Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by nandagarge

ಚಿನ್ಮಯಿ

July 26, 2017 – 5:57 am | By nandagarge

ಚಿನ್ಮಯಿ
ಕೈ-ಕಾಲು ಮುಖ ತೊಳೆದು ದೇವರ ಮುಂದೆ ‘ಶುಭಂ ಕರೋತಿ’ ಹೇಳುತ್ತಿದ್ದ ಮುದ್ದು ಚಿನ್ಮಯಿ ಅರ್ಧಕ್ಕೆ ನಿಲ್ಲಿಸಿ-“ಅಮ್ಮಾ, ಒನ್ಸ್ ಫಾರ್ ಆಲ್ ಅಂದ್ರೇನು?” ಎಂದಳು.
“ಮುದ್ದೂ, ದೇವರ ಸ್ತೋತ್ರ ಹೇಳುವಾಗ ಬೇರೆ ಮಾತಾಡಿದ್ರ ದೇವ್ರಿಗೆ ಸಿಟ್ಟು ಬರ್ತದ” ಎಂದ ನನ್ನ ಮಾತಿಗೆ- “ಏಯ್, ಹೋಗ ನೀ ಬರೇ ಸುಳ್ಳು ಮಾತಾಡ್ತಿ. …

ಸಾಪೇಕ್ಷ

October 15, 2016 – 5:21 am | By nandagarge

ಸಾಪೇಕ್ಷ
ಬಹಳ ದಿನಗಳ ನಂತರ ಆ ಆಫೀಸಿನಲ್ಲೊಂದು ನಿವೃತ್ತಿಯ ಸಮಾರಂಭ ಏರ್ಪಟ್ಟಿತ್ತು. ಸುಮಾರು ಹನ್ನೊಂದು ವರ್ಷಗಳಿಂದಲೂ ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತ ತಮ್ಮ ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದ ಶ್ರೀನಿವಾಸಮೂರ್ತಿಯವರದು. ‘ಅಜಾತ ಶತ್ರು’ ಎಂದೇ ಆಫೀಸಿನಲ್ಲಿ ಹೆಸರುವಾಸಿಯಾಗಿದ್ದ ಅವರ ಬಗೆಗೆ ಎಲ್ಲರೂ ಹೇಳುವವರೇ, ರೀತಿ ಬೇರೆ, ಅನುಭವ ಬೇರೆ, …

ನೂಪುರ

October 1, 2016 – 6:55 am | By nandagarge

ನೂಪುರ
ಸಂಗೀತ ಕ್ಷೇತ್ರದಲ್ಲಿ ನಾಲ್ಕು ದಶಕಗಳನ್ನೂ ಮೀರಿ ಸೇವೆ ಸಲ್ಲಿಸಿದ ರೇಶಮ್ ಬಾಯಿ ಅದಕ್ಕಾಗಿ ರಾಷ್ಟ್ರಪತಿ ಪಾರಿತೋಷಕವನ್ನು ಸ್ವೀಕರಿಸಿ ಅದೇ ಹಿಂತಿರುಗಿ ಬಂದಿದ್ದರು. ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗಿದ ಅವರು ಮತ್ತೆ ಏಕಾಕಿಯಾಗಿದ್ದರು. ಗಡಿಬಿಡಿ, ಸಂಭ್ರಮ, ಕರತಾಡನ ತುಂಬಿದ ಸಮಾರಂಭದಲ್ಲಿ ಕಳೆದುಹೋಗಿದ್ದ ಅವರಿಗೆ ಆಗ ಕಾಣದ ದಣಿವು, ಆಯಾಸ ಈಗ …

ಡರನಾ ಕ್ಯಾ?

September 24, 2016 – 5:22 am | By nandagarge

ಡರನಾ ಕ್ಯಾ?
ಸುಮಾರು ಎರಡು – ಮೂರು ದಿನಗಳಿಂದ ಇಬ್ಬರೂ ಸೊಸೆಯರು ಗುಸುಗುಸು ಮಾತಿನಲ್ಲಿ ಏನೋ ಚರ್ಚೆ ಮಾಡುತ್ತಿರುವುದು ಸುಶೀಲಮ್ಮನ ಗಮನಕ್ಕೆ ಬಂದಿತ್ತು. ಅವರು ಕೇಳಲು ಹೋಗಿರಲಿಲ್ಲ. ಸೊಸೆಯರೊಡನೆ ಅವರ ಸಂಬಂಧ ಅತ್ತೆಯಂತಿರದೇ ಒಬ್ಬ ತಾಯಿಯಂತೆಯೇ ಇತ್ತು. ಹೀಗಾಗಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೇಳುವಂಥ ವಿಷಯವಾದರೆ ಅವರಾಗಿಯೇ ಹೇಳುತ್ತಾರೆನ್ನುವುದು …

ವೈರಸ್

September 19, 2016 – 5:22 am | By nandagarge

ವೈರಸ್
“ಸಂಧ್ಯಾ….” ಅತ್ಯಂತ ಸಾವಕಾಶವಾಗಿ ಕರೆದ ಅತ್ತೆಯ ದನಿ ಕೇಳಿಸಿತು ಅವಳಿಗೆ. ಆದರೆ ಸಂಧ್ಯಾಳಿಗೇಕೋ ಎದ್ದು ಮಾತನಾಡಬೇಕೆನ್ನಿಸಲಿಲ್ಲ. ಮತ್ತೊಂದು ಬಾರಿ ಕರೆದು ಅವರು ಹಿಂತಿರುಗಿ ಹೋದರು. ಹೊರಬಾಗಿಲಿನ ಕೀಲಿ ಹಾಕಿ ಅವರು ಹೊರಟುಹೋಗಿದ್ದು ತಿಳಿಯಿತು. ವಿವರಣೆ ಇರುವ ಚೀಟಿ ಹೊರಗೆ ಟೇಬಲ್ ಮೇಲೆ ಇರುತ್ತದೆ. ಬೇಕೆಂದಾಗ ತಾನು ತನ್ನಲ್ಲಿರುವ ಕೀಲಿಯಿಂದ …

ಮರೆತ ಭೂಗೋಳ

September 12, 2016 – 5:59 am | By nandagarge

ಮರೆತ ಭೂಗೋಳ
‘ಸೂರ್ಯನು ಮುಳುಗಿದನೆಂದು ಅಳುತ್ತ ಕುಳಿತರೆ ತಾರೆಗಳನ್ನು ನೋಡುವ ಭಾಗ್ಯವೂ ನಿನಗೆ ಇಲ್ಲವಾಗುತ್ತದೆ’ -ಹಿಂದೊಮ್ಮೆ ಎಲ್ಲಿಯೋ ಓದಿದ ಮಾತು ಮನಸ್ಸನ್ನು ಆವರಿಸಿತ್ತು. ಆದರೆ ಮನಸ್ಸು ಅದೇ ನಿರಾಶೆ ಮತ್ತು ನಿರಾಸಕ್ತಿಯ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದೆ. ಒಮ್ಮೊಮ್ಮೆ ನನ್ನ ಅಸಹಾಯಕತೆಯ ಬಗೆಗೆ ನನಗೇ ಜಿಗುಪ್ಸೆಯುಂಟಾಗುತ್ತದೆ. ಈಗಲೂ ಸಹ ಪಕ್ಕದಲ್ಲಿರುವ ವಿನೀತಾ …

ಅನಿಂದಿತಾ

September 3, 2016 – 10:49 am | By nandagarge

ಅನಿಂದಿತಾ
ಅರವಿಂದನ ಮುಖದ ಮೇಲಿನ ಆತಂಕ, ಅಸಹಾಯಕತೆ, ಅವನ ಹೆಂಡತಿ ಯಾಮಿನಿಯ ಮುಖದ ಮೇಲಿನ ಅಸಹನೆ, ಇವೆರಡಕ್ಕೂ ತಾನೇ ಕಾರಣನೇನೋ ಎನ್ನುವ ಕೀಳರಿಮೆಯಿಂದ ಶೂನ್ಯದಲ್ಲಿ ದೃಷ್ಟಿ ನೆಟ್ಟು ಮಲಗಿದ ಅರವಿಂದನ ತಂದೆ ಸದಾಶಿವರಾಯರು, ಎಲ್ಲರನ್ನೂ ಮೌನವಾಗಿ ನೋಡಿದಳು ನರ್ಸ್ ಅನಿಂದಿತಾ. ಸದಾಶಿವರಾಯರಿಗೆ ಇಂಜೆಕ್ಷನ್ ಕೊಟ್ಟು ಹೊರಟರೆ ಅಂದಿಗೆ ಅವಳ ಡ್ಯೂಟಿ …

ನೀನೊಲಿದರೆ…

August 27, 2016 – 6:16 am | By nandagarge

ನೀನೊಲಿದರೆ…
ರಾತ್ರಿ ಮಲಗುವ ತಯಾರಿಯಲ್ಲಿದ್ದ ಜಗದೀಶನಿಗೆ ಫೋನ್ ಘಂಟೆ ಕೇಳಿ ರಿಸೀವರ್ ಎತ್ತಿದ. ಆರು ತಿಂಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಮುದ್ದಿನ ಮಗಳು ಜ್ಯೋತಿಯ ಫೋನದು.
“ಹಲೋ ಪಪ್ಪಾ, ಇವತ್ತು ರಾತ್ರಿ ಬಸ್ಸಿನಿಂದ ನಾನೂ ಮತ್ತು ಸೌರವ ಹುಬ್ಬಳ್ಳಿಗೆ ಬರ್ಲಿಕ್ಕೆ ಹತ್ತೀವಿ. ನಸುಕಿನಾಗ ಬರ್ತೇವಿ. ಗೇಟ್ ಕೀಲಿ …

ಕಹಿ ನೆನಪುಗಳು ಬೇಕು ಅರಿಯಲೀ ಬದುಕು

August 20, 2016 – 7:42 am | By nandagarge

ಕಹಿ ನೆನಪುಗಳು ಬೇಕು ಅರಿಯಲೀ ಬದುಕು
“ಸುನೀ ಚಹಾ” ಎಂದು ಕೂಗಿ ಮತ್ತೆ ಮುಸುಕೆಳೆದ ಅರವಿಂದ, ಚಹಾ ಬರುವವರೆಗೂ ಮತ್ತೈದು ನಿಮಿಷ ಮಲಗುವ ಆಸೆಯಿಂದ. ಕಿವಿಗಳು ಗೆಜ್ಜೆಯ ಶಬ್ದದ ನಿರೀಕ್ಷೆಯಲ್ಲಿದ್ದವು. ಯಾವುದೇ ಶಬ್ದವಿಲ್ಲ. ಮತ್ತೆರಡು ನಿಮಿಷಕ್ಕೆ “ಅರೂ ಚಹಾ” ಎಂದ ತಂದೆಯ ಧ್ವನಿ ಕೇಳಿ ಅಚ್ಚರಿಯಿಂದ ಮುಸುಕು ತೆಗೆದ.
“ಅಪ್ಪಾಜೀ …