರು
ನಮ್ಮವರು
ಎಡರು ತೊಡರುಗಳ ಹಾದಿಯಲಿ
ಬಿದ್ದ ಮುಳ್ಳುಗಳ ಅರಿಗೊಡಸದೆ
ಮೆತ್ತಗೆ ಸರಿಸುವರು
ತಾಪದಲಿ ಬೆಯ್ವವರ ಹೆಗಲಿಗಿರಿಸಿ ಹಸ್ತ
ಇರುವಿಕೆಯ ಭರವಸೆಯನಿಟ್ಟವರು
ನಮ್ಮವರು
ಒಂಟಿತನದಲಿ ಕಂಟಿಗಳ …

ಮನದೊಡತಿ

July 10, 2017 – 5:12 am | By Uma Bhatkhande

ಮನದೊಡತಿ
ಸರಿಸಿ ಪರದೆಯ ಇಣುಕಿ
ನೆನಪಿನಂಗಳದಲಿ ಈಜುವ
ಇಚ್ಛೆ ಇಂದೆನಗೆ ಗೆಳತಿ
ಮರುಕಳಿಸುವ ಚೇತನ ನೀನಾಗಿ
ಚಿತ್ರಗಳೊಂದೊಂದೆ ಪರದೆಗಿಳಿದಿದೆ ಬೆಡಗಿ
ಪರದೆ ತುಂಬ ನೀನೇ ನಿಂತೆ ಸೊಬಗಿ
ಕಪ್ಪು ಕಾರ್ಮೋಡಗಳುರುಳಿ
ಸಾಗುತಿರೆ ಸಾಲಾಗಿ ಬೆಂಬತ್ತಿ
ತಂಪು ಮಾರುತದ ಸೋಂಕು
ಮುಸ್ಸಂಜೆಯಲಂದು
ಮೈ ನಡುಗಿಸಿತ್ತು ಬೆಡಗಿ.
ಹನಿಗಳೊಂದೊಂದಾಗಿ ಬೀಳುವ ಸದ್ದು
ಕ್ಷಣದಿ ಧರೆಗೆ ವರುಣನ …