Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Author

Articles by arathivb

ಯಜ್ಞವೇ ಜೀವನನೀತಿ

April 17, 2018 – 5:29 am | By arathivb

ಯಜ್ಞವೇ ಜೀವನನೀತಿ
‘‘ದೇವತಾಯಜ್ಞಗಳ ಫಲವನ್ನು ಪಡೆದವನು ಅದನ್ನು ಸಹಮಾನವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ಭೋಗಿಸಿದರೆ ‘ಕಳ್ಳ’ನೆನಿಸುತ್ತಾನೆ’’ ಎಂದು ಕೃಷ್ಣನು ಎಚ್ಚರಿಸಿದ್ದನ್ನು ನೋಡಿದ್ದೇವೆ. ‘ಮಾತಾಪಿತೃಗಳ, ಗುರುಹಿರಿಯರ, ಬಂಧುಮಿತ್ರರ, ನೆರೆಕೆರೆಯವರ, ಸರ್ಕಾರದ, ಸಮಾಜದ, ಪಶುಪಕ್ಷಿಗಳ ಹಾಗೂ ನಿಸರ್ಗದ ಋಣವನ್ನು ಹೊತ್ತಿರುವ ನಾವು ನಮ್ಮ ಪುಣ್ಯವನ್ನೂ ಹಾಗೂ ನಾವು ಪಡೆದ ದೇವತಾಪ್ರಸಾದವನ್ನೂ ಸಹಮಾನವರೊಂದಿಗೆ ಹಂಚಿಕೊಳ್ಳುವುದೇ …

ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ

April 10, 2018 – 5:45 am | By arathivb

ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ
‘ದೇವತಾಯಜ್ಞದ ಮೂಲಕ ಭೋಗಯೋಗಾದಿಗಳನ್ನು ಪಡೆಯಬಹುದು. ಈ ಮೂಲಕ ಶ್ರೇಯಸ್ಸುಂಟಾಗುತ್ತದೆ ಎನ್ನುವ ವಿಚಾರವನ್ನು ಸೃಷ್ಟಿಕರ್ತನು ಸೃಷ್ಟಿಯ ಆದಿಯಲ್ಲೇ ಉಪದೇಶಿಸಿದ್ದನು’ ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ‘ಯಜ್ಞ ಎಂದರೇನು? ಅದರಿಂದ ಸರ್ವತೋಮುಖ ಶ್ರೇಯಸ್ಸು ಹೇಗೆ ಆಗುತ್ತದೆ?’ ಎನ್ನುವ ವಿಚಾರವನ್ನೂ ಚರ್ಚಿಸಿದ್ದೇವೆ. ಇದೇ ವಿಚಾರವನ್ನೇ ಭಗವಾನ್ ಕೃಷ್ಣನು ಮುಂದುವರೆಸುತ್ತಾನೆ;
ಇಷ್ಟಾನ್ …

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ

April 3, 2018 – 5:38 am | By arathivb

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ
ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ || (3.10-11)
ಎಂಬ ಶ್ಲೋಕವನ್ನು ಚರ್ಚಿಸುತ್ತಿದ್ದೆವು. ಬ್ರಹ್ಮನು ‘ದೇವತೆಗಳನ್ನು ಯಜ್ಞದ ಮೂಲಕ ತೃಪ್ತಿಪಡಿಸಿ’ …

ಯಜ್ಞ ಎಂದರೇನು?

March 27, 2018 – 5:46 am | By arathivb

ಯಜ್ಞ ಎಂದರೇನು?
‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ ಹೇಳುತ್ತಾನೆ:
ಸಹಯಜ್ಞಾಃ ಪ್ರಜಾಃ ಸೃಷ್ಟಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷವೊಸ್ತಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ …

ಅನಗತ್ಯ ಕರ್ಮವನ್ನು ಬಿಡು

March 20, 2018 – 9:05 am | By arathivb

ಅನಗತ್ಯ ಕರ್ಮವನ್ನು ಬಿಡು
‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ ಹೊರತು ಕರ್ತವ್ಯಕರ್ಮಗಳಿಂದಲ್ಲ’ ಎಂದು ಮುಂದೆ ಸೂಚಿಸುತ್ತಾನೆ:
ಯಜ್ಞಾರ್ಥಾತ್ ಕರ್ಮಣೊನ್ಯತ್ರ
ಲೋಕೊಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ
ಮುಕ್ತಸಂಗಃ ಸಮಾಚರ …

ನಿಯತ ಕರ್ಮಗಳನ್ನಾಚರಿಸು

March 13, 2018 – 5:01 am | By arathivb

ನಿಯತ ಕರ್ಮಗಳನ್ನಾಚರಿಸು
‘ಕರ್ಮವು ಪ್ರಕೃತಿಜನ್ಯ ಗುಣಗಳಿಂದ ಪ್ರೇರಿತವಾಗಿ ಅವಿರತವೂ ನಮ್ಮೊಳಗೂ ಹೊರಗೂ ನಡೆಯುತ್ತಲೇ ಇರುವ ಪ್ರಕ್ರಿಯೆ’ ಎನ್ನುವ ಕೃಷ್ಣನ ಮಾತನ್ನು ಅನುಸಂಧಾನ ಮಾಡಿದೆವು.
ಈ ನೈಷ್ಕರ್ಮ್ಯಭಾವದ ಮರ್ಮವನ್ನು ಅರಿಯದವರು ಅದನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು, ಕಷ್ಟವೆನಿಸುವಂತಹ ಧರ್ಮಕರ್ಮಗಳನ್ನು ಬಿಟ್ಟು ಕೂರುವ ಜಾಣತನ ತೋರುವುದುಂಟು! ಅಂತಹವರು ಬಾಹ್ಯದಲ್ಲಿ ಕರ್ಮವನ್ನು …

ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ

March 6, 2018 – 5:02 am | By arathivb

ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ
ನೈಷ್ಕರ್ಮ್ಯವೆಂದರೆ ‘ಸುಮ್ಮನಿರುವುದಲ್ಲ’, ಅಂತರಂಗದ ಸಂಕಲ್ಪಗಳ ಗಂಟುಗಳನ್ನು ನಿರ್ಲಿಪ್ತಕರ್ಮದ ಮೂಲಕ ಕರಗಿಸಿಕೊಂಡು ಮುಕ್ತವಾಗುವುದು. ಹಾಗೆ ಕೃತಕೃತ್ಯನಾದ ಮೇಲೆ ಮನುಷ್ಯನು ಯಾವುದೇ ಕರ್ಮಗಳಲ್ಲಿ ತೊಡಗಿದರೂ, ಆತ ಅವುಗಳಿಂದ ಬದ್ಧನಾಗುವುದಿಲ್ಲ. ಹಾಗಾಗಿ ಆತನು ಕರ್ಮ ಮಾಡಿಯೂ ‘ಮಾಡಿಲ್ಲ’ ಎಂಬ ನೈಷ್ಕರ್ಮ್ಯಸ್ಥಿತಿಯನ್ನು ಹೊಂದುತ್ತಾನೆ ಎಂಬ …

ಸುಮ್ಮನಿರುವುದೇ ನೈಷ್ಕರ್ವ್ಯುವೆ?

February 27, 2018 – 9:28 am | By arathivb

ಸುಮ್ಮನಿರುವುದೇ ನೈಷ್ಕರ್ವ್ಯುವೆ?
ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ:
ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ |
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ || (ಭ.ಗೀ.: 3.4)
‘ಕರ್ಮಗಳನ್ನು ‘‘ಪ್ರಾರಂಭ’’ ಮಾಡದೆ ಇದ್ದುಬಿಟ್ಟ ಮಾತ್ರಕ್ಕೆ ಮನುಷ್ಯನಿಗೆ ‘‘ನೈಷ್ಕರ್ವ್ಯು’’ಸ್ಥಿತಿಯು ಸಿದ್ಧಿಸದು. ಅಥವಾ ಕರ್ಮವನ್ನೇ …

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು

February 20, 2018 – 10:19 am | By arathivb

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು
ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ ತೊಡಗು’’ ಎನ್ನುತ್ತಿದ್ದೀಯೆ! ಯಾವುದಾದರೂ ಒಂದನ್ನು ನಿಶ್ಚಯವಾಗಿ ಹೇಳು’ ಎಂದು ಅಳಲುತ್ತಾನೆ. ಶ್ರೀಕೃಷ್ಣನು ಉತ್ತರಿಸುತ್ತಾನೆ:
ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ …

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!

February 14, 2018 – 5:21 am | By arathivb

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!
ದಕ್ಷತೆಯಿಂದ ಕರ್ಮ ಮಾಡುತ್ತ ನಿರ್ಲಿಪ್ತಭಾವದಿಂದಿರಬೇಕು. ಫಲತ್ಯಾಗ ಮಾಡಿ ಬ್ರಾಹ್ಮೀಸ್ಥಿತಿಯನ್ನು ಸಾಧಿಸಬೇಕು ಎನ್ನುವ ಕರ್ಮರಹಸ್ಯವನ್ನು ಆಚಾರ್ಯ ಕೃಷ್ಣನು ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯದಲ್ಲಿ ವಿವರಿಸಿದ್ದ. ಈ ಸಂದೇಶವೇ ಗೀತೆಯ ಸಾರವಾಗಿದೆ. ಇದಿಷ್ಟು ಬಾಳಿನಲ್ಲಿ ಅನುಷ್ಠಾನವಾದರೆ ಸಾಕು, ಐಹಿಕ-ಪಾರಮಾರ್ಥಿಕ ಜೀವನಗಳೆರಡೂ ಸಾರ್ಥಕ್ಯದ ಹಾದಿಯನ್ನು …