Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by Divakara Dongre

Divakara Dongre M. Printer, Publisher, Writer Uttarahalli, Bangalore

ಭಾವ ಮೌಕ್ತಿಕ

April 19, 2017 – 4:18 am | By Divakara Dongre
Bhava Mouktika

ಕಾರ್ಯಸಾಧನೆಯಲ್ಲಿ ಜತೆಯೊಳಿಹೆವೆಂದವರು
ಹಿಂತಿರುಗಿ ನೋಡಿದರೆ ಮಂಗಮಾಯ |
ಇನಿತು ಬೇಸರಬೇಡ ನಮಿಸು ಅವರನು ಮೊದಲು
ನೀನೆಲ್ಲ ಮಾಳ್ಪೆಯೆಂಬವರ ನಂಬಿಕೆಗೆ ||
ಅರೆ ಬಿರಿದ ಮೊಗ್ಗೊಂದು ನಕ್ಕು ಬಿಟ್ಟಿತು ತಾನು
ಬಿರಿದ ಹೂವನು ಮಾಲಿ ಕಿತ್ತ ಕ್ಷಣದಿ |
ಅದಕೇನು ಗೊತ್ತುಬಿಡಿ, ನಾಳೆ ಅದರದೆ ಸರದಿ
ಅರಳಿದವ ಮರಳಬೇಕೆಂಬುದೆ ನಿಯಮವಿಲ್ಲಿ ||
ಪರರ ಏಳ್ಗೆಯ ಕಂಡು ಖುಷಿಯ ಪಡುತಿರು ಮನವೆ
ನನಗಿಲ್ಲವೆಂಬುದನು ಅಂತೆ …

ನಿಮಗೂ ವಯಸ್ಸಾಯಿತು…!

April 7, 2017 – 5:23 am | By Divakara Dongre
Old age

ನಿಮಗೂ ವಯಸ್ಸಾಯಿತು…! ಯಾರಾದರು ಅಂದರೆ ನಖಶಿಖಾಂತ ಉರಿ ಹೊತ್ತಿಕೊಳ್ಳುತ್ತದೆ.
ವಯಸ್ಸಾಗುವುದೆಂದರೆ ನಾವು ಮುದುಕರಾಗುತ್ತಿದ್ದೇವೆ ಎಂದೇ ಅರ್ಥ. ಹಾಳಾದ್ದು ಪ್ರತಿ ನಿತ್ಯ ಕನ್ನಡಿ ನೋಡಿಕೊಳ್ಳುತ್ತೇವೆ, ಪ್ರತಿದಿನ ಶೇವ್ ಮಾಡಿಕೊಳ್ಳುತ್ತೇವೆ, ಕೂದಲಿಗೆ ಬಣ್ಣ ಹಚ್ಚಿಕೊಂಡರೂ ಎರಡು ದಿನ ಬಿಟ್ಟು ಕನ್ನಡಿ ನೋಡಿದಾಗ ಅದರ ಬುಡ ಬಿಳಿಯ ಬಣ್ಣದ್ದಾಗಿರುತ್ತದೆ! ನಮ್ಮ ಮುಖದ ಮೇಲೆ ನಾವು …

ಶಬರಿದತ್ತ ಫಲಾಶನ ರಾಮಾ…

April 4, 2017 – 3:46 pm | By Divakara Dongre
Shabari

ಎಲೆಮನೆಯನ್ನು, ಮನೆಯ ಮುಂದಿನ ಅಂಗಳವನ್ನೂ ಸಾರಿಸಿದ್ದೆಷ್ಟೋ ಸಲ. ಅವನು ಬರುತ್ತಾನೆಂದು ನಡುಗುವ ಕೈಗಳಿಂದ ರಂಗವಲ್ಲಿಯಿಟ್ಟು ಕಾದದ್ದು ಎಷ್ಟು ಸಲವೋ, ಕಾಡಿನಿಂದ ಅವನ ಪೂಜೆಗೆಂದು ಆಯ್ದು ತಂದ ಹೂಗಳು ನಿರ್ಮಾಲ್ಯವಾದದ್ದು, ಅವನಿಗಾಗಿ ತಂದ ತನಿವಣ್ಣುಗಳು ಬಾಡಿಹೋದದ್ದು ಎಷ್ಟು ಸಲವೋ, ಲೆಕ್ಕವಿಟ್ಟವರಾರು? ಹಣ್ಣು ಹಣ್ಣು ಮುದುಕಿ, ಅವನ ಕೋಮಲ ಪಾದಗಳಿಗೆ ನೋವಾಗಬಾರದೆಂದು …

ಬಾ…..ಯುಗಾದಿ

April 4, 2017 – 3:38 pm | By Divakara Dongre
ugadi

ಈ ದಿನದಿ ಹರುಷವಿದೆ ನೀನು ಬಂದಿಹೆಯೆಂದು
ಸುಖದ ಐಸಿರಿಯ ಬಾಗಿನವ ತಂದು
ನಮಗೆ ಬೇಕದುವೆಂಬ ಸ್ವಾರ್ಥ ಎಮ್ಮೊಳು ಇಲ್ಲ
ಹಂಚಿ ಬಿಡು ಜಗಕೆಲ್ಲ ಒಳಿತಾಗಲೆಂದು ||೧||
ಇರಲಿ ಹೂಬನದಲ್ಲಿ ನಿರತ ಕೋಗಿಲೆ ಹಾಡು
ಮಾವು ಚಿಗುರುವ ಸಮಯ ಒಲುಮೆ ಹಾಡು
ಬಿಸಿಲ ಧಗೆಯೊಳಗೆಲ್ಲ ಬೆಂದಿರುವ ಜನ ಮನಕೆ
ತಂಪನೀಯಲಿ ಮಂದಾನಿಲದ ಹಾಡು ||೨||
ನೆಲದಾಳದೊಳಗಿಳಿದ ಜೀವಜಲ ಚಿಲುಮೆಯದು
ನೆಲ …

ಕೃಷ್ಣ ಲಕ್ಷ್ಮಿಗೆ… (ಮೋದಿಯ ಬ್ರಹ್ಮಾಸ್ತ್ರವ ನೆನೆಸಿ….)

November 10, 2016 – 2:35 am | By Divakara Dongre

ಕೃಷ್ಣ ಲಕ್ಷ್ಮಿಗೆ…
(ಮೋದಿಯ ಬ್ರಹ್ಮಾಸ್ತ್ರವ ನೆನೆಸಿ….)
ಕ್ಷಮಿಸಿ ಬಿಡು ತಾಯಿ ಭರತ ಪುತ್ರನ ನೀನು
ನಿನ್ನ ಹೊರಗಟ್ಟುವ ಸಮಯ ಬಂದಿಹುದು ಈಗ
ಸಿರಿವಂತರಾ ಮನೆಯ ಸಂದುಗೊಂದುಗಳಲ್ಲಿ
ಅನವರತ ನೆಲೆಸುತಲಿ ಅವರ ಸಲಹಿದೆಯೊ ||೧||
ಕೃಷ್ಣ ಸುಂದರಿ ನೀನು ಕಪ್ಪೆಂದು ಜರೆಯುವರು
ನಿನ್ನ ಬಯಸುವವರಿಗೆಲ್ಲ ನೀ ನಿರತ ಒಲಿದೆ
ಮೋಸ ವಂಚನೆಯೆಂಬ ನಿತ್ಯ …

ಕುಂತಿ

October 13, 2016 – 12:56 pm | By Divakara Dongre

ಅಮ್ಮ ಹೇಳಿದುದಕ್ಕೆಲ್ಲ ನಾನು ಬರೀ ಹ್ಞೂ…ಗುಟ್ಟುತ್ತಿದೆ..
ನನ್ನ ಜಡೆ ಹಾಕುತ್ತಿದ್ದ ಅಮ್ಮ ನನ್ನ ಜಡೆ ಎಳೆದು ಅಂದರು, …ನಾನು ಹೇಳುವುದೆಲ್ಲವನ್ನು ಕೇಳುತ್ತಿದ್ದೀಯಲ್ಲ.
ಹ್ಞೂ…ಹೇಳು…
ಹ್ಞೂ.ಗುಟ್ಟುವುದಕ್ಕೂ ಕೇಳುವುದಕ್ಕೂ ಇದು ಕತೆಯಲ್ಲ, ವಾಸ್ತವ…
ಗೊತ್ತು ನನಗೆ…ಮುಂದುವರಿಸು…ನಾನಂದೆ.
ಅಮ್ಮ ಮತ್ತೆ ಪ್ರಾರಂಭಿಸಿದಳು..ನಿನ್ನ ನಿರ್ಧಾರದ ಮೇಲೆ ಈ ಮಗುವಿನ ಭವಿಷ್ಯ ನಿಂತಿದೆ. ಇಷ್ಟಕ್ಕೂ ಮಗು …

ಸುರಲೋಕದ ಪಾರಿಜಾತ…

July 5, 2016 – 3:23 pm | By Divakara Dongre
kanya

ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು
ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ
ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ
ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ?
ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು
ಯಾರ ಉದರದಲವಿತ ಚೆಲುವ ಗುಟ್ಟು
ಯಾರು ನಿನ್ನನು ಪಡೆದ ಭಾಗ್ಯವಂತರು ಹೇಳು
ಯಾರ ಪ್ರೇಮಗೀತೆಯ ಪಲ್ಲವಿಯು ನೀನು
ಚಂದ್ರಮುಖಿ ನೀನಹದು, ಕಣ್ಣಲವಿತಿಹ ತಾರೆ
ಅರೆ …

ಅಂಬಿಗ ನಾ ನಿನ್ನ ನಂಬಿದೆ…

June 2, 2016 – 5:39 am | By Divakara Dongre

ಅಂಬಿಗ ನಾ ನಿನ್ನ ನಂಬಿದೆ…
‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು ಹಾಡಿ ಹೊಗಳಿದ್ದಾರೆ. ಪ್ರವಚನ, ಸಂರ್ಕೀತನ, ಕಾವ್ಯ, ನೃತ್ಯ, ನಾಟಕ, ಶಿಲ್ಪ, ಚಿತ್ರ ಮುಂತಾದ ಕಲಾಪ್ರಕಾರಗಳಿಗೆ ರಾಮಾಯಣವೇ ಸ್ಪೂರ್ತಿ. ಭಾರತವೇ ಮಾತ್ರವಲ್ಲದೆ ಶ್ರೀಲಂಕಾ, ಇಂಡೊನೇಸಿಯಾ, ಥೈಲ್ಯಾಂಡ್, …

ಜೈ ರಾಧೇಕೃಷ್ಣ….

June 2, 2016 – 5:07 am | By Divakara Dongre

ಜೈ ರಾಧೇಕೃಷ್ಣ….
ದ್ವಾಪರ ಮುಗಿದ ನಂತರದ ಕಥೆಯಿದು.
ಕೃಷ್ಣ ಮತ್ತು ರಾಧೆ ಸ್ವರ್ಗದ ನಂದನವನದಲ್ಲಿ ಬಹಳ ದಿನಗಳ ನಂತರ ಭೇಟಿಯಾಗುತ್ತಾರೆ.
ಬಹಳ ವರ್ಷಗಳ ನಂತರದ ರಾಧೆಯ ಅನಿರೀಕ್ಷಿತ ದರ್ಶನದಿಂದ ಕೃಷ್ಣ ವಿಚಲಿತನಾಗುತ್ತಾನೆ.
ರಾಧೆ ಹಿಂದಿನಂತೆಯೇ ಪ್ರಸನ್ನಚಿತ್ತಳಾಗಿಯೇ ಇದ್ದಾಳೆ.
ಕೃಷ್ಣ ಗಲಿಬಿಲಿಗೊಂಡ, ರಾಧೆ ಮುಗುಳ್ನಕ್ಕಳು.
ಕೃಷ್ಣ ರಾಧೆಯನ್ನು ಮಾತನಾಡಿಸಬೇಕೆಂದುಕೊಳ್ಳುವಷ್ಟರಲ್ಲಿಯೇ
ರಾಧೆಯೇ …

ಹೆಸರಿನಲ್ಲೇನಿದೆ…?

June 1, 2016 – 2:34 pm | By Divakara Dongre
cartoon1

ಹೆಸರಿನಲ್ಲೇನಿದೆ…?
(ಗಂಭೀರವಾಗಿ ತಗೋಬೇಡಿ..ಪ್ಲೀಸ್!)
ಏನ್ ಮರಿ ನಿನ್ಹೆಸ್ರು…?
ನಾನ್ಹೇಳೊಲ್ಲ…!
ಜಾಣಮರಿ.., ಅಪ್ಪ ಅಮ್ಮ ನಿನ್ಗೊಂದು ಚಂದದ ಹೆಸ್ರಿಟ್ಟಿರ್ಬೇಕಲ್ಲ? ಹೇಳ್ಮರಿ…
ಊಹ್ಞು.., ನಾನ್ಹೇಳೊಲ್ಲ.., ಹೇಳೊಲ್ಲ.., ಹೇಳೊಲ್ಲ!
ಓ…ಹಾಗಾದ್ರೆ, ನಿನಗೆ ಹೆಸ್ರಿಲ್ಲಾ ಅನ್ನು
ಮತ್ತೆ..ಮತ್ತೆ..ಮತ್ತೆ.. ನನ್ಹೆಸ್ರು ಚಿನ್ಮಯಿ ಅಂತ!
ನೋಡಿದ್ರಾ…ಸಣ್ಣ ಮಗುವಿಗೂ ತನ್ನ ಹೆಸರಿನ ಮೇಲೆ ಎಷ್ಟೊಂದು ವ್ಯಾಮೋಹ!
ಬಹುಶಃ ಶಿಲಾಯುಗದಲ್ಲಿ, ಆದಿಮಾನವನ ಕಾಲದಲ್ಲಿ …