Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by Hosmane Muttu

ನೆನಪು

November 7, 2016 – 6:56 am | By Hosmane Muttu

ನೆನಪು
“ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಿಗೂ, ಮುನ್ನೂರ ಅರವತ್ತೈದು ದಿನವೂ ಒಂದಲ್ಲಾ ಒಂದು ತಾಪತ್ರಯ ಇದ್ದಿದ್ದೇ ತಗಾ…” – ಅಮ್ಮ ಆಗಾಗ ಹೇಳುತ್ತಿದ್ದ ನಿಗೂಢ, ಸೂಕ್ಷ್ಮ ಮತ್ತು ಅರ್ಥಪೂರ್ಣ ಮಾತಿದು. ಯಾರಾದರೂ ಅಸಹಾಯಕ ಪರಿಸ್ಥಿತಿಯಲ್ಲಿದ್ದಾಗ, ವಂಚನೆಗೊಳಗಾಗಿಯೋ, ಕಾಯಿಲೆ-ಕಸಾಲೆಯೆಂದು ಕಂಗೆಟ್ಟು ನಿಂತಾಗಲೋ, ಒಳಗೊಳಗೇ ನೊಂದುಕೊಳ್ಳುತ್ತ ಸಮಾಧಾನ ಮಾಡುತ್ತಿದ್ದ ಅಮ್ಮನ ನೆನಪು ಈಗ ಮರುಕಳಿಸುತ್ತಿದೆ. …

ಹನಿ ಹನಿ-೨

October 25, 2016 – 5:10 am | By Hosmane Muttu

ಹನಿ ಹನಿ
ತಾಕತ್ತು
ದೊಡ್ಡ ದುಃಖದೆದುರು
ಸಣ್ಣ ಸಂತೋಷದ
ಕಿಮ್ಮತ್ತು
ಸೂರ್ಯನೆದುರು ಉರಿವ
ಮುಂಬತ್ತಿಯ ತಾಕತ್ತು!
ಮುಪ್ಪು
ಬಾಲ್ಯ, ಯೌವನದಲ್ಲಿ
ಕೂಡಿಟ್ಟ ಒಂದೊಂದೇ
ಅನುಭವವನ್ನು
ಎಣಿಸಿ ತೂಗಿ
ನೋಡುವ ಕಾಲ!
ಆಯಸ್ಸು
ಆಯಸ್ಸು ಹೀಗೇ
ಫ್ಯಾನ್ ನ ರೆಕ್ಕೆಯಂತೆ
ಸರಿಯತ್ತೆ
ಒಂದರ ಹಿಂದೊಂದರಂತೆ,
ಎಣಿಕೆಗೆ ಸಿಗದಂತೆ!

ಹನಿ ಹನಿ-೧

October 18, 2016 – 9:45 am | By Hosmane Muttu

ಹನಿ ಹನಿ
ಗಣಿತವೇ ಅಷ್ಟು
ಸಂಕಲನ, ವ್ಯವಕಲನ
ಮತ್ತೆ ಸಂಕಲನ
ಬದುಕಿನ
ಸಂಬಂಧಗಳೂ
ಕೂಡುತ್ತಾ, ಕಳೆಯುತ್ತಾ
ಮತ್ತೆ ಕೂಡುತ್ತಾ ಹೋಗುವ
ಸರಳ ಗಣಿತ…
ನಿತ್ಯ ಹಸಿರಾಗುವ ಪ್ರಕೃತಿಯಂತೆ.
∗   ∗   ∗
ಬೋಳಾದ ಮರಕೆ
ಮತ್ತೆ ಚಿಗುರ ಲೇಪಿಸಿ
ಹಸಿರಾಗಿಸಿದ ಕಾಲ
ನೋವ ಉಣಿಸಿದ ಮನಕೆ
ಮತ್ತೆ ತರಲಾರದೇಕೆ
ಹರುಷ?
∗   ∗   ∗
ಎಡೆ …

ಗ್ರೀಟಿಂಗ್ಸ್ ಒನಪು

October 13, 2016 – 6:31 am | By Hosmane Muttu

ಗ್ರೀಟಿಂಗ್ಸ್ ಒನಪು
ಮತ್ತೆ ಹಬ್ಬಗಳ ಹಂಗಾಮು. ಹಬ್ಬಗಳು ಮಾತ್ರ ತಮ್ಮ ಹಾಜರಿ ತಪ್ಪಿಸುವ ಮಾತೇ ಇಲ್ಲ. ಸರಳವೋ, ಅದ್ಧೂರಿಯೋ ಆಚರಣೆ ನಡೆದೇ ನಡೆಯುತ್ತದೆ. ಹಬ್ಬವೆಂದ ಕೂಡಲೇ ಕಣ್ಣಮುಂದೆ ಬರುವ ಆಚರಣೆ, ಸಂಪ್ರದಾಯ, ಖುಷಿ-ಸಂಭ್ರಮಗಳ ನಡುವೆ ನೆನಪಾಗುವುದು ಶುಭಾಶಯಗಳ ವಿನಿಮಯ. ಈಗಾದರೆ ಬೆಳಗ್ಗೆ ಎದ್ದೊಡನೆ ಒಂದು ಎಸ್.ಎಂ.ಎಸ್ ಅನ್ನು ನೂರಾರು ನಂಬರ್ …

ಆರೂ ಮೂರರ ಸೈಟು….!

October 4, 2016 – 6:32 am | By Hosmane Muttu

ಆರೂ ಮೂರರ ಸೈಟು….!
ಮುಂಜಾನೆಯ ವಾಕಿಂಗ್ ವೇಳೆ ಎದುರಾಗುತ್ತಿದ್ದ ಆತ ತನ್ನನ್ನು ರಿಯಲ್ ಎಸ್ಟೇಟ್ ಎಜೆಂಟ್ ಎಂದೇ ಪರಿಚಯಿಸಿಕೊಂಡ. ನಂತರ ಎದುರಾದಾಗ, ಕಂಡಾಗ ತಿಳಿನಗೆಯೊಂದಿಗೆ ‘ಹಾಯ್…! ಬಾಯ್…!’ ಅಷ್ಟಕ್ಕೆ ಮಾತು ಮುಗಿದು ಹೋಗುತ್ತಿತ್ತು. ಆ ದಿನ ಸಿಕ್ಕ ಆತ ಅದೇಕೋ ಮಾತನಾಡುವ ಹುಕಿಗೆ ಬಿದ್ದಂತಿದ್ದ. ಲೋಕಾಭಿರಾಮದ ಮಾತಾದರೂ, ಆತನ …

ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..!

September 27, 2016 – 5:25 am | By Hosmane Muttu

ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..!
ಹಿಂದೊಮ್ಮೆ ಒಬ್ಬ ರಾಜ ಆಗಾಗ ಮಂತ್ರಿಯನ್ನು ಕರೆದು ಆತನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಒಮ್ಮೊಮ್ಮೆ ಸಿಟ್ಟಿನಿಂದ ಒರಟಾಗಿಯೂ ವರ್ತಿಸುತ್ತಿದ್ದ. ಎಲ್ಲರೂ ಶಭಾಷ್ ಅಂದ ಕಾರ್ಯದಲ್ಲಿ ಕೂಡಾ ರಾಜ ಏನೋ ಕೊಂಕು ಕಾಣುತ್ತಿದ್ದ. ಯಾರ ಕಣ್ಣಿಗೂ ಕಾಣಿಸದ ಕೊರತೆ, ಮಹಾರಾಜರಿಗೇಕೆ ಹೀಗೆ ಗೋಚರಿಸುತ್ತೆ…? ಮಂತ್ರಿಯ …

ತಿಮ್ಮಜ್ಜನ ನೆರಳು

September 20, 2016 – 5:03 am | By Hosmane Muttu

ತಿಮ್ಮಜ್ಜನ ನೆರಳು
ಪೋಕು….! ಪೋಕು…! ಹೀಗೆನ್ನುತ್ತಾ ಗದ್ದೆಯಿಂದ ಮನೆಗೆ ಬರುವಾಗಲೆಲ್ಲಾ ನಮಗೆ ಎದುರಾಗುತ್ತಿದ್ದವ ನಮ್ಮೂರ ತಿಮ್ಮಜ್ಜ. ಆ ಹೊತ್ತಿಗೆ ತಿಮ್ಮಜ್ಜನಿಗೆ ಸುಮಾರು ಎಂಬತ್ತರ ಪ್ರಾಯ. ಆದರೂ ಗಟ್ಟಿ ಆಸಾಮಿ. ಬಹಳ ಸರಳ ವ್ಯಕ್ತಿಯಾದ ತಿಮ್ಮಜ್ಜ ಯಾವುದೇ ಕಾಲದಲ್ಲಾದರೂ ಉಡುವುದು ಮುಂಡು ಸಾಟಿ ಪಂಚೆ, ಹೊದ್ದುಕೊಳ್ಳಲು ಅಂತಹದೇ ಮತ್ತೊಂದು ದಟ್ಟಿ. ಗಾಂಧಿಯನ್ನು …

ಆವೇಗ ಕೊಚ್ಚಿಕೊಂಡು ಹೋಗದಿರಲಿ…!

September 13, 2016 – 6:04 am | By Hosmane Muttu

ಆವೇಗ ಕೊಚ್ಚಿಕೊಂಡು ಹೋಗದಿರಲಿ…!
ತರಗತಿ ಪ್ರಾರಂಭವಾಗಲು ಇನ್ನೂ ಕೊಂಚ ಸಮಯವಿತ್ತು. ಮಕ್ಕಳ ನೋಟ್ಸ್ ತಿದ್ದುತ್ತಾ ಸ್ಟಾಫ್ ರೂಮಿನಲ್ಲಿ ಕುಳಿತಿದ್ದ ಶಿಕ್ಷಕಿಯ ಗಮನ ತಟ್ಟನೆ ಸೆಳೆದದ್ದು, ಶಾಲೆಯ ಮುಂದಿನ ಅಂಗಳದ ಮರಳಲ್ಲಿ ಏಕಾಂಗಿಯಾಗಿ ಆಡುತ್ತಿದ್ದ ಶಾಲಾ ಆಯಾಳ ಎರಡೂವರೆ ವರ್ಷದ ಪುಟ್ಟ ಪೋರ.
ಮಕ್ಕಳ ವಯೋಸಹಜ ವರ್ತನೆಗಳ ಬಗ್ಗೆ ಕುತೂಹಲವಿದ್ದ ಕಣ್ಣು …

ತೊರೆದು ಜೀವಿಸಬಹುದೇ…!?

August 30, 2016 – 6:40 am | By Hosmane Muttu

ತೊರೆದು ಜೀವಿಸಬಹುದೇ…!?

ಪ್ರಿಯ ಹಂದಿಗೋಡು ವೆಂಕಟಗಿರಿ ಭಟ್ಟರಿಗೆ, ನೀವಿಲ್ಲದ ಈ ಹೊತ್ತಿನಲ್ಲೂ ನೋವಿನ ನರಳಿಕೆಯೊಂದು ನನ್ನನ್ನು ಕಾಡುತ್ತಿದೆಯೆಂದಾಗ, ನಿಮ್ಮ ಪ್ರಭಾವಲಯ ನನ್ನೊಳಗನ್ನು ಆಕ್ರಮಿಸಿ ವಿಸ್ತರಿಸಿದ ಪರಿಗೆ ವಿಸ್ಮಯಗೊಂಡಿದ್ದೇನೆ. ಬಿಡದೇ ಕಾಡುವ ನಿಮ್ಮ ಒಡನಾಟದ ನೆನಪುಗಳಿಗೆ ಅಕ್ಷರರೂಪ ನೀಡುತ್ತಿದ್ದೇನೆ. ನಿಮ್ಮ ವ್ಯಕ್ತಿತ್ವಕ್ಕೆ ಅಕ್ಷರಶಃ ತಾಳೆಯಾಗುವ
‘ಮಣಿಯದಿಹ ಮನವೊಂದು, ಸಾಧಿಸುವ ಹಟವೊಂದು

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!

August 23, 2016 – 6:43 am | By Hosmane Muttu

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!
ಆತನಲ್ಲಿ ಆಸೆ ಏನೋ ದಂಡಿಯಾಗೇ ಇತ್ತು. ಅದು ತಾನು ಏನೇನೋ ಆಗಬೇಕೆಂಬ ಬಯಕೆ. ಆದರೆ ಕೂತು ಎರಡಕ್ಷರ ಕಲಿಯಲಾರದ ಸೋಮಾರಿ. ಅವನಿಗೋ ಓದು ಹತ್ತದು, ಬಯಕೆ ಬತ್ತದು. ಹೀಗಾಗಿ ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬಂತಾಯಿತು ಆತನ ಸ್ಥಿತಿ. ಗುರುಗಳು ಹೇಳುವಷ್ಟು ಹೇಳಿದರು, ತಿದ್ದುವಷ್ಟು …