Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by jogimane

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ

April 21, 2017 – 5:19 am | By jogimane

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ
ನಿರುಮ್ಮಳವಾಗಿ ಶುರುವಾದ ಒಂದು ಬೆಳಗ್ಗೆ ಅವಳು ತೇಲಿಕೊಂಡು ಊರಿನೊಳಗೆ ಬಂದಳು. ಅವಳನ್ನು ಸ್ವಾಗತಿಸುವುದಕ್ಕೆ ಊರಿನ ಬಾಗಿಲಲ್ಲಿ ಯಾರೂ ಇರಲಿಲ್ಲ. ದಿಡ್ಡಿ ಬಾಗಿಲ ಹತ್ತಿರ ಸುಂಕ ವಸೂಲಿ ಮಾಡುವವನು ತಿಂಡಿಗೋ ಸ್ನಾನಕ್ಕೋ ಹೋಗಿದ್ದ. ಹೀಗಾಗಿ ಅವಳು ನುಸುಳಿ ಒಳಗೆ ಬಂದದ್ದು ಯಾರಿಗೂ ಗೊತ್ತೇ …

ಜೀವನದ ಉದ್ದೇಶ ಏನು?

April 15, 2017 – 5:41 am | By jogimane

ಜೀವನದ ಉದ್ದೇಶ ಏನು?
ಹೀಗೆ ಪರ್ಪಸ್ ಹುಡುಕುತ್ತಾ ಹೊರಟವರೆಲ್ಲ ಕೊನೆಗೆ ಹೋಗಿ ಮುಟ್ಟಿದ ಜಾಗದ ಹೆಸರು ಸುಡುಗಾಡು. ಹಾಗಿದ್ದರೆ ಬದುಕು ಅಷ್ಟೊಂದು ಪರ್ಪಸ್‌ಲೆಸ್ಸಾ? ಯಾವ ಉದ್ದೇಶವೂ ಇಲ್ಲದೇ ನಾವಿಲ್ಲಿ ಇದೀವಾ? ಕಾಡಿನಲ್ಲಿ ದಂಡಿಯಾಗಿ ಬೆಳೆದ ಹುಲ್ಲನ್ನು ಜಿಂಕೆ ತಿನ್ನುತ್ತಾ, ಹೆಚ್ಚಿದ ಜಿಂಕೆಗಳನ್ನು ಹುಲಿ ಕಬಳಿಸುತ್ತಾ, ಹುಲಿಯನ್ನು ಮನುಷ್ಯ ಕೊಲ್ಲುತ್ತಾ, ಮನುಷ್ಯನನ್ನು …

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ!

April 7, 2017 – 5:23 am | By jogimane

ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ!
ಗುಡ್ಡ ಕಡಿದು ರಸ್ತೆ ಮಾಡಿದ ರಸ್ತೆಯಂತಿರುವ ಈ ಮಾತುಗಳ ಮೂಲಕ ಹಾದು ಹೋಗುವುದೆಂದರೆ ನನಗೆ ಅಂತಹ ಉತ್ಸಾಹವೇನೂ ಇಲ್ಲ.
ದಾರಿಯಿಲ್ಲದ ದಟ್ಟ ಕಾಡಿನಲ್ಲಿ ಹಕ್ಕಿ ಕೂಗಿನಂತಿರುವ ಕವಿತೆಯ ಹಾದಿ ನನಗೆ ಯಾವತ್ತೂ ತುಂಬ ಕುತೂಹಲಕರ.
***
ಸ್ನಾನದಲ್ಲಿ ಕದ್ದು ಕಿವಿಯೊಳಗೆ ಹೊಕ್ಕಿದ
ನೀರಿನ …

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು

March 31, 2017 – 5:15 am | By jogimane

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು
ಕನಕದಾಸರು ಉಡುಪಿಯ ಶ್ರೀಕೃಷ್ಣನನ್ನು ತಮ್ಮ ಕಡೆಗೆ ತಿರುಗಿಸಿಕೊಂಡದ್ದು, ಗೋಡೆಯಲ್ಲೊಂದು ಕಿಂಡಿ ಮೂಡಿ ಕೃಷ್ಣ ದರ್ಶನ ನೀಡಿದ್ದು ಜನಜನಿತ. ಹೊರಗಡೆ ನಿಂತು ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಕನಕದಾಸ ಹಾಡಿದ್ದೂ ಮನೆಮಾತು.
ಈ ಭಕ್ತಿಗೀತೆಯಲ್ಲೇ ಬರುವ ಮತ್ತೊಂದು ಸಾಲು ನಿಮಗೆ ನೆನಪಿರಬಹುದು; ಕರಿರಾಜ ಕಷ್ಟದಲಿ …

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ

March 24, 2017 – 5:16 am | By jogimane

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ
ಕತೆಗಾರರು ಬಡತನದಲ್ಲಿ ಹುಟ್ಟುತ್ತಾರೆ. ಬಡತನದ ಅನುಭವಗಳನ್ನು ಬರೆದು ಶ್ರೀಮಂತರಾಗುತ್ತಾರೆ. ಆ ಬಡತನದ ಅನುಭವಗಳನ್ನು ಓದಿದ ಶ್ರೀಮಂತರು ತಾವೆಷ್ಟು ಬಡವರು ಅಂದುಕೊಂಡು ಒಳಗೊಳಗೇ ಕೊರಗುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಗಾಲ್ಸ್ ವರ್ದಿ. ಜಾನ್ ಗಾಲ್ಸ್ ವರ್ದಿ.
ಇಂಗ್ಲಿಷ್ ನಾಟಕಕಾರ ಮತ್ತು ಕಾದಂಬರಿಕಾರ. 1932ರಲ್ಲಿ ಅವನಿಗೆ ನೊಬೆಲ್ …

ಸರಳವಾಗಿ ಸಾಗುವ ಕತೆಗಳ ನಿರುತ್ಸಾಹದಿಂದ ನೋಡಬಾರದು

March 17, 2017 – 5:25 am | By jogimane

ಸರಳವಾಗಿ ಸಾಗುವ ಕತೆಗಳ ನಿರುತ್ಸಾಹದಿಂದ ನೋಡಬಾರದು
ಕತೆಗಳು ವಿಚಿತ್ರವಾಗಿರುತ್ತವೆ. ಬಹಳಷ್ಟು ಕತೆಗಳಲ್ಲಿ ನಾವು ನಿರೀಕ್ಷಿಸುವಂಥ ನಾಟಕೀಯತೆಯೇನೂ ಇರುವುದಿಲ್ಲ. ಜೀವನ ಕಾಸರವಳ್ಳಿಯವರ ಸಿನಿಮಾದಂತೆ ಒಂದು ಲಯದಲ್ಲಿ ಸಾಗುತ್ತಲೇ ಇರುತ್ತದೆ. ಥಟ್ಟನೇ ಏನೋ ಬದಲಾವಣೆಯಾಗಬೇಕು. ಅಚ್ಚರಿಗಳು ಬೇಕು, ದಿಗ್ಭ್ರಮೆ ಹುಟ್ಟಿಸುವಂತ ತಿರುವುಗಳು ಬೇಕು. ಒಂದೊಂದು ಪಾತ್ರದ ವರ್ತನೆಯೂ ಬೆಚ್ಚಿ ಬೀಳಿಸಬೇಕು ಎಂದು ನಿರೀಕ್ಷಿಸುವವರಿಗೆ …

ಸೂರಿಯ ಷೇಕ್ಸ್ ಪಿಯರ್ ಸಂಜೆ

March 10, 2017 – 5:25 am | By jogimane

ಸೂರಿಯ ಷೇಕ್ಸ್ ಪಿಯರ್ ಸಂಜೆ
ಷೇಕ್ಸ್ ಪಿಯರ್ ಹೇಗಿದ್ದ. ಅವನು ನಮ್ಮ ಹಾಗೆ ಕೊಂಚ ಎಡವಟ್ಟನೂ ಸೋಮಾರಿಯೂ ಆಗಿರಲಿಲ್ಲವೇ? ಎಲ್ಲರೂ ಮೇಷ್ಟ್ರುಗಳ ಥರ ಇದ್ದು ಬಿಟ್ಟರೆ ಬರೆದದ್ದೆಲ್ಲ ಪಠ್ಯವಾಗುತ್ತದೆಯೇ ವಿನಾ ಕಾವ್ಯವಾಗುವುದು ಸಾಧ್ಯವಾ? ಬದುಕಲ್ಲಿ ಶಿಸ್ತು ಮುಖ್ಯವಾ? ಶಿಸ್ತಿನಿಂದ ಬದುಕುತ್ತಾ ಬದುಕುತ್ತಾ ಯಾಂತ್ರಿಕವಾಗುತ್ತಾ ಹೋಗುತ್ತೇವಾ? ಷೇಕ್ಸ್ ಪಿಯರ್ ಅಸಾಧ್ಯ ಅಶಿಸ್ತಿನ …

ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ

March 3, 2017 – 5:21 am | By jogimane

ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ
ಭಾಸ್ಕರ ಅಸ್ತಂಗತನಾದ ಎಂದು ಹೇಳಬೇಡಿ. ಸೂರ್ಯ ಕಂತಿದ ಎಂದು ಬರೆದರೆ ನಿಮ್ಮ ಗಂಟೇನು ಹೋಗುತ್ತದೆ ನೋಡುವಾ ಎಂದು ಸುಮಾರು ಇಪ್ಪತ್ತು ವರುಷಗಳ ಹಿಂದೆ ಶಿವರಾಮ ಕಾರಂತರು ಗುಡುಗಿದ್ದರು. ಹೀಗೆ ಹೇಳಿದ ಕಾರಂತರೇ ಕವಿತೆಗಳನ್ನೂ ಬರೆದಿದ್ದರು ಅಂದರೆ ಆಶ್ಚರ್ಯವಾಗುತ್ತದೆ. ಸರಳವಾಗಿ ಹೇಳುವುದೇ ಒಂದು ದೀಕ್ಷೆಯೋ …

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ…

February 25, 2017 – 5:29 am | By jogimane

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ…
ಇವತ್ತು ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ಅಂತ ಬರೆಯುವಾಗ ಸ್ವಲ್ಪ ಗೊಂದಲವಾಯಿತು. ನಾವು ಅನಾದಿಕಾಲದಿಂದ ಶೆಡ್ಯೂಲ್ ಅಂತ ಹೇಳಿಕೊಂಡು ಬಂದಿದ್ದನ್ನು ಈಗಿನ ಕಾಲದ ಹುಡುಗರು ಸ್ಕೆಡ್ಯೂಲ್ ಅನ್ನುತ್ತಾರೆ. ಅದು ಬಹುಶಃ ಅಮೆರಿಕನ್ ಉಚ್ಛಾರಣೆ ಇರಬಹುದು. ನಾವು ಕಲಿತದ್ದು ರೂಢಿಸಿಕೊಂಡದ್ದು ಬ್ರಿಟಿಷರ ಇಂಗ್ಲಿಷನ್ನು. ಆದರೆ ಪಿಜ್ಜಾ …

ರಾಂಗ್ ನಂಬರ್!

February 17, 2017 – 5:37 am | By jogimane
4

ರಾಂಗ್ ನಂಬರ್!

ಅದೆಲ್ಲ ಶುರುವಾದದ್ದು ಒಂದೇ ಒಂದು ಫೋನ್ ಕಾಲ್ನಿಂದ. ನಿವೃತ್ತ ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನವರಿಗೆ ಆ ಮುಸ್ಸಂಜೆ ಇದ್ದಕ್ಕಿದ್ದಂತೆ ಹಾಸನದಲ್ಲಿರುವ ತಮ್ಮನ ಜೊತೆ ಮಾತಾಡಬೇಕು ಅನ್ನಿಸಿತು. ಆಗಷ್ಟೇ ಸಂಜೆ ಕರಗಿತ್ತು, ರಾತ್ರಿ ಇಳಿದಿರಲಿಲ್ಲ. ಅವರ ಮನೆಯ ಹಜಾರದಲ್ಲಿ ಇನ್ನೂ ಬೆಳಕಾಡುತ್ತಿತ್ತು. ಆ ಹೊತ್ತಲ್ಲಿ ಮೇಷ್ಟರು ಕಿಟಕಿಯ ಬಳಿ ಕುಳಿತುಕೊಂಡು …