Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for June 2017

ನಮ್ಮೂರಲ್ಲಿ ಮೇ ತಿಂಗಳಲ್ಲಿ

June 30, 2017 – 9:43 am | By ನೀನಾಸಮ್
Play

ನಮ್ಮೂರಲ್ಲಿ ಮೇ ತಿಂಗಳಲ್ಲಿ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ದ ದಾಖಲೀಕರಣದ ಇನ್ನೊಂದು ಪ್ರಸ್ತುತಿ
ನಾಟಕ: ಪುಂಟಿಲಾ । ನೀನಾಸಮ್ ತಿರುಗಾಟ ೧೯೯೦ । ನಾಟಕಕಾರ: ಬರ್ಟೋಲ್ಟ್ ಬ್ರೆಕ್ಟ್ । ಅನುವಾದ: ಜಸವಂತ ಜಾಧವ್ । ಗೀತಕಾರ: ಕೆ.ವಿ.ಸುಬ್ಬಣ್ಣ । ನಾಟಕ ನಿರ್ದೇಶನ: ಚಿದಂಬರರಾವ್ ಜಂಬೆ …

ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ

June 29, 2017 – 5:25 am | By kkoulagi

ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ
ಶೈಶವ, ಬಾಲ್ಯ, ಹರೆಯ, ವೃದ್ಧಾಪ್ಯ
ಬದುಕಿನ ನಾಲ್ಕು ಹಂತಗಳು-
ಪಾಳಿಯ ಮೇಲೆ ಎಲ್ಲವನ್ನೂ
ಒಂದೊಂದಾಗಿ ಅನುಭವಿಸಲೇಬೇಕು-
ನಮ್ಮಿಚ್ಛೆಯಂತಲ್ಲ-
ಅವನಿಚ್ಛೆಯಂತೆ—
ನಾನೋಬ್ಬನೇ ಅಲ್ಲ – ಪ್ರತಿಯೊಬ್ಬರೂ…
ಅವನು “ಸುರೇಶ”ನಿರಲಿ “ಭುವೀಶ”ನಿರಲಿ
ಏನೂ ವ್ಯತ್ಯಾಸವಾಗುವದಿಲ್ಲ—
ಇಲ್ಲಿ ಯಾವುದೇ ಲಾಬಿ ಕೆಲಸ ಮಾಡುವದಿಲ್ಲ

ಜೀವನುತ್ಸಾಹ

June 27, 2017 – 5:25 am | By Uma Bhatkhande

ಜೀವನುತ್ಸಾಹ
ವಿನಯ ಶೀಲ ಮರವೇ
ನಮನವು ನಿನ್ನುತ್ಸಾಹಕೆ
ಟೊಂಗೆ ಕತ್ತರಿಸಲು ಚಿಗುರಿ
ಹೊಮ್ಮಿಸುವೆ ಸುತ್ತ ಅಗರು
ಏನೀ ನಿನ್ನ ನಮ್ರ ಭಾವನಾ
ರೆಂಬೆಗಳುರುಳಿಸಲು
ಸಣ್ಣ ಚಿಗುರಿ ನಳನಳಿಸುತ
ನೀಡುವೆ ಕಂಗಳಿಗೆ ಸುಖಕರವು
ರೆಂಬೆ ಕೊಂಬೆಗಳೆರಡು ಉರುಳಿಸಲು
ಟಿಸಿಲೊಡೆದು ಬೆಳೆವೆ
ಎಂಥ ನಿಷ್ಠ ಕಾಯವು
ಕೊಡಲಿ ಇಟ್ಟ ಮನುಜನೊಡೆನೆ
ಇಲ್ಲ ನಿನ್ನಲಿ …

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ

June 22, 2017 – 6:03 am | By kkoulagi

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ
ಪುಟ್ಟ ಪುಟ್ಟ ಹಳ್ಳಿಗಳಲ್ಲಿ
ಬಣವೆಗಳ ಹಿಂಬದಿಯಲ್ಲಿ
ಪ್ರೇಮ ಪಲ್ಲವಿಸಿ
ಪೋಷಣೆಯಿಲ್ಲದೇ
ಕಮರಿದ ಕಥೆಗಳೆಷ್ಟು
ಚರಿತ್ರೆ ಸೇರಿವೆಯೋ
ಲೆಕ್ಕ ಇಟ್ಟವರಾರು…..??
ಶಾರೂಖ – ಕಾಜೋಲ
ರಣಬೀರ್ – ಐಶ್ವರ್ಯ
ಕಥೆಗಳಂತೆ ಕೋಟಿ
ಕೋಟಿ ಬಾಚಲಾರದ,
ಬಣ್ಣನೆಗೆ ‘ಬರ’ವಿರುವ,
ಕಥೆಗಳಿಗೆ ‘ಕರಣ’ (ಜೋಹರ್)
ನಂಥವರ …

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು….

June 21, 2017 – 8:56 am | By ramachandrahegde

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು….
“ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ……..”
ಹಾಗೊಂದು ಹಾಡು ಲಾಹೋರ್ನ ಜೈಲಿನ ಗೋಡೆ ಗೋಡೆಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ …

ಬದುಕಿಗೆ ಭಗವದ್ಗೀತೆ – ಕೃತನಿಶ್ಚಯನಾಗಿ ಕರ್ತವ್ಯ ಮಾಡು

June 20, 2017 – 6:52 am | By arathivb

ಬದುಕಿಗೆ ಭಗವದ್ಗೀತೆ – ಕೃತನಿಶ್ಚಯನಾಗಿ ಕರ್ತವ್ಯ ಮಾಡು
ಕ್ಷತ್ರಿಯನ ಬಾಳೇ ಧರ್ಮರಕ್ಷಣೆಗೆ. ಹಾಗಿರುವಾಗ ಧರ್ಮಯುದ್ಧಕ್ಕಾಗಿ ಧರ್ಮಪಕ್ಷದಲ್ಲಿ ಹೋರಾಡುವ ಮಹದವಕಾಶ ಒದಗಿಬಂದಾಗ ಕೈಬಿಡುವುದು ಮೂರ್ಖತನವಲ್ಲವೆ? ಒಟ್ಟಿನಲ್ಲಿ ಅರ್ಜುನನಿಗೀಗ ಬೇರೆ ಆಯ್ಕೆ ಇಲ್ಲ. ಸೋತರೂ ಸರಿ, ಗೆದ್ದರೂ ಸರಿ, ಸತ್ತರೂ ಸರಿ ಉಳಿದರೂ ಸರಿ, ಯುದ್ಧವೇ ಮುಂದಿರುವ ನಿಶ್ಚಿತಕರ್ತವ್ಯ ಎನ್ನುವುದನ್ನು ಮನಗಾಣಿಸುತ್ತಿದ್ದಾನೆ ಕೃಷ್ಣ;

ನಕ್ಕು ನಲಿದು

June 19, 2017 – 5:27 am | By Uma Bhatkhande

ನಕ್ಕು ನಲಿದು
ಅನ್ಯರ ಚಿಂತೆ ಏತಕೆ ತಮ್ಮ
ಮನದಲಿ ಪೊಕ್ಕುವುದು ಗುಮ್ಮ
ಪರಚಿಂತೆಯಲಿ ಗೆದ್ದಲ್ಹಿಡಿವುದು ಚಿತ್ತ
(ಜಗವಿಹುದು) ಜಗವೊಂದು ವಿಶಾಲ ಸಾಗುವ ಅದರತ್ತ
ಸುತ್ತಲ ಕಹಿ ಬೇಲಿಗಳ ಕತ್ತರಿಸಿ
ಶೃಂಗಾರದ ತರುಲತೆಗಳಿಂದಲಂಕರಿಸಿ
ಚಿಗುರಿಸುವ ಬಗೆಬಗೆಯ ಕುಸುಮ
ಚಿಮ್ಮಲಿ ನಿತ್ಯ ಚೈತನ್ಯದ ಸಂಭ್ರಮ
ಬಸವಳಿಯದಿರಿ ಗಲ್ಲಗಳ ಬಿಗಿದು
ಎಲ್ಲರೊಳಗೊಂದಾಗಿ ಬನ್ನಿ ನಕ್ಕು …

ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ

June 14, 2017 – 5:30 am | By kkoulagi

ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ
“ನಾಚಿಗೆ ಆಗೋಲ್ವಾ ನಿನಗೆ?”
ಇದು
ನಾಚುವದು
ಅಂದರೆ ಏನು?
ಯಾಕೆ, ಹೇಗೆ?
ಎಲ್ಲಿ? ಯಾವಾಗ?
ಒಂದೂ ಗೊತ್ತಿಲ್ಲದಾಗಲೇ
ದಿನನಿತ್ಯ ನಾನೆದುರಿಸಿದ
ಪ್ರಶ್ನೆ…..
ಉತ್ತರ ತಪ್ಪಿದಾಗ ಗುರುಗಳು
ಕೆಲಸ ಬರದಿದ್ದಾಗ ಅಮ್ಮ, ಅಪ್ಪ
ಸಂದರ್ಭ ಸಿಕ್ಕಾಗಲೆಲ್ಲ ಉಳಿದವರು
ಕೇಳಿ ಕೇಳಿ ಕೊರಡಾಗಿಸಿದ್ದರು..

ಭಗವದ್ಗೀತೆ – ವೀರಪಾರ್ಥ! ರಣಹೇಡಿ ಎನಿಸದಿರು!

June 13, 2017 – 6:58 am | By arathivb

ಭಗವದ್ಗೀತೆ – ವೀರಪಾರ್ಥ! ರಣಹೇಡಿ ಎನಿಸದಿರು!
ನಮ್ಮ ಮೂಲಸ್ವರೂಪವಾದ ಆತ್ಮವೇ ನಮಗೆ ‘ಅರ್ಥವಾಗದ ಒಗಟಾ’ಗಿರುವುದಕ್ಕೆ ನಮ್ಮ ಮನೋಬುದ್ಧಿಗಳ ‘ಕೂಪಮಂಡೂಕಸ್ಥಿತಿ’ಯೇ ಕಾರಣ ಎಂಬ ವಿಚಾರ ನೋಡಿದ್ದೇವೆ. ತತ್ವವಿಚಾರದ ನೆಲೆಯಿಂದ ಮತ್ತೊಮ್ಮೆ ಕರ್ತವ್ಯವಿಚಾರಕ್ಕೇ ಮರಳಿ ಕೃಷ್ಣನು ಅರ್ಜುನನಿಗೆ ಹೀಗೆ ಬುದ್ಧಿ ಹೇಳುತ್ತಾನೆ:
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ|
ಧರ್ಮ್ಯಾದ್ಧಿ ಯುದ್ಧಾಚ್ಛೇಯೋsನ್ಯತ್ ಕ್ಷತ್ರಿಯಸ್ಯ ನ …

ತಲ್ಲಣ

June 12, 2017 – 5:26 am | By Uma Bhatkhande

ತಲ್ಲಣ
ಜಗದ ನೋಟವಿದು ಕಂಡಿರೆ ಭೀಭತ್ಸ
ಭೀಕರ ಸುನಾಮಿ, ಚಂಡಮಾರುತಕೆ ಭೂಕಂಪನ
ಒಳಗೊಳಗೆ ಹಾಹಾಕಾರ ಜನಜಂಗುಳಿಯ ಆರ್ತನಾದ
ಕಂಡಕಂಡಲ್ಲಿ ಭ್ರಷ್ಟಾಚಾರ, ಸ್ವಾರ್ಥ, ಅತ್ಯಾಚಾರದ ಸೋಪಾನ
ಎಲ್ಲೆಲ್ಲೂ ತಲ್ಲಣವು ಜಗದೊಳಗೆ
ನೆಲಕಾಗಿ ಜಲಕಾಗಿ ಎಲ್ಲವೂ ನನಗಾಗಿ ನಾನೇ ಆಗಿ
ಎಲ್ಲೆಡೆ ನಾ, ನಾನೆಂದು ಜೀವಸಂಕುಲ ಕಾಣದಾಗಿ
ಜಾತಿ ಮತ, ಮಡಿ ಉಡಿ, ಮೇಲುಕೀಲುಗಳ …