Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by ಧ್ವನಿ

ಚಿನ್ನದ ಕಡ್ಡಿ

March 20, 2017 – 6:20 am | By ಧ್ವನಿ

ಚಿನ್ನದ ಕಡ್ಡಿ
ಒಂದಾನೊಂದು ಕಾಲದಲ್ಲಿ ಗಂಡ ಹೆಂಡತಿ ಇದ್ದರು. ಮರ ಕಡಿದು ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಒಂದು ದಿನ ಗಂಡ ಅಡವಿಗೆ ಹೋಗಿ ಮಾವಿನ ಮರ ಕಡಿಯಲೆಂದು ಕೊಡಲಿಯನ್ನು ಎತ್ತಿದ. ಕೂಡಲೇ ಮರವು ಮಾತಾಡಿತು:
ಮಾಮರ: “ಅಣ್ಣಾ ಅಣ್ಣಾ ಮರ ಕಡಿವಣ್ಣ, ದಯಮಾಡಿ ಕಡಿಯಬೇಡ ನನ್ನ, ಅಣ್ಣಾ ಮರ ಕಡಿವಣ್ಣಾ, …

ಪುಟ್ಟರಾಜು ಮತ್ತು ಮೀನುಗಳು

March 6, 2017 – 5:55 am | By ಧ್ವನಿ

ಪುಟ್ಟರಾಜು ಮತ್ತು ಮೀನುಗಳು

ಒಂದು ಸುಂದರವಾದ ಊರು. ಊರಿನಾಚೆ ಒಂದು ಕಾಡು. ಕಾಡಿನ ಪಕ್ಕದಲ್ಲಿ ಒಂದು ಚಿಕ್ಕ ಮನೆ. ಪ್ರಕೃತಿಯ ಸೌಂದರ್ಯದ ಹಿನ್ನೆಲೆಯಲ್ಲಿ ಆ ಮನೆ ಇನ್ನಷ್ಟು ಅಂದವಾಗಿ ಕಾಣುತ್ತಿತ್ತು. ಆ ಮನೆಯಲ್ಲಿ ಅಪ್ಪ-ಅಮ್ಮನ ಜೊತೆಯಲ್ಲಿ ಪುಟ್ಟರಾಜು ಎಂಬ ಹುಡುಗನಿದ್ದ.
ಅವನು ದಿನವೂ ಶಾಲೆಗೆ ಹೋಗುತ್ತಿದ್ದ. ಹೋಗುವಾಗ, ಬರುವಾಗ …

ಸಾರ್ಥಕ ಬದುಕು

February 27, 2017 – 6:07 am | By ಧ್ವನಿ

ಸಾರ್ಥಕ ಬದುಕು
ತಿಪ್ಪ ಒಬ್ಬ ಕೂಲಿ. ಅವನು ಒಬ್ಬಂಟಿ, ಅವನಿಗೆ ಹೆಂಡತಿ ಮಕ್ಕಳು ಇರಲಿಲ್ಲ. ಬೆಟ್ಟದ ತಪ್ಪಲಿನ ಪುಟ್ಟ ಮನೆಯಲ್ಲಿ ಅವನು ವಾಸವಾಗಿದ್ದ. ತಿಪ್ಪ ಬಹಳ ಶ್ರಮ ಜೀವಿ. ಸೋಮಾರಿಯಾಗಿ ಅವನು ಎಂದೂ ಸಮಯ ಕಳೆಯುತ್ತಿರಲಿಲ್ಲ. ಊರವರು ಕೆಲಸಕ್ಕೆ ಕರೆದಾಗ ಅವನು ಹೋಗುತ್ತಿದ್ದ. ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ.  ಅವರು …

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

February 20, 2017 – 5:54 am | By ಧ್ವನಿ
bose

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

ನೇತಾಜಿ ಸುಭಾಷಚಂದ್ರ ಬೋಸ್ ಭಾರತೀಯ ಆಡಳಿತಾತ್ಮಕ ಪರೀಕ್ಷೆಯಾಗಿದ್ದ ‘ಐ.ಸಿ.ಎಸ್.’ (Indian Civil Service) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು.
ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ …

ಸನ್ಯಾಸಿ ನರಿ

February 13, 2017 – 5:52 am | By ಧ್ವನಿ
sanyasi nari

ಸನ್ಯಾಸಿ ನರಿ

ಅದೊಂದು ಭಯಂಕರ ಕಾಡು. ಆ ಕಾಡಿನ ಮೃಗಗಳಲ್ಲಿ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯ ಉಂಟಾಗಿ ಹಗೆ ಪ್ರಾರಂಭವಾಯಿತು. ಈ ಕಲಹದಿಂದ ಕಾಡುಪ್ರಾಣಿಗಳು ಬದುಕುವುದೇ ಕಷ್ಟವಾಯಿತು. ಸಿಂಹ, ಆನೆ, ಒಂಟೆ, ಕಾಡುಕುದುರೆ, ಹಾವು, ಕಾಡುಕೋಣ ಮುಂತಾದವು ಒಂದು ಗುಂಪಾದರೆ, ಹುಲಿ, ಚಿರತೆ, ಹೆಬ್ಬಾವು, ನರಿ, ಮುಂಗುಸಿ, ತೋಳ, ಜಿರಾಫೆ, ಮತ್ತಿತರ ಪ್ರಾಣಿಗಳದೇ …

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

January 30, 2017 – 6:55 am | By ಧ್ವನಿ

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

ಬಹಳ ಹಿಂದಿನ ಕಾಲದ ಕತೆ ಇದು. ಒಂದು ಊರಲ್ಲಿ ಒಬ್ಬ ರಾಜ ಇದ್ದ. ಬಹಳ ಒಳ್ಳೆಯ ರಾಜ. ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅವರ ಸುಖಕ್ಕಾಗಿ ಶ್ರಮಿಸುತ್ತಿದ್ದ.
ಒಂದು ದಿನ ಊರ ರೈತರೆಲ್ಲ ರಾಜನ ಬಳಿಗೆ ಬಂದು, ‘ಮಹಾಸ್ವಾಮಿ, ಊರಲ್ಲಿ ಗುಬ್ಬಿಗಳು ಬಹಳ …

ಜಾಣ ಬಾಲಕ

January 16, 2017 – 5:01 am | By ಧ್ವನಿ

ಜಾಣ ಬಾಲಕ
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನೊಬ್ಬ ನುರಿತ ಚಿತ್ರ ಕಲಾವಿದ ಆಗಿದ್ದನು. ಅವನು ಸುಂದರವಾದ ಜಾಗಗಳಿಗೆ ಹೋಗಿ ಅಲ್ಲಿ ಚಿತ್ರಗಳನ್ನು ಬರೆಯುತ್ತಿದ್ದನು.
ಒಂದು ದಿನ ರಾಜನು ಬೆಟ್ಟಗುಡ್ಡಗಳಿರುವ ಜಾಗಕ್ಕೆ ಹೋದನು. ಸುತ್ತಲಿನ ಬೆಟ್ಟಗಳು, ಮರಗಳು, ಹುಲ್ಲುಗಾವಲಿನ ಅಂದವನ್ನು ನೋಡುತ್ತಾ ಅವನು ಚಿತ್ರ ಬರೆಯಲು ತೊಡಗಿದನು. ತುಂಬಾ ಹೊತ್ತಿನವರೆಗೆ …

ಸಹನೆಯೇ ಗೆಲುವಿನ ದಾರಿ

January 9, 2017 – 5:23 am | By ಧ್ವನಿ

ಸಹನೆಯೇ ಗೆಲುವಿನ ದಾರಿ
ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೋಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರೂ ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು …

ಸೋಲನ್ನೇ ಕಾಣದ ತೆನಾಲಿರಾಮ

January 2, 2017 – 6:15 am | By ಧ್ವನಿ
tenaliram

ಸೋಲನ್ನೇ ಕಾಣದ ತೆನಾಲಿರಾಮ

ತೆನಾಲಿರಾಮನಿಗೆ ನಗುವುದು ನಗಿಸುವುದು ದೇವರು ಕೊಟ್ಟ ವರ. ಈ ಕಲೆಯಿಂದಲೇ ತನ್ನ ಜೀವನದಲ್ಲಿ ಎದುರಾದ ಎಷ್ಟೋ ಆಪತ್ತುಗಳಿಂದ ಪಾರಾಗಿದ್ದನು. ತೆನಾಲಿರಾಮ ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿ ಬಹಳ ಪ್ರೀತಿ ವಾತ್ಸಲ್ಯದಿಂದ ಇದ್ದನು. ಈ ವಿಷಯದ ಬಗ್ಗೆ ಆಸ್ಥಾನಿಕರಲ್ಲಿ ಅಸೂಯೆ ಇತ್ತು.
ಒಂದು ಬಾರಿ ಆಸ್ಥಾನದಲ್ಲಿ ಎಲ್ಲಾ ಪಂಡಿತರೂ …

ಕಿನ್ನರಲೋಕದಲ್ಲಿ ಬಂದ್!

December 26, 2016 – 5:30 am | By ಧ್ವನಿ

ಕಿನ್ನರಲೋಕದಲ್ಲಿ ಬಂದ್!
ಕವನ
ಪುಟ್ಟಾ ಓಡೀ ಓಡೀ ಬಂದು ಹೇಳಿದ:
“ಸಂಜೆ ನಾಕಕ್ಕೆ ಬರ್ತಾಳಂತೆ ಕಿನ್ನರ
ಕನ್ನೆ ಬಾನಿಂದೀ ಭೂಲೋಕಕ್ಕೆ”!
ಸರಿ ಸರಿ ಗಾಜಿನ ಟೇಬಲ್ ಮೇಲೆ
ಹೊಳೆಯುವ ಪ್ಲಾಸ್ಟಿಕ್ ಪ್ಲೇಟು!
ಸೇವಗೆ ಪಾಯಸ! ನುಚ್ಚಿನ ಕಡುಬಿಗೆ
ಹುರುಳೀ ಹಪ್ಳದ ಹ್ಯಾಟು!
ಬೆಳ್ಳೀಬಟ್ಟಲ ಹಾಲಿನ ಖೀರು!
ದೊನ್ನೆಯ ತುಂಬ ಉಪ್ಪಿಟ್ಟು