Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for October 2017

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ

October 31, 2017 – 6:17 am | By arathivb

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ
‘ಬುದ್ಧಿಯೋಗವನ್ನಾಶ್ರಯಿಸು’ ಎಂದು ನಿರ್ದೇಶಿಸುತ್ತಿದ್ದ ಕೃಷ್ಣನು ಹೀಗೆ ಮುಂದುವರೆಸುತ್ತಾನೆ-
ಬುದ್ಧಿಯುಕ್ತೋ ಜಹಾತೀಹ ಉಭೇಸುಕೃತದುಷ್ಕೃತೇI
ತಸ್ಮಾದ್ಯೋಗಾಯಯುಜ್ಯ ಸ್ವಯೋಗಃ ಕರ್ಮಸು ಕೌಶಲಮ್ II
ಬುದ್ಧಿಯುಕ್ತನಾದವನು ಸುಕೃತ-ದುಷ್ಕೃತಗಳನ್ನು ಇಹದಲ್ಲೇ ತ್ಯಜಿಸುತ್ತಾನೆ. ನೀನು ಯೋಗಕ್ಕಾಗಿ ಪ್ರಯತ್ನಿಸು. ಕರ್ಮಕೌಶಲವೇ ಯೋಗ.
ಬುದ್ಧಿಯುಕ್ತನು ಎಂದರೆ ಬುದ್ಧಿಯೋಗವನ್ನರಿತ ಜ್ಞಾನಿ, ಸುಕೃತ …

ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು

October 30, 2017 – 10:35 am | By arvindkulkarni

ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು
“ನೀನು ಹಾರಲು ಅಸಮರ್ಥ ಎಂದು ಸಂಶಯಪಟ್ಟರೇ ನೀನೆಂದಿಗೂ ಹಾರುವದೇ ಇಲ್ಲ”
“ಮಗು, ನೀನು ಹೆಚ್ಚು ಓದಿದಂತೆ ಹೆಚ್ಚು ತಿಳಿದುಕೊಳ್ಳುತ್ತಿ. ಹೆಚ್ಚು ತಿಳಿದುಕೊಂಡಂತೆ ನೀ ಜಗತ್ತನ್ನು ಎದುರಿಸುವ ಶಕ್ತಿ ಪಡೆಯುತ್ತಿ”
ಕೆಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಒಂದು ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಿತು. ನಾನು ಹೋಗಿ …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭: ಗೋಷ್ಠಿ ೫ :ಚಿತ್ರ ಕಲಾಕೃತಿಗಳು ಏನು ಹೇಳುತ್ತವೆ?

October 26, 2017 – 10:02 pm | By ಧಾರವಾಡ ಸಾಹಿತ್ಯ ಸಂಭ್ರಮ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭: ಗೋಷ್ಠಿ ೫ :ಚಿತ್ರ ಕಲಾಕೃತಿಗಳು ಏನು ಹೇಳುತ್ತವೆ?
ಲಕ್ಷ್ಮಣ ಬದಾಮಿ
ಶಿವಾನಂದ ಬಂಟನೂರ

ಸಂದಿ – ಪ್ರತಿಮೆ – ಅನುಕೂಲಸಿಂಧು – ರಣವೀಳ್ಯ

October 26, 2017 – 4:56 am | By kkoulagi

ಸಂದಿ – ಪ್ರತಿಮೆ – ಅನುಕೂಲಸಿಂಧು – ರಣವೀಳ್ಯ
ಇಳಿಬಿಟ್ಟ ಪರದೆಗಳ
ಪದರುಗಳಲ್ಲಿ,
ಸಂದಿ ಗೊಂದಿಗಳಲ್ಲಿ,
ಚಂದಕ್ಕಿಟ್ಟ ಪ್ರತಿಮೆಗಳ
ಹಿಂದುಮುಂದು,
ಹಗಲೆಲ್ಲ ಅಡಗಿಕೊಂಡು
ಅನುಕೂಲಸಿಂಧು ನೋಡಿ
ಹೊರಬಿದ್ದು
ಕಂಡಕಂಡ ಹಾಗೆ
ಆಕ್ರಮಣ ಮಾಡಿ
ಕೈಗೆ ಸಿಗದೇ
ಆಟವಾಡಿಸುತ್ತಿರುವ
ಸೊಳ್ಳೆ ದಂಡಿನಮೇಲೆ
ಯುದ್ಧಸಾರಲು
ರಣವೀಳ್ಯಪಡೆದಿದ್ದೇನೆ………
ಏನಕೇನ ಪ್ರಕಾರೇಣ
ಗೆಲುವು ನನ್ನದಾಗಲೇಬೇಕು….
ಪೊಡಮಡುವೆ….

ಹಕ್ಕಿ ಹಾರುತಿದೆ ನೋಡಿದಿರಾ

October 25, 2017 – 6:17 am | By arvindkulkarni

ಹಕ್ಕಿ ಹಾರುತಿದೆ ನೋಡಿದಿರಾ

ದೇಶದಾದ್ಯಂತ 800 ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದು ಮಾಡುವ ಬಗ್ಗೆ ಪತ್ರಿಕಾ ವರದಿಗಳು ಸಾಕಷ್ಟು ಬಂದಿವೆ. ಕೂಲಂಕುಷವಾಗಿ ಪರಿಶೀಲಿಸಿದರೆ ಕೆಲವು ಪಾಲಿಟೆಕ್ನಿಕ್ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿಯ ಕೆಲವು ಕೋರ್ಸುಗಳು ಮಾತ್ರ ಮುಚ್ಚಲು ಆದೇಶಿಸಲಾಗಿದೆ. ಪೂರ್ತಿಯಾಗಿ ಮುಚ್ಚುವುದು ಅಲ್ಲ, ಯಾವ ಕೋರ್ಸುಗಳಿಗೆ ಪ್ರವೇಶ ಕಡಿಮೆ, ನಿಕೃಷ್ಟವಾಗಿವೆ ಅವುಗಳಿಗೆ …

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ

October 24, 2017 – 5:19 am | By arathivb

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ
‘ಜೀವನದ ಆಗು ಹೋಗುಗಳಿಗೆ ನಾವು ಒಗ್ಗಿಕೊಳ್ಳುತ್ತ ಅಲ್ಲಿನ ಸಿದ್ಧ್ಯಸಿದ್ಧಿಗಳ ವಿಷಯದಲ್ಲಿ ಸಮವಾಗಿ ಇರಬೇಕು’ ಎನ್ನುವ ಪಾಠವನ್ನು ಕೃಷ್ಣನು ಕಲಿಸಲಾರಂಭಿಸಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ – ಸಮತ್ವಂ ಯೋಗ ಉಚ್ಯತೆ(ಸಮತ್ವವೇ ’ಯೋಗ’). ‘ಯೋಗ’ವೆಂದರೆ ಯಾವುದೋ ‘ಬೆರಗುಗೊಳಿಸುವ ಸಾಧನಾಕ್ರಮವಾಗಿರಬೇಕು’ ಎಂದೇ ಸಾಮಾನ್ಯವಾಗಿ ಭಾವಿಸುತ್ತೇವೆ. …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭: ಗೋಷ್ಠಿ ೨ :ನನಗೆ ಬಂದ ಸಾಹಿತಿಯೊಬ್ಬರ ಪತ್ರ

October 23, 2017 – 12:31 am | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೨ :ನನಗೆ ಬಂದ ಸಾಹಿತಿಯೊಬ್ಬರ ಪತ್ರ
ನಾ. ಡಿಸೋಜಾ
ವೀರಣ್ಣ ರಾಜೂರ
ವೀಣಾ ಶಾಂತೇಶ್ವರ
ಮಲ್ಲಿಕಾರ್ಜುನ ಹಿರೇಮಠ
ಮೀನಾ ಮೈಸೂರು
ನಿರ್ದೇಶಕರು : ಬಿ. ಆರ್. ಲಕ್ಷ್ಮಣರಾವ್
ನೋಡಿರಿ ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ ರ ಗೋಷ್ಠಿ “ನನಗೆ ಬಂದ ಸಾಹಿತಿಯೊಬ್ಬರ ಪತ್ರ” ವಿವಿಡ್ಲಿಪಿ ಮಿಂಬರಹದಲ್ಲಿ…

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು

October 17, 2017 – 9:59 am | By arathivb

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು
‘ಯೋಗದಲ್ಲಿ ಪ್ರಜ್ಞೆಯನ್ನು ಕೇಂದ್ರೀಕರಿಸಿ, ಫಲಗಳಿಗೆ ಸಂಬಂಧಗಳಿಗೆ ಅಂಟಿಕೊಳ್ಳದೆ ಕರ್ಮವನ್ನು ಮಾಡು’ ಎಂದು ಕೃಷ್ಣನು ಕರ್ಮಕೌಶಲದ ರಹಸ್ಯವನ್ನು ಹೇಳುತ್ತಿದ್ದ. ಕರ್ಮದ ಹಾದಿಯಲ್ಲಿ ಬರುವ ವ್ಯಕ್ತಿ-ವಸ್ತು-ಲಾಭಾಲಾಭಗಳ ಬಗ್ಗೆ ಬೆಳೆಯುವ ಮಮಕಾರ-ವ್ಯಾಮೋಹಗಳು ನಮ್ಮನ್ನು ತಪ್ಪು ನಿರ್ಣಯಗಳಿಗೆ ಎಳೆಯುತ್ತವೆ. ಪರಿಣಾಮವನ್ನೂ ನೆಮ್ಮದಿಯನ್ನೂ ಕೆಡಿಸುತ್ತದೆ! ‘ಇವರು ಬೇಕಾದವರು’, ‘ಇವರು ಬೇಡದವರು’, …

ಪಂಜರದ ಗಿಳಿ

October 16, 2017 – 11:10 am | By Uma Bhatkhande

ಪಂಜರದ ಗಿಳಿ
ಪಂಜರದೊಳೊಂದು ಗಿಳಿ
ಮೂಕ ವೇದನೆಯಿಂದಲಿ
ಬಾನ ತುದಿಯನೆ ನೋಡುತಲಿರೆ
ಬಳಗಗಳೆದರ ಕೂಡಿ ಬಾನಲಿ ಹಾರುತಿರೆ
ಒಂಟಿ ತಾನೆನ್ನುವ ಭಾವದಲಿ
ಮುಗಿಲ ತಾಯಿಯ ಸ್ಮರಿಸಿ ದುಃಖದಲಿ
ಗಿಡ, ಮರ, ಪೊಟರೆ ಗೂಡು
ಆಹಾ! ಎಂಥ ಸುಖಕರ ಆ ಜೀವನವು.
ಪಂಜರದೊಳು ನಾನಿಂದು
ಕಾನನದ ಸೊಬಗು ಕಾಣೆ
ವನದ ಹಣ್ಣು, ಪುಷ್ಪ ಕಾಣೆ
ಹಸಿರು …

ದಾರುಣ – ಬಡಗಿ – ಲಾಯ – ಪಾಳೆಯ

October 12, 2017 – 8:57 am | By kkoulagi

ದಾರುಣ – ಬಡಗಿ – ಲಾಯ – ಪಾಳೆಯ
ಯುದ್ಧದಲ್ಲಿ ದಾರುಣವಾಗಿ
ಗಾಯಗೊಂಡು ಲಾಯವನ್ನು
ಕಾಯಂ ಆಗಿ ಸೇರಿದ
ಕುದುರೆಯಂತಾಗಿದೆ
ಈ ಮನಸ್ಸು…
ಯಾವದಾದರೂ
ಪಾಳೆಯಗಾರ
ಕರುಣೆತೋರಿ
ಆರೈಕೆಮಾಡಿ
ಎದ್ದುನಿಲ್ಲುವಂತೆ
ಮಾಡುತ್ತಾನೋ ..
ಇಲ್ಲ………
ಕಟುಕ ಬಡಗಿಯೊಬ್ಬ
ಪುನಃ ಏಳದಂತೆ
ಉತ್ಸಾಹ , ಶಕ್ತಿಗಳಿಗೆ
‘ಕೊನೆಯಮೊಳೆ’
ಹೊಡೆಯುತ್ತಾನೋ
ಆತಂಕ
ನನಗೆ..