Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by kkoulagi

ಮುಂಜಾವು

August 16, 2018 – 5:02 am | By kkoulagi

ಮುಂಜಾವು
ಬರೀ
ಬೆಳಗಲ್ಲ…
ಅದೊಂದು
ಸೃಷ್ಟಿಯ
ಅದ್ಭುತ
ಪವಾಡ…
ಕತ್ತಲೆಯ
ಕರಗಿಸಿ
ಎಲ್ಲೆಡೆಗೂ
ಬೆಳಕನ್ನು
ಪಸರಿಸುವ
ಪ್ರಕೃತಿಯ
ಸುಂದರ
ಮುಖವಾಡ…

ಧನ್ಯವಾದ

August 9, 2018 – 4:54 am | By kkoulagi

ಧನ್ಯವಾದ
ಅರವತ್ತಾಗ್ಲಿ… ಎಪ್ಪತ್ತಾಗ್ಲಿ…
ಅದು ಬಿಡ್ರಿ ಬರೀ ಲೆಕ್ಕಾ…
ಇಷ್ಟೊಂದ್ ಜನಾ ಹಾರೈಸಿಬಿಟ್ರಿ…
ಹೂಟ್ಟಬ್ಬಾಯ್ತು ಬಲು ಚೊಕ್ಕಾ…
ಏಟೊಂದ್ ಪ್ರೀತಿ… ಎನೊಂದ್ ಅಕ್ರೆ…
ಹೀಗೇ ಬದುಕೆಲ್ಲಾ ಸಿಕ್ರೆ…
ಮಧುಮೇಹಿದ್ರೂ ತಿಂದ ಬಿಡಬೋದು…
ಒಂದೊಡ್ ಬೊಗಸೆ ಸಕ್ರೆ…
ಸಾವಿರಾ ಕೊಟ್ರೂ… ಸಾವಿರ ಕೊಂಡರೂ…
ಪ್ಯಾಟಿಲ್ ಸಿಗೋಲ್ಲ ಪ್ರೀತಿ…
ಎದೆಗೂಡಲ್ಲಿಟ್ಟು ಗುಟುಕು ಕೊಟ್ಟು…
ಕಾಯಬೇಕ್ …

ವಿಡಂಬನೆ

August 2, 2018 – 4:44 am | By kkoulagi

ವಿಡಂಬನೆ
ಹೆಣ್ಣು ಬೇಡವೆಂದು
ಮೂರೂ ಬಾರಿ
ಭ್ರೂಣ ತೆಗೆಸಿದ…
ನಾಕನೇಬಾರಿ
ಮಗ ಹುಟ್ಟಿದ
ಚನ್ನಾಗಿ ಉಂಡ… ಗುಂಡಗಾದ …
ಉಂಡಾಡಿ ಗುಂಡನಾದ…
ಈಗ ಕೆಲಸಕ್ಕೆ
ಬಾರದ ಮಗನಿಗಾಗಿ
ಅದೇ ಅಪ್ಪ ಕಂಡ ಕಂಡವರಿಗೆ
ಮೊರೆಯಿಡುತ್ತಿದ್ದಾನೆ
“ನನ್ನ ಮಗನಿಗೊಂದು
ಹೆಣ್ಣು ಕೊಡಿ!”

ನಮ್ಮವರು

July 26, 2018 – 5:20 am | By kkoulagi

ನಮ್ಮವರು
ಅಳೆದು, ತೂಗಿ
ಮೀನ – ಮೇಷದಿಂದ,
ಹಿಂದೆ – ಮುಂದೆ ನೋಡುತ್ತಾ
ಆಡಲೋ ಬೇಡವೋ
ಎಂದು ತಡೆತಡೆದು
ಒಂದೊಂದೇ ಪದ
ಪೋಣಿಸಿ ಮಾತಾಡುವುದು
ನನಗೆ ಸೇರುವುದಿಲ್ಲ…
ಏಕೆಂದರೆ …
ಹಾಗೆ ಮಾಡಬೇಕಾಗಿ
ಬಂದಾಗ ಎದುರಿಗೆ
“ನಮ್ಮವರೆನಿಸಿ-
ಕೊಂಡವರು
ಇರುವದಿಲ್ಲ…
ಹಾಗೂ
ನಮ್ಮ ಮಾತು
ನಮ್ಮವಾಗಿರುವದಿಲ್ಲ!
ಮನದ ಚಡಪಡಿಕೆಯ
ಮುಕ್ತ ದಾರಿಯಾಗಿರಬಹುದು…
ಹಾಗೆಯೇ
ಬರೆದ ಸಾಲುಗಳೆಲ್ಲ …

ಪ್ರೀತಿ – ಪ್ರೇಮ

July 19, 2018 – 5:56 am | By kkoulagi

ಪ್ರೀತಿ – ಪ್ರೇಮ
ಪ್ರೀತಿ-ಪ್ರೇಮ ಏನೇ ಇದ್ರೂ
‘ಮುಚ್ಚಿದ ಮೊಗ್ಗಿದ್ಧ್ಹಾಗೆ’
ತಾನೆ ತಾನು ಅರ್ಳ್ಕೊಬೇಕು
ಆಗಿನ್ ಕಾಲ್ದಾಗ ಹಾಗೇ…
ಅಂಥಾದ್ದೆಲ್ಲಾ ಈಗೇನಿಲ್ಲ
ಎಲ್ಲಾ ಬಟಾ ಬೈಲೂ…
ಪ್ರೇಮಾ ತೋರ್ಸೋಕೂ
ಒಂದಿನ ಬೇಕು – ಇಡೀ ದಿನಾ ಹುಯಿಲು…
ಯಾರದೂ ತಪ್ಪು ಅನ್ನೊಂಗಿಲ್ಲ
ಒಬ್ಬೊಬ್ರುದು ಒಂದೊಂದ್ ರೀತಿ…
ಬದಲಾದ್ ಕಾಲದ್ …

ಪರ್ಯಾಯ

July 12, 2018 – 4:40 am | By kkoulagi

ಪರ್ಯಾಯ
ಒತ್ತಿ ಒತ್ತಿ
ಕೂಗಿ ಹೇಳಿದ್ದೇ
ಸತ್ಯವಾಗಬೇಕಿಲ್ಲ…
ಗದ್ದಲವೂ ಅದಕ್ಕೆ
ಕಾರಣವಿರಬಹುದು…
ಕಂಡ ಕಣ್ಣೀರೆಲ್ಲ
ಕರುಣೆಯದೇ
ಆಗಬೇಕಿಲ್ಲ…
ಧೂಳಿಗೂ ಇರಬಹುದು …
ಮುಂಚಾಚಿದ ಹಸ್ತ ಸಹಾಯಹಸ್ತವೇ
ಆಗಬೇಕಿಲ್ಲ…
ಯಾಚನಾಹಸ್ತ-
ವಾಗಿರಲೂ ಬಹುದು…
ಆಡಿದ ಶಬ್ದಗಳೆಲ್ಲ
ಮಾತುಗಳಾಗ-
ಬೇಕಿಲ್ಲ…
ಮನದ ಚಡಪಡಿಕೆಯ
ಮುಕ್ತ ದಾರಿಯಾಗಿರಬಹುದು…
ಹಾಗೆಯೇ
ಬರೆದ ಸಾಲುಗಳೆಲ್ಲ
ಕವನವಾಗಬೇಕಿಲ್ಲ…
ಮನದ ತೆವಲಿಗೆ
ಕಂಡುಕೊಂಡ
ಪರ್ಯಾಯ
ರೂಪವಾಗಿರಲೂ-

ಪ್ರೀತಿ – ಪ್ರೇಮ

July 5, 2018 – 5:00 am | By kkoulagi

ಪ್ರೀತಿ – ಪ್ರೇಮ
ಪ್ರೀತಿ-ಪ್ರೇಮ ಏನೇ ಇದ್ರೂ
‘ಮುಚ್ಚಿದ ಮೊಗ್ಗಿದ್ಧ್ಹಾಗೆ’
ತಾನೆ ತಾನು ಅಳ್ರ್ಕೋಬೇಕು
ಆಗಿನ್ ಕಾಲ್ದಾಗ್ ಹಾಗೇ…
ಅಂಥಾದ್ದೆಲ್ಲಾ ಈಗೇನಿಲ್ಲ
ಎಲ್ಲಾ ಬಟಾ ಬೈಲೂ…
ಪ್ರೇಮಾ ತೋರ್ಸೋಕೂ
ಒಂದಿನ ಬೇಕು-ಇಡೀ ದಿನಾ ಹುಯಿಲು…
ಯಾರದೂ ತಪ್ಪು ಅನ್ನೊಂಗಿಲ್ಲ
ಒಬ್ಬೋಬ್ರುದು ಒಂದೊಂದ್ ರೀತಿ…
ಬದಲಾದ್ ಕಾಲದ್ ಜೊತೆ-ಜೊತೆಗೇನೆ
ಬದಲಾಗ್ಬಾರ್ದು …

ತುಡಿತ

June 29, 2018 – 5:26 am | By kkoulagi

ತುಡಿತ
“ನಾ ಏನನ್ನಾದ್ರೂ ಬರಿಲೇಬೇಕು
ಏನ್ ಬರೀಬೇಕಂತೆಳು…
ತಲೆಲ್ ತುಂಬಾ traffic jam
ಇನ್ನೂ ಸ್ವಲ್ಪೊತ್ತು ತಾಳು”
ಹೀಗೆ ಹೇಳಿ ಸುಮ್ನೆ ಕೂಡ್ಸಿ
ತಲೆಗೆ ಹಿಡಿಯುತ್ತೆ ತುಕ್ಕು…
ಹಂಗಂಥೇಳಿ ಇಲ್ಸಲದ್ ಬರದ್ರೆ
ಅದೂ ಒಂದ್ರೀತಿ ಸೊಕ್ಕು…
ತಲೆಲ್ ಸುತ್ತೋ ವಿಚಾರಾಂದ್ರೆ
ಹೊಟ್ಟೇಲ್ ಕೂಸಿದ್ಧಾಗೆ…
ಸಾಕಷ್ಟ್ ನೋವು ಕೊಟ್ಟಾಗೆನೇ
ಅದ್ಕೊಂದ್ ನೆಲೆ ಸಿಕ್ಕಾಗೆ …
ನಮ್-ನಿಮ್ …

ಚೂಟಿ – ಒಬ್ಬಳೇ ಮಗಳು – ಮನೆಬಾಡಿಗೆ – ಛಾವಣಿ

June 7, 2018 – 10:00 am | By kkoulagi

ಚೂಟಿ – ಒಬ್ಬಳೇ ಮಗಳು – ಮನೆಬಾಡಿಗೆ – ಛಾವಣಿ
ಮನೆಬಾಡಿಗೆಗೆ
ಬಂದವರ ಒಬ್ಬಳೇ ಮಗಳು
ಚೂಟಿಯಾಗಿರುವದನ್ನು
ನೋಡಿ ಮೊದಲದಿನವೇ
ಚಿತ್ತಾದ ನಮ್ಮ ಹೀರೋ….
ವಾರವೊಂದರಲ್ಲಿ
ಸಂಗೀತದ class ಸೇರಿ
ಛಾವಣಿ ಕಿತ್ತುವಂತೆ
ಆಲಾಪ ಶುರುವಾದದ್ದೇ ತಡ
ಭ್ರಮೆ ಕಳೆದು, ಅವನ
ಕಣ್ಣ ಕನಸುಗಳೆಲ್ಲಾ zero……..

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ

May 31, 2018 – 5:11 am | By kkoulagi

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ
ಓರ್ವ ತಿರುಕ ಊರಮುಂದಿನ
ಧರ್ಮಶಾಲೆಯಲ್ಲಿ ಒರಗಿದಾಗ ಕಂಡ
ಕನಸಿನಂತೆ ನನ್ನ ಕನಸಿನ ಕುದುರೆಯೂ
ನಾಗಾಲೋಟದಲ್ಲಿತ್ತು….
ಏನಾದರೂ ಸಾಹಸ ಮಾಡಿ business 
ಒಂದನ್ನು plan  ಮಾಡಿಯೇ ತಿರಬೇಕೆಂಬ
ಇತ್ತೀಚಿನ ತುಡಿತಕ್ಕೆ sudden ಆಗಿ
“ಅಯ್ಯೋ ಎಲ್ಲಿದೆ ಬಂಡವಾಳ??
ಎಲ್ಲಾ ಬರಿಗೈಲಿ ಮೊಳ …