Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for September 2017

ಕರ್ಮಣ್ಯೇವಾಧಿಕಾರಸ್ತೇ

September 19, 2017 – 5:32 am | By arathivb

ಕರ್ಮಣ್ಯೇವಾಧಿಕಾರಸ್ತೇ
ವೇದಜ್ಞಾನವೂ ಕರ್ಮಗಳೂ ಅನುಭವದಲ್ಲೇ ಪರ್ಯವಸಾನವಾಗಬೇಕೇ ಹೊರತು “ಕರ್ಮಠತ್ವ”ಕ್ಕೆ ಜಾರಬಾರದು’ ಎನ್ನುವ ನೀತಿಯನ್ನು ಕೃಷ್ಣನು ಮನವರಿಕೆ ಮಾಡುಕೊಡುತ್ತಿದ್ದಷ್ಟೆ? ಹಾಗಾದರೆ, ಕರ್ಮಗಳನ್ನು ಸುತರಾಂ ಮಾಡಲೇಬೇಕಿಲ್ಲ? ಎನ್ನುವುದು ಕೃಷ್ಣನ ಮಾತಿನ ಅರ್ಥವೇ? ಕೃಷ್ಣನ ಮುಂದಿನ ಮಾತೇ ಇದಕ್ಕೆ ಸ್ಪಷ್ಟತೆ ಕೊಡುತ್ತದೆ.
ಕರ್ಮಣ್ಯೇವಾಧಿಕರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂಃ ಮಾ ತೇ …

ಬಾಲ್ಯದ ನೆನಪಿನಂಗಳದಲ್ಲಿ.

September 18, 2017 – 5:42 am | By Uma Bhatkhande

ಬಾಲ್ಯದ ನೆನಪಿನಂಗಳದಲ್ಲಿ.

ಬಾಲ್ಯ ಅನ್ನೊದೇ ಹಾಗೆ! ಆಗಾಗ ಮರುಕಳಿಸುತ್ತಲೇ ಇರುತ್ತದೆ. ಎಷ್ಟೇ ವಯಸ್ಸಾದವರಾದರೂ ಯುವಕ, ಯುವತಿಯರೂ ಬಾಲ್ಯದ ನೆನಪಿನಂಗಳದಲ್ಲಿ ಈಜದೇ ಇರಲು ಸಾಧ್ಯವಿಲ್ಲ. ಒಂದು ಅತ್ಯಂತ ಸಿಹಿ ಘಟನೆ ಅಥವಾ ಅತ್ಯಂತ ಸಿಹಿ ಘಟನೆಗಳು ಅಚ್ಚಳಿಯದೆ ಉಳಿಯುವಂತಹದು. ಹೌದು, ನಾವು ಆಗಾಗ ಚೈತನ್ಯ ವೃದ್ಧಿಸಿಕೊಳ್ಳಲು ಈ ಬಾಲ್ಯದ ನೆನಪು …

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ

September 16, 2017 – 5:33 am | By arvindkulkarni

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ
ವಿದ್ಯಾರ್ಥಿಗಳ ಪ್ಲೇಸ್‍ಮೆಂಟ್‍ನವರೆಗೆ ಆದಾಯ ತರುವ ಪ್ರವೇಶ ಫೀಯಿಂದ ಕೊಡುವ ವೇತನ ವೆಚ್ಚದವರೆಗೂ ಎಲ್ಲವೂ ಅದ್ವಾನವಾಗಿರುವಾಗ, ಈಗ ಒಮ್ಮಿಂದೊಮ್ಮೆಲೆ ಸುಧಾರಣೆಯ ಪರ್ವವಾಗಿ ಎಲ್ಲವೂ ಸಮರೋಪಾದಿಯಲ್ಲಿ ನಡೆಯುತ್ತಿರುವುದು ಚುನಾವಣೆ ಸಮೀಪಿಸುತ್ತಿತುವಾಗ ಅನ್ನುವದು ಕಾಕತಾಳೀಯವಾದರೂ ಸತ್ಯವೇ ಸರಿ.
ರಾಜ್ಯದಲ್ಲಿ ಹೊಸದಾಗಿ ವಿಶ್ವವಿದ್ಯಾಲಯಗಳ ಕಾನೂನು ಯಾವುದೇ ಜ್ಞಾನಪೂರಕ ಚರ್ಚೆಯಿಲ್ಲದೆ ಎರಡೂ ಜವಾಬ್ದಾರಿಯುತವಾದ …

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ

September 15, 2017 – 5:39 am | By rkashramdwd

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ
ಅಕ್ಟೋಬರ್ 14 ಬೇಂದ್ರೆಯವರಿಗೆ ಸಾಮಾಜಿಕ ಕಳಕಳಿ ಭಾಳ ಇತ್ತು. ಪ್ರತಿ ನಿತ್ಯದ ಆಗು ಹೋಗುವ ಬಗ್ಗೆ ಕೇಳುತ್ತಿದ್ದರು, ನೋಡುತ್ತಿದ್ದರು, ಮನೆಗೆ ಬಂದ ಅತಿಥಿಗಳೊಬ್ಬರು ‘ಇವತ್ತಿನ ಪೇಪರ ಸುದ್ದಿ ಓದಿರಿಲ್ಲೋ? ಕಲಬೆರಿಕಿ ಆಹಾರ ಸೇವನೆಯಿಂದ ಎಷ್ಟ ಮಂದಿ ಸತ್ತಾರ’ ಅಂದ. ತತ್‍ಕ್ಷಣ-ಬೇಂದ್ರೆಯವರು ಹೇಳತೇನಿ …

ನಿತ್ಯ-ಮಿಣುಕು-ರಸ್ತೆ-ಥರ್ಟಿ

September 14, 2017 – 4:56 am | By kkoulagi

ನಿತ್ಯ-ಮಿಣುಕು-ರಸ್ತೆ-ಥರ್ಟಿ
ಮಿಣುಕು ದೀಪಗಳ
ರಸ್ತೆಯಲ್ಲಿ
ತೂರಾಡುತ್ತ
ಮನಕ್ಕೆ ಬಂದದ್ದು
ಒದರುತ್ತ ಬರುವದು
ಅವನ ದಿನನಿತ್ಯದ
ಕರ್ಮ..
ವಯಸ್ಸಿನ್ನೂ
Thirty ಇಲ್ಲ
ಆಗಲೇ ಎಲ್ಲ dirty
ಹವ್ಯಾಸಗಳನ್ನು
ಅವ ಬಲ್ಲ…..
“ಅಪುತ್ರಸ್ಯ ಗತಿರ್ನಾಸ್ತಿ”
ಗಂಡೇ ಬೇಕೆಂದು
ಹಂಬಲಿಸಿ ಹಾರೈಸಿ
ಪಡೆದ ಮಗನಿಂದ
ಜೀವಂತವಿದ್ದಾಗಲೇ ತಂದೆ ತಾಯಿಗಳು
‘ಗತಿ’ಗಾಣಬೇಕಲ್ಲ…

ಕ್ಯಾಂಪಸ್–ಕಲಕಲ-ಪುಲಕ

September 11, 2017 – 5:34 am | By arvindkulkarni

ಕ್ಯಾಂಪಸ್–ಕಲಕಲ-ಪುಲಕ
ಹದಿ ಹರೆಯದ ಯುವಕ ಯುವತಿಯರು ನಮ್ಮ ವಿದ್ಯಾಲಯಗಳ ಆವರಣದಲ್ಲಿ ಮುಕ್ತ ಮನಸುಗಳೊಂದಿಗೆ, ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಅಡ್ಡಾಡುವುದನ್ನು, ಅಲ್ಲಿ ಇಲ್ಲಿ ನಿಂತುಕೊಂಡು, ಅಲ್ಲಲ್ಲಿ ಕೂತುಕೊಂಡು ಹಲವು ಹತ್ತು ವಿಷಯಗಳ ಬಗ್ಗೆ ನೋಡುತ್ತಿದ್ದಂತೆ ಕಿಶೋರ ಕುಮಾರನ ಹಿಂದಿ ಚಲನಚಿತ್ರದ ಹಾಡು ನೆನಪಾಗುತ್ತದೆ. “ಖಿಲತೆ ಹೈ ಗುಲ್ ಯಹಾ ಖಿಲಕೆ ಬಿಚಡನೆಕೊ”. …

ಬನಿಯನ್ – ಬನಿಯಾ

September 9, 2017 – 6:14 am | By arvindkulkarni

ಬನಿಯನ್ – ಬನಿಯಾ
ಚತುರತೆ, ಚಾಣಾಕ್ಷತೆ, ಕುಶಾಗ್ರಮತಿ ಈ ಎಲ್ಲ ಪದಗಳನ್ನು ಗಮನಿಸಿದರೆ ಏನೇನು ಅರ್ಥಗಳು ಮಥಿಸಿದಾಗ ಬರಬಹುದು? ಅವೆಲ್ಲವೂ ಸಂದರ್ಭ ಸನ್ನಿವೇಶಕ್ಕೆ ತಕ್ಕ ಹಾಗೆ ಅರ್ಥ ಮಾಡಿಕೊಳ್ಳುವುದೆ? ಅಥವಾ ಯಾವುದೇ ವ್ಯಕ್ತಿಗೆ ಅದನ್ನ ಅನ್ವಯಿಸಿ ಅರ್ಥ ಕಲ್ಪಿಸಬಹುದೇ? ನಮ್ಮ ರಾಷ್ಟ್ರಪಿತ ಮೋಹನದಾಸ್ ಕರಮಚಂದ ಗಾಂಧಿಯವರು ಒಬ್ಬ ಚತುರ ಬನಿಯಾ …

ವ್ಯಕ್ತಿಯ ಬೆಲೆ

September 8, 2017 – 5:27 am | By rkashramdwd

ವ್ಯಕ್ತಿಯ ಬೆಲೆ
ಮನುಷ್ಯನು ತುಂಬಾ ಸ್ವಾರ್ಥಿಯಾದಾಗ, ಅವನಿಗೆ ಬಹುಬೇಗ ಸಿಟ್ಟು ಬರುತ್ತದೆ. ತನ್ನ ಇಚ್ಛೆಯಂತೆ ಈ ಜಗತ್ತು ಇರಬೇಕು ಎಂದು ನಿರೀಕ್ಷಿಸುತ್ತಾನೆ. ಹಾಗೆ ಇಲ್ಲವೆಂದಾದಾಗ ಸಿಟ್ಟಿನಿಂದ ವ್ಯವಹರಿಸುತ್ತಾನೆ. ಹಿಂಸೆ ಮಾಡುತ್ತಾನೆ, ಕ್ರೂರತನದಿಂದ ವರ್ತಿಸುತ್ತಾನೆ, ಆದರೆ ಕ್ರೂರತನದಿಂದಾಗಿ ಅವನಲ್ಲಿರಬೇಕಾದ ಮನುಷ್ಯತ್ವವೇ ಕಣ್ಮರೆಯಾಗುತ್ತದೆ. ಹಿಂದೆ ತೈಮೂರ ಲಂಗನೆಂಬ ಕ್ರೂರನೂ ಹಾಗೂ ದುಷ್ಟನೂ ಆದ …

ಸಂಶೋಧನಾ ಸಂಸ್ಕೃತಿ ಮಹಿಮೆ

September 7, 2017 – 6:31 am | By arvindkulkarni

ಸಂಶೋಧನಾ ಸಂಸ್ಕೃತಿ ಮಹಿಮೆ

ಸಂಶೋಧನೆಯ ಕೆಲಸ ಸಂಸ್ಕೃತಿಯ ಭಾಗ. ಈ ಸಮಕಾಲೀನ ಜಗತ್ತಿನಲ್ಲಿ ಆಗಬಹುದೇ, ಸಾಧ್ಯವೇ ಅನ್ನುವ ಪ್ರಶ್ನೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲಾ ಸಮಕಾಲೀನರು ನಮ್ಮ ಹಿಂದಿನ 3-4 ತಲೆಮಾರುಗಳೆಲ್ಲ ಒಂದಿಲ್ಲಾ ಒಂದು ರೀತಿಯಾಗಿ ಮ್ಯಾಕುಲೆನ ಸಂತತಿಯೇ. ಬ್ರಿಟಿಷರು ನಮಗಾಗಿ ಹೆಣೆದ ವಿನ್ಯಾಸಿಸಿದ …

ಹರ್ಷ – ಶೂಲ – ಚಿಮ್ಮು – ಕವಿತೆ

September 7, 2017 – 5:42 am | By kkoulagi

ಹರ್ಷ – ಶೂಲ – ಚಿಮ್ಮು – ಕವಿತೆ
ಈ ಜೀವನವೇ ವಿಚಿತ್ರ
ಇದಕ್ಕಿಲ್ಲ ಯಾವುದೇ
ಸಿದ್ಧ ಸೂತ್ರ..
ಇದು ಒಂದು ನವ್ಯಕವಿತೆ….
ಇದಕ್ಕಿಲ್ಲ ಪ್ರಾಸ-ಛಂದಸ್ಸಿನ ಬದ್ಧತೆ…
ಸರಕಾರೀ ನಳದಂತೆ
ಹನಿಹನಿಯಾಗಿ ಒಮ್ಮೆ
ತಟಗಿಕ್ಕಿದರೆ ಮತ್ತೊಮ್ಮೆ
ತೂಬು ತೆಗೆದ ಆಣೆಕಟ್ಟಿನಂತೆ
ಭೋರ್ಗರೆದು ಚಿಮ್ಮಬಹುದು….
ಒಂದು ಗಳಿಗೆ ಹರ್ಷದ ಹೊನಲು
ಮರುಗಳಿಗೆ ಶೂಲದ ನೆರಳು