Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for May 2017

ಬಾಳದಾರಿ

May 31, 2017 – 5:17 am | By shridevibiradar

ಬಾಳದಾರಿ
ದ್ವೇಷವನು ಮರೆಯೋಣ
ಸ್ನೇಹವನು ಮಾಡೋಣ
ಬದುಕಿನಲಿ ಮುನ್ನಡೆಯಲು,
ಸಂಬಂಧ ಬೆಳೆಸೋಣ
ಪ್ರೀತಿಯನು ಗಳಿಸೋಣ
ಜೀವನದ ಆದರ್ಶದಲಿ,
ಸೇವೆಯನು ಮಾಡೋಣ
ಸತ್ಯವನು ನುಡಿಯೋಣ
ನಿಷ್ಠೆಯಿಂದಿರಲು ಪ್ರತಿ ಕಾರ್ಯದಲಿ
ದೇಶಕೆ ಶಾಂತಿ ನೆಮ್ಮದಿಯ ತಂದು
ತ್ಯಾಗವನು ಮಾಡೋಣ
ಐಕ್ಯತೆಯ ಮಂತ್ರದಲಿ,
ಬೇರೆಯವರ ಕುತಂತ್ರಕೆ ಬಲಿಯಾಗದಿರು
ಹಿರಿಯರ ಮಾತಿಗೆ ಶರಣಾಗಿರು
ನಿರಂತರ ಬಾಳಿನಲಿ

ಗಮಕ – ಮಯಸಭಾ ನಿರ್ಮಾಣ – ಭಾಗ 2

May 30, 2017 – 7:30 am | By gamakahosalli

ಗಮಕ ಕಲಾ ಪರಿಷತ್, ಹೊಸಹಳ್ಳಿ, ಶಿವಮೊಗ್ಗ ತಾ| ನಲ್ಲಿ ಡಿಸೆಂಬರ್ 31, 2016 ಹಾಗೂ ಜನೇವರಿ 1, 2017 ರಂದು ನಡೆದ ಅಹೋರಾತ್ರಿ ಗಮಕ ಕಾರ್ಯಕ್ರಮ
ಮಯಸಭಾ ನಿರ್ಮಾಣ
ವಾಚನ : ಶ್ರೀಮತಿ ಧರಿತ್ರಿ ಆನಂದ್ ರಾವ್, ಮೈಸೂರು
ವ್ಯಾಖ್ಯಾನ : ಡಾ| ಜ್ಯೋತಿ ಶಂಕರ್, ಮೈಸೂರು

ಬದುಕಿಗೆ ಭಗವದ್ಗೀತೆ – ಆಶ್ಚರ್ಯಜನಕವಾದ ಆತ್ಮ !

May 30, 2017 – 5:22 am | By arathivb

ಬದುಕಿಗೆ ಭಗವದ್ಗೀತೆ – ಆಶ್ಚರ್ಯಜನಕವಾದ ಆತ್ಮ !
ಅವ್ಯಕ್ತದಿಂದ ವ್ಯಕ್ತವಾಗಿ ಬಂದ ಭೌತಿಕ ಪ್ರಪಂಚವು, ಕೆಲಕಾಲವಿದ್ದು, ಮತ್ತೆ ಅವ್ಯಕ್ತದಲ್ಲೇ ಲಯವಾಗುತ್ತದೆ. ಆತ್ಮಸ್ವರೂಪವಾದರೋ, ವ್ಯಕ್ತಾವ್ಯಕ್ತಗಳ ಲೀಲೆಗೆ ತೊಡಗದೆ ನಿತ್ಯವೂ ನಿರ್ವಿಕಾರವೂ ಆಗಿ ಉಳಿದಿರುತ್ತದೆ. ನಾವು ಆತ್ಮದ ನೆಲೆಯಲ್ಲಿ ನಿಂತು ಆಲೋಚಿಸಿದರೆ ದುಃಖವೇ ಇಲ್ಲ. ಭೌತಿಕದ ನೆಲೆಯಲ್ಲಿ ನಿಂತು ನೋಡಿದರೂ ಅಷ್ಟೇ, ವಿಕಾರ-ನಾಶಗಳು …

ಕೋತಿ, ಕನ್ನಡಿ ಸಂಗಮ

May 29, 2017 – 5:42 am | By Uma Bhatkhande

ಕೋತಿ, ಕನ್ನಡಿ ಸಂಗಮ
ಕೋತಿ ಕಂಡಿತೊಂದು ಕನ್ನಡಿ
ಬಿಗಿದ್ಹಿಡಿದಿದ್ದ ಪರಿಯನೊಮ್ಮೆ ನೋಡಿ
ಹಿಡಿದು ಆಚೆ-ಈಚೆ ಮಾಡಿ
ಏರಿತು ಮರವ ಛಂಗನೆ ಓಡಿ ಓಡಿ
ತಿರುವು ಮುರುವು ಮಾಡಿತೊಮ್ಮೆ
ದೂರ ಚಾಚಿ ನೋಡಿತೊಮ್ಮೆ
ಕಣ್ಪಿಳಿಕಿಸದೆ ದೃಷ್ಟಿ ಅಲ್ಲೆ ಬೀರಿ
ಕೈಲಿ ಹಿಡಿದು ಕಂಡು ತನ್ನ ಮಾರಿ
ಆಹಾ! ಸಿಕ್ಕ ಹೊಸ ಗೆಳೆಯ

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ

May 26, 2017 – 5:46 am | By kkoulagi

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ
“ಬೇಂದ್ರೆ ಪುಣ್ಯತಿಥಿಯಂದು
ಬೇಂದ್ರೆ ಸ್ಮಾರಕ ಕಾವ್ಯ ಗಾಯನ
ಕಾರ್ಯಕ್ರಮದ ಆಯೋಜನವಾಗಬೇಕು..
ನಿಮ್ಮದೇ ಜವಾಬ್ದಾರಿ ನಿಮ್ಮದೇ ಇಷ್ಟ..
ಆದರೆ ಕಾರ್ಯಕ್ರಮ ಸ್ಮರಣೀಯವಾಗಬೇಕು.”
ಬಿಸಿಬಿಸಿ ಉಪ್ಪಿಟ್ಟು ಆರಿಸಲು plateನಲ್ಲಿ
ಚಮಚ ಆಡಿಸುತ್ತ ಕುಳಿತ ನನಗೆ bossನ phone..
ಆ…ಊ.. ಅನ್ನುವ ಮೊದಲೇ cutಊ …

ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ

May 25, 2017 – 6:00 am | By ನೀನಾಸಮ್
Play

ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ
ಯಡ್ರಾಮನಹಳ್ಳಿ ದೊಡ್ಡಭರಮಪ್ಪ ತೊಗಲುಗೊಂಬೆಯಾಟ ತಂಡದವರಿಂದ ತೊಗಲುಗೊಂಬೆಯಾಟ ಶೂರ್ಪಣಕಿ ವಧೆ । ಕಲಾವಿದರು: ನಿಂಗಪ್ಪ ಕಿಳ್ಳೆಕ್ಯಾತರ, ದೇವೇಂದ್ರಪ್ಪ, ಅಶೋಕ, ರತ್ನಮ್ಮ ಕೆ., ಜಯಕುಮಾರ, ನಾಗರತ್ನಮ್ಮ

ಬದುಕಿಗೆ ಭಗವದ್ಗೀತೆ – ಕ್ಷಣಿಕ ಅಭಿವ್ಯಕ್ತಿಯನ್ನು ನೆಚ್ಚಿ ಶೋಕಿಸುವುದೇಕೆ?

May 23, 2017 – 5:14 am | By arathivb

ಬದುಕಿಗೆ ಭಗವದ್ಗೀತೆ – ಕ್ಷಣಿಕ ಅಭಿವ್ಯಕ್ತಿಯನ್ನು ನೆಚ್ಚಿ ಶೋಕಿಸುವುದೇಕೆ?
ಆತ್ಮಕ್ಕಂತೂ ಹುಟ್ಟಿಲ್ಲ ಸಾವಿಲ್ಲ. ಮೂರ್ತಪ್ರಪಂಚದಲ್ಲಿ ಹುಟ್ಟು-ಸಾವುಗಳು ಅನಿವಾರ್ಯ. ಹಾಗಾಗಿ ಎರಡು ದೃಷ್ಟಿಗಳಿಂದ ಪರಿಗಣಿಸಿದರೂ, ‘ಶೋಕವು ಅನಗತ್ಯ’ ಎಂದು ಕೃಷ್ಣನು ಪಾರ್ಥನಿಗೆ ಮನಗಾಣಿಸುತ್ತಿದ್ದುದನ್ನು ನೋಡಿದ್ದೇವೆ. ಕೃಷ್ಣನು ಮುಂದುವರೆಸುತ್ತಾನೆ-
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ I ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿವೇದನ II …

ಸಹನೆ

May 22, 2017 – 4:47 am | By Uma Bhatkhande

ಸಹನೆ
ಸಹನೆಯು ಬಾಳಿಗೆ ಹಸನಾದ ಹಾದಿ
ಇದುವೇ ಜೀವನಕೆ ಆಗುವುದು ಬುನಾದಿ
ದುಃಖಿಸಿದವನೊಮ್ಮೆ ನಗುವುದುಂಟು
ನಕ್ಕವನೊಮ್ಮೆ ದುಃಖಿಸುವುದುಂಟು
ಜೀವನ ನೌಕೆಯಲಿ ಎಲ್ಲವೂ ಜಹಜ
ಆತುರವಿರದೆ ಅರಿಯಬೇಕು ಮನುಜ
ಕಷ್ಟವನರಿತು ಯೋಚಿಸಬೇಕು
ದುರಂತಗಳ ತಾಳ್ಮೆಯಲಿ ಎದುರಿಸಬೇಕು.
ದುಡುಕಲು ಅರ್ಥವು ಅನರ್ಥವಾಗುವುದು
ಕೋಪದ ಕೈಯಿಗೆ ಬುದ್ಧಿಯು ಸಲ್ಲ
ಮನುಜನದು ಕ್ರೂರ ಪ್ರಾಣಿಯಾಗಬಲ್ಲ
ತಾಳ್ಮೆಯ …

ಆಶ್ಚರ್ಯ ಚೂಡಾಮಣಿ

May 19, 2017 – 4:57 am | By ನೀನಾಸಮ್
Play

ಆಶ್ಚರ್ಯ ಚೂಡಾಮಣಿ
ನಾಟಕ: ಆಶ್ಚರ್ಯ ಚೂಡಾಮಣಿ | ನಾಟಕಕಾರ: ಶಕ್ತಿಭದ್ರ | ಕನ್ನಡ ಅನುವಾದ: ಕೆ. ಕೃಷ್ಣಮೂರ್ತಿ | ವಿನ್ಯಾಸ ಮತ್ತು ನಿರ್ದೇಶನ: ಜೋಸೆಫ್ ಜಾನ್

ಸಲಿಗೆ – ಜೀವ – ಕಡಲು – ಚಿನಕುರುಳಿ

May 18, 2017 – 5:36 am | By kkoulagi

ಸಲಿಗೆ – ಜೀವ – ಕಡಲು – ಚಿನಕುರುಳಿ
ಜೀವಕ್ಕೆ ಜೀವಕೊಡುವ
ಸಲಿಗೆಯಿದ್ದರೂ ಸಂಬಂಧಗಳಿಗೆ
ಒಂದು L.O.C. ಇರಲೇಬೇಕು…
ಸ್ನೇಹದ ಹಾಲುಗಡಲಲ್ಲಿ
ಹುಳಿಹಿಂಡಿ ಬದುಕು
ಭಂಗವಾಗಿಸುವದಕ್ಕೆ
ಮಹಾ-ಕಲಹವೇನೂ
ಬೇಕಾಗಿಲ್ಲ..
ಒಂದು ಚಿನಕುರುಳಿಯಂಥ
ಅಸಭ್ಯ, ಅನುಚಿತ, ಅಗೌರವದ
Joku ಊ ಸಾಕಾದೀತು