Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by raghottam koppar

ಪುರೋ(ಅ)ಹಿತ ವರ್ತನೆ

March 29, 2016 – 12:18 pm | By raghottam koppar

ಪುರೋ(ಅ)ಹಿತ ವರ್ತನೆ
                                             – ರಘೋತ್ತಮ ಕೊಪ್ಪರ್
ಮೊನ್ನೆ ಒಂದು ಮಠಕ್ಕೆ ಹೋದಾಗ ನಡೆದ ಪ್ರಸಂಗವಿದು. ಅಲ್ಲಿ ಒಬ್ಬ ಮಧ್ಯ ವಯಸ್ಕ ತನ್ನ ತಾಯಿಯ ಶ್ರಾದ್ಧ ಮಾಡಿಸುತ್ತಿದ್ದ. ಅವನು ಅತಿ ವಿನಯದಿಂದ ಪುರೋಹಿತನ ಮುಂದೆ ಮುಂದೆ ಹೋಗಿ ಕುಳಿತುಕೊಂಡ. ‘ಏನ್ರಿ ಅದನ್ನು ತರಲಿಲ್ಲ ಇದನ್ನು ತರಲಿಲ್ಲ..’ ಹೀಗೆ ಆ ಪುರೋಹಿತ ಅವನ …

ಹಿಂಗ್ಯಾಕೆ ನಾವೆಲ್ಲ….! ಭಾಗ -4

March 13, 2016 – 5:35 am | By raghottam koppar

                                     ಸಾಮಾಜಿಕ ಜಾಲತಾಣಗಳು
                                                                              — ರಘೋತ್ತಮ ಕೊಪ್ಪರ
ಇಂದು ಯಾರ ಬಳಿ ನೋಡಿದರೂ ಮೊಬೈಲ್ ವಿಥ್ ಇಂಟರ್ ನೆಟ್ ಕನೆಕ್ಷನ್. ಅದರಲ್ಲೂ ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿರುವುದು ಒಂದು ಕಡ್ಡಾಯ ಮತ್ತು ಹೆಮ್ಮೆ ಎಂಬಂತಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಿರುವುದು ಒಂದು ಕಡೆ ಹೆಮ್ಮೆಯ ವಿಷಯವಾದರೆ ಇನ್ನೊಂದೆಡೆ …

ಹಿಂಗ್ಯಾಕೆ ನಾವೆಲ್ಲ….! ಭಾಗ-3 – ಕಸ ಚೆಲ್ಲಬೇಡಿ

March 6, 2016 – 5:20 am | By raghottam koppar

  ಕಸ ಚೆಲ್ಲಬೇಡಿ
– ರಘೋತ್ತಮ ಕೊಪ್ಪರ್
ಇಂದು ನಮ್ಮ ನಗರಗಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ವಿಲೇವಾರಿಯೂ ಪ್ರಮುಖ ಸಾಲಿನಲ್ಲಿ ಬರುತ್ತೆ. ಎಷ್ಟೋ ಜನರು ಘನ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸುವುದಿಲ್ಲ. ಒಂದೇ ಪ್ಲಾಸ್ಟಿಕ್ ಚೀಲದಲ್ಲಿ ಕಾಯಿಪಲ್ಯೆ ಸಿಪ್ಪೆ, ಒಡೆದ ಬಲ್ಬ್ ಇವೆಲ್ಲ ಹಾಕಿ ಒಗೆದರೆ, ಅದನ್ನು ಪ್ರತ್ಯೇಕಿಸುವವರ ಕೈಗೆ …

ಹಿಂಗ್ಯಾಕೆ ನಾವೆಲ್ಲ…! ಭಾಗ-2

February 26, 2016 – 12:01 pm | By raghottam koppar
Raghu Photo

ಮಾಧ್ಯಮಗಳು
                                             —– ರಘೋತ್ತಮ ಕೊಪ್ಪರ್
ಇಂದು ಟಿವಿ ಚಾನೆಲ್‍ಗಳ ಸಂಖ್ಯೆ ಅಧಿಕವಾಗಿದೆ. ಎಲ್ಲ ಚಾನೆಲ್‍ಗಳೂ ಜನಮನ ಸೆಳೆಯೋಕೆ ಹತ್ತು ಹಲವು …

ಹಿಂಗ್ಯಾಕೆ ನಾವೆಲ್ಲ….! ಭಾಗ -1

February 19, 2016 – 10:35 am | By raghottam koppar

ಹಿಂಗ್ಯಾಕೆ ನಾವೆಲ್ಲ….!
— ರಘೋತ್ತಮ ಕೊಪ್ಪರ್
ಇಂದಿನ ದಿನಗಳಲ್ಲಿ ನಾವೆಲ್ಲ ಎಷ್ಟೇ ಸುಶಿಕ್ಷಿತರಾಗಿದ್ದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ಗೊತ್ತಿದ್ದೂ ಗೊತ್ತಿಲ್ಲದಂತೆ, ತಿಳಿದರೂ ತಿಳಿಯದವರಂತೆ ಯಾಕೆ ಮಾಡುತ್ತಿದ್ದೇವೆ ಅಥವಾ ಮಾತನಾಡುತ್ತಿದ್ದೇವೆ ಎಂಬುದು ಒಂದು ವಿಪರ್ಯಾಸವೇ ಸರಿ. ಅವುಗಳಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. (ಇಲ್ಲಿ ನಾವು ಎಂದರೆ ಸಾಮಾನ್ಯ ಜನರು.) ಅವುಗಳನ್ನು ಭಾಗಗಳನ್ನಾಗಿ ವಿಂಗಡಿಸಿದ್ದೇನೆ.
ಹಿಂಗ್ಯಾಕೆ …

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ

January 13, 2016 – 4:44 am | By raghottam koppar
VIVIDLIPI in London Kannada event

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ- ಶೈಲಜಾ ಹೂಗಾರ

ಇಂಟ್ರೊ: ಹುಬ್ಬಳ್ಳಿ–ಧಾರವಾಡದವರು ವರ್ಗವಾಗಿ ಬೇರೆ ಯಾವುದಾದರೂ ರಾಜ್ಯ ಅಥವಾ ದೇಶಕ್ಕೆ ಹೋದಾಗಲೂ ಇಲ್ಲಿನ ಏನೆಲ್ಲವನ್ನು ಮಿಸ್‌ ಮಾಡಿಕೊಳ್ಳುವುದು ಇದೆ. ಹಾಗೇ ಹಳೆಯ ಸಂಗ್ಯಾಬಾಳ್ಯಾ ನಾಟಕದ ಝಲಕ್‌ಅನ್ನು ನಮ್ಮ ಮುಂದಿನ ಪೀಳಿಗೆಗೂ ತೋರಬಯಸಿದರೆ ಅದೂ ಸಾಧ್ಯ. ಬರೀ ಈ ವೆಬ್‌ಸೈಟ್‌ಗೆ …

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ

January 11, 2016 – 1:01 pm | By raghottam koppar

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ
                                                                       – ರಘೋತ್ತಮ್ ಕೊಪ್ಪರ್

ವಾಸ್ತು ಶಾಸ್ತ್ರ ಹಾಗೂ ಅದರ ಅನ್ವಯಿಕೆಯ ನಿಯಮ, ವಿಧಿ ವಿಧಾನಗಳನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜಿಜ್ಞಾಸೆ ನಡೆದಿದೆ. ಈಗಾಗಲೇ ಎಷ್ಟೋ ಜನರು ಇಮಾರತುಗಳನ್ನು ಕಟ್ಟಿದ ಮೇಲೆ ಕೆಡವಿದ್ದಾರೆ. ಅದಕ್ಕೆ ಕಾರಣ ವಾಸ್ತು ಕುರಿತು ಅನೇಕ ಆತಂಕಕಾರಿ ಭಾವನೆಗಳನ್ನು ಬೆಳೆಸಿಕೊಂಡು …

ಇನಿತೇನಿಲ್ಲವೊ ಈ ಚಳಿಗಾಲ

December 26, 2015 – 2:16 pm | By raghottam koppar

ಇನಿತೇನಿಲ್ಲವೊ ಈ ಚಳಿಗಾಲ
— ಶೈಲಜಾ ಹೂಗಾರ
ಇನ್ನೇನು ಕುಳಿರ್ಗಾಳಿ ಬೀಸುತಲಿದೆ ಅನ್ನುವಾಗಲೂ ಮಳೆಗಾಲದ ಹಸಿ ಹಸಿ ನೆನಪ ಮಳಿ ಹನಿಯುವುದು ನಿಂತಿರಲಿಲ್ಲ. ಹಳೆಯದರ ಹಳವಂಡ ಅಷ್ಟು ಬೇಗ ಹೋಗಲೊಲ್ಲದಲ್ಲ. ಆ ಗುಟುರುವ ಕಪ್ಪೆ, ಮಳೆಹನಿಗೆ ತೊಪ್ಪೆಯಾದ ಮನವೀಗ ಚಳಿಗೆ ನಿಧಾನವಾಗಿ ಹೇಗೆ ಹೊಂದಿಕೊಳ್ಳುವುದೆಂದು ಹಲವು ಹಾದಿ ಹೊಳಹು.

ಕನಸು ಕನವರಿಕೆಗಳಿಗೆಲ್ಲ …

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

December 26, 2015 – 9:33 am | By raghottam koppar

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು
                                                                               — ರಘೋತ್ತಮ್ ಕೊಪ್ಪರ್
ಇಂದಿನ ದಿನಗಳಲ್ಲಿ ಹಳೆಯ ಕಾಲದ ಸಂತೆಗಳು ಸಿಗುವುದು ತೀರಾ ವಿರಳ. ಎಲ್ಲೊ ಹಳ್ಳಿಗಳಲ್ಲಿ, ಸಣ್ಣ ನಗರಗಳಲ್ಲಿ ಕಾಣಬಹುದು. ಈಗ ಎಲ್ಲಾ ಬದಲಾಗಿಬಿಟ್ಟಿದೆ. ಸೂಪರ್ ಮಾರ್ಕೆಟ್‍ಗಳು ಲಗ್ಗೆ ಇಟ್ಟು ಆ ಹಳೆಯ ಮಾರುಕಟ್ಟೆಯ ಸೊಗಡನ್ನು ನಮ್ಮಿಂದ ದೂರವಾಗಿಸಿಬಿಟ್ಟಿವೆ. …

ಬೋರು – ನೀರು – ಹನಿಗವನ

December 21, 2015 – 7:48 am | By raghottam koppar

ಬೋರು – ನೀರು
ಊರು ಹೊರಗೊಂದು ಬೋರು
ಅದರಲ್ಲಿ ಸಿಹಿ ನೀರು
ಊರು ಒಳಗೆ ಹಲವು ಬೋರು
ಅವುಗಳಲ್ಲಿ ಇಲ್ಲ ನೀರು