Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for February 2018

ಸುಮ್ಮನಿರುವುದೇ ನೈಷ್ಕರ್ವ್ಯುವೆ?

February 27, 2018 – 9:28 am | By arathivb

ಸುಮ್ಮನಿರುವುದೇ ನೈಷ್ಕರ್ವ್ಯುವೆ?
ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ:
ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ |
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ || (ಭ.ಗೀ.: 3.4)
‘ಕರ್ಮಗಳನ್ನು ‘‘ಪ್ರಾರಂಭ’’ ಮಾಡದೆ ಇದ್ದುಬಿಟ್ಟ ಮಾತ್ರಕ್ಕೆ ಮನುಷ್ಯನಿಗೆ ‘‘ನೈಷ್ಕರ್ವ್ಯು’’ಸ್ಥಿತಿಯು ಸಿದ್ಧಿಸದು. ಅಥವಾ ಕರ್ಮವನ್ನೇ …

ಅಪಘಾತವೂ ಒಂದು ಉದ್ದಿಮೆಯೇ

February 23, 2018 – 7:51 am | By arvindkulkarni

ಅಪಘಾತವೂ ಒಂದು ಉದ್ದಿಮೆಯೇ
ಭರ್ಜರಿ ಹೆದ್ದಾರಿಯಲ್ಲಿ ಒಂದು ಅಪಘಾತ. ಅದೂ ರಾತ್ರಿ 9.30ರ ಸುಮಾರು ಜರುಗಿದರೆ ಅನ್ನುವ ವಿಚಾರ, ಅನುಭವ ನೆನಸಿಕೊಂಡಾಗ, ಒಂದು ರೀತಿಯ ತಲ್ಲಣ, ಭಯ, ಹೆದರಿಕೆ ಮಾಮೂಲು. ಚಲನಚಿತ್ರಗಳಲ್ಲಿ ತೋರಿಸುವ ಕೊನೆಯ ಪೊಲೀಸ್ ಪ್ರವೇಶ ಮತ್ತು ಯು ಆರ್ ಅಂಡರ್ ಅರೆಸ್ಟ್! ಅನ್ನುವ ದೃಶ್ಯ ಸಹ ಮಾಮೂಲು. …

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು

February 20, 2018 – 10:19 am | By arathivb

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು
ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ ತೊಡಗು’’ ಎನ್ನುತ್ತಿದ್ದೀಯೆ! ಯಾವುದಾದರೂ ಒಂದನ್ನು ನಿಶ್ಚಯವಾಗಿ ಹೇಳು’ ಎಂದು ಅಳಲುತ್ತಾನೆ. ಶ್ರೀಕೃಷ್ಣನು ಉತ್ತರಿಸುತ್ತಾನೆ:
ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ …

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ

February 15, 2018 – 5:42 am | By kkoulagi

ಬಂಡಾಟ – ಮೈದಾನ – ಮೊಳೆ – ಧ್ವನಿವರ್ಧಕ
ನಮ್ಮನೆಯ ಮುಂದೆಯೇ ಒಂದು ಮೈದಾನ..
ಹೆಸರಿಗೆ ಮಕ್ಕಳ ಆಟಕ್ಕೆ, ನಡೆಯುವದೆಲ್ಲ
ದೊಡ್ಡವರ ಬಂಡಾಟ… ಹಾರಾಟ…
ಆಗಾಗ ಕಲ್ಲುತೂರಾಟ…..
ಹೊತ್ತು ಗೊತ್ತಿನ ಪರಿವೆಯಿಲ್ಲದೇ
ಧ್ವನಿವರ್ಧಕಗಳ ಚೀರಾಟ…
ಯಾವ ಸಾಮ, ದಾನ, ಭೇದ, ದಂಡೋಪಾಯಗಳಿಂದಲೂ
ಇದನ್ನು ಬದಲಿಸಲಾಗಿಲ್ಲ….
ಮೊದಲಿನಿಂದಲೂ ಮೊಳೆ ಹೊಡೆದುಕೊಂಡಂತೆ

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!

February 14, 2018 – 5:21 am | By arathivb

ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು!
ದಕ್ಷತೆಯಿಂದ ಕರ್ಮ ಮಾಡುತ್ತ ನಿರ್ಲಿಪ್ತಭಾವದಿಂದಿರಬೇಕು. ಫಲತ್ಯಾಗ ಮಾಡಿ ಬ್ರಾಹ್ಮೀಸ್ಥಿತಿಯನ್ನು ಸಾಧಿಸಬೇಕು ಎನ್ನುವ ಕರ್ಮರಹಸ್ಯವನ್ನು ಆಚಾರ್ಯ ಕೃಷ್ಣನು ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯದಲ್ಲಿ ವಿವರಿಸಿದ್ದ. ಈ ಸಂದೇಶವೇ ಗೀತೆಯ ಸಾರವಾಗಿದೆ. ಇದಿಷ್ಟು ಬಾಳಿನಲ್ಲಿ ಅನುಷ್ಠಾನವಾದರೆ ಸಾಕು, ಐಹಿಕ-ಪಾರಮಾರ್ಥಿಕ ಜೀವನಗಳೆರಡೂ ಸಾರ್ಥಕ್ಯದ ಹಾದಿಯನ್ನು …

ಮುತ್ಸದ್ಧಿ ಯಾರು

February 12, 2018 – 6:28 am | By arvindkulkarni

ಮುತ್ಸದ್ಧಿ ಯಾರು
ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವಿವರಗಳನ್ನು ಓದುತ್ತಿರುವಾಗ, ಚಾನೆಲ್ಲುಗಳ ಚರ್ಚೆ ಹೆಸರಿನಲ್ಲಿ ಹುಚ್ಚುಚ್ಚಾದ ವರ್ತನೆ, ಮಾತು ನೋಡಿದಾಗ ನಮ್ಮ ದೇಶದಲ್ಲಿ ಏನು ನಡೀತಾ ಇದೆ, ಏನಾದರೂ ಪ್ರಬುದ್ಧತೆ ಇದೆಯಾ ಅನ್ನುವ ಸನ್ನಿವೇಶ ಬಂದೊದಗಿದೆ. ಅಂದರೆ ಹೆಚ್ಚಿನ ನಾಯಕರು, ಮಂತ್ರಿಗಳು, ಪುಢಾರಿಗಳು, …

ಬೆಳಗುವ ಹಣತೆಗಳು

February 9, 2018 – 5:57 am | By rkashramdwd

ಬೆಳಗುವ ಹಣತೆಗಳು
ಹಣತೆ ಸೂರ್ಯನಷ್ಟು ಚಂದ್ರನಷ್ಟು ಗಾತ್ರ ಇಲ್ಲದಿದ್ದರೂ ತನ್ನ ಸುತ್ತಲೂ ಬೆಳಕನಿತ್ತು, ಇನ್ನೊಬ್ಬರಿಗೆ ಸಹಾಯಮಾಡುವುದು. ಹೀಗೆ ಪ್ರತಿಯೊಬ್ಬ ಮನುಷ್ಯರು ತನ್ನ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಸೇವೆಯನ್ನು ಸಲ್ಲಿಸಬಹುದು.
ಮನುಷ್ಯನ ಬದುಕಿನಲ್ಲಿ ಸುಖ-ದುಃಖಗಳು ನಾಣ್ಯದ ಎರಡು ಬದಿಗಳು ಇದ್ದಂತೆ. ಇವು ಒಂದಾದ ಮೇಲೆ ಒಂದರಂತೆ ಮರುಕಳಿಸುತ್ತಿರುತ್ತವೆ. ಇವುಗಳನ್ನು ನಿಭಾಯಿಸಿಕೊಂಡು …

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ

February 8, 2018 – 5:58 am | By kkoulagi

ಹಂಬಲಿಸು – ಚಿಂದಿ – ತಮಟೆ – ಕಾರಖಾನೆ
ಅವಿವೇಕ, ಅಸಹನೆ
ಅವಸರಗಳಂಥ
ಅಪಸವ್ಯಗಳಿಂದ
ಚಿಂದಿ ಚಿಂದಿಯಾಗುತ್ತಿರುವ
ಇಂದಿನ ಯುವ ಜನಾಂಗದ ಬದುಕನ್ನು
ಮರುಜ್ಜೀವನಗೊಳಿಸಿ ಚಂದವಾಗಿಸುವ
ಒಂದು “ಕಾರಖಾನೆ” ತೆಗೆಯಬಹುದಾಗಿದ್ದರೆ……..
ಇಂಥದೊಂದು ಹಂಬಲಿಕೆ, ಗ್ರಹಿಕೆ
ನನ್ನನ್ನು ಸದಾ ಕಾಡುತ್ತಿರುತ್ತದೆ…
ಮರುಕ್ಷಣವೇ ಬದುಕೆಂದರೆ ಬಣ್ಣಗೆಟ್ಟ ಕಾರಲ್ಲ..
ಅದನ್ನು ಯಾರೋ ಬದಲಿಸಿ ತಮಟೆ ಹೊಡೆದು

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು

February 6, 2018 – 5:42 am | By arathivb

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು
ಮೋಹದ ನೆಲೆಯಲ್ಲೇ ಆಲೋಚಿಸುವ ಸಾಮಾನ್ಯರ ಪಾಲಿಗೆ ಉನ್ನತಸತ್ಯಗಳು ‘ರಾತ್ರಿ’(ರಹಸ್ಯ) ಎನಿಸಿದರೆ, ನಿರ್ಮೋಹರಾದ ಮುನಿಗಳ ಪಾಲಿಗೆ ಅದು ಸ್ಪಷ್ಟವಾಗಿ ಅರ್ಥವಾಗುವ ‘ಹಗಲು’. ಅನಿತ್ಯದ ಕುರಿತಾದ ಸಾಮಾನ್ಯರ ವ್ಯಾಮೋಹವು ಮುನಿಗಳಿಗೆ ಕತ್ತಲೆಯಂತೆ ಕಾಣಬರುತ್ತದೆ- ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ-
ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ …

ಯಾಕ ಹಿಂಗ?

February 5, 2018 – 6:44 am | By arvindkulkarni

ಯಾಕ ಹಿಂಗ?
ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. ಈ ಸಣ್ಣ ಅನಸೋ ಪ್ರಶ್ನಿ, ರಾಷ್ಟ್ರಪತಿಗಳಿಂದ …