Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for February 2017

ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ

February 28, 2017 – 5:34 am | By arathivb

ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ
ತನ್ನ ಮತಿಗೆ ಭ್ರಾಂತಿ ಕವಿದಿದೆ ಎಂದು ಒಪ್ಪಿಕೊಂಡ ಅರ್ಜುನ, ಕೃಷ್ಣನಲ್ಲಿ ಶರಣಾದ. ದಾರಿ ತೋರೆಂದು ಪ್ರಾರ್ಥಿಸಿದ. ಅದಾದ ಮೇಲೂ ತನ್ನ ಚಿತ್ತದ ಗೊಂದಲವನ್ನು ಕೃಷ್ಣನ ಮುಂದಿಟ್ಟು ನುಡಿದ – “ಕೃಷ್ಣ! ಯುದ್ಧದಿಂದಾಗಿ ರಾಜ್ಯದ ಭೋಗಗಳನ್ನೂ ಸ್ವರ್ಗದ ಸುಖವನ್ನೇ ಪಡೆಯಬಹುದು, ನಿಜ! ಆದರೆ ನನ್ನ …

ಈ ಕಾಡು ನದಿ ಮಣ್ಣು

February 27, 2017 – 6:26 am | By ನೀನಾಸಮ್
Play

ಈ ಕಾಡು ನದಿ ಮಣ್ಣು
ಈ ಕಾಡು ನದಿ ಮಣ್ಣು ದೇವರ ಕಾಯ,
ಏನಂತ ಹಾಡಲಿ ದೇವರ ಮಾಯಾ,
ಈ ಕಾಡು ನದಿ ಮಣ್ಣು ದೇವರ ಕಾಯ,
ಎಸ್ಟ್ ಅಂತ ಹಾಡಲಿ ದೇವರ ಮಾಯಾ,
ಕಿಮ್ಮುವ ಹೂವಿನ ಘಮ್ಮನೆ ವಾಸನೆ,
ಕಿಮ್ಮುವ ಹೂವಿನ ಘಮ್ಮನೆ ವಾಸನೆ,
ಸುಮ್ಮನೆ ಸಡಗರ ಏನನ್ನಲಿ,
ಸುಮ್ಮನೆ ಸಡಗರ ಏನನ್ನಲಿ,
ಸುಡಗಾಡದೊಳಗೆ ಹೂ ಬಿಡುವ …

ಸಾರ್ಥಕ ಬದುಕು

February 27, 2017 – 6:07 am | By ಧ್ವನಿ

ಸಾರ್ಥಕ ಬದುಕು
ತಿಪ್ಪ ಒಬ್ಬ ಕೂಲಿ. ಅವನು ಒಬ್ಬಂಟಿ, ಅವನಿಗೆ ಹೆಂಡತಿ ಮಕ್ಕಳು ಇರಲಿಲ್ಲ. ಬೆಟ್ಟದ ತಪ್ಪಲಿನ ಪುಟ್ಟ ಮನೆಯಲ್ಲಿ ಅವನು ವಾಸವಾಗಿದ್ದ. ತಿಪ್ಪ ಬಹಳ ಶ್ರಮ ಜೀವಿ. ಸೋಮಾರಿಯಾಗಿ ಅವನು ಎಂದೂ ಸಮಯ ಕಳೆಯುತ್ತಿರಲಿಲ್ಲ. ಊರವರು ಕೆಲಸಕ್ಕೆ ಕರೆದಾಗ ಅವನು ಹೋಗುತ್ತಿದ್ದ. ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ.  ಅವರು …

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ…

February 25, 2017 – 5:29 am | By jogimane

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ…
ಇವತ್ತು ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ಅಂತ ಬರೆಯುವಾಗ ಸ್ವಲ್ಪ ಗೊಂದಲವಾಯಿತು. ನಾವು ಅನಾದಿಕಾಲದಿಂದ ಶೆಡ್ಯೂಲ್ ಅಂತ ಹೇಳಿಕೊಂಡು ಬಂದಿದ್ದನ್ನು ಈಗಿನ ಕಾಲದ ಹುಡುಗರು ಸ್ಕೆಡ್ಯೂಲ್ ಅನ್ನುತ್ತಾರೆ. ಅದು ಬಹುಶಃ ಅಮೆರಿಕನ್ ಉಚ್ಛಾರಣೆ ಇರಬಹುದು. ನಾವು ಕಲಿತದ್ದು ರೂಢಿಸಿಕೊಂಡದ್ದು ಬ್ರಿಟಿಷರ ಇಂಗ್ಲಿಷನ್ನು. ಆದರೆ ಪಿಜ್ಜಾ …

ಬಾ ಸೊಗವೇ

February 23, 2017 – 9:37 am | By ನೀನಾಸಮ್
Play

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ. 15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ. “ಬಾ ಸೊಗವೇ” / “ಅಹಲ್ಯೆ – 1999″
ನೀನಾಸಮ್ ರಂಗಶಿಕ್ಷಣ ಕೇಂದ್ರ –
ನಾಟಕಕಾರ / ಗೀತಕಾರ: ಪು.ತಿ.ನರಸಿಂಹಾಚಾರ್
ನಾಟಕ ನಿರ್ದೇಶನ / ಸಂಗೀತ ಸಂಯೋಜನೆ: ಅಕ್ಷರ ಕೆ.ವಿ.
ನಿರೂಪಣೆ: ಅಕ್ಷರ ಕೆ.ವಿ.
ಗಾಯಕಿಯರು: …

ಸೂತ್ರಧಾರಿ

February 23, 2017 – 5:02 am | By Uma Bhatkhande

ಸೂತ್ರಧಾರಿ
ನಾನೊಂದು ಗೊಂಬೆ
ದಾರ ಹಿಡಿದ ಸೂತ್ರಧಾರಿ ನೀನು
ಕೊಟ್ಟ ಪಾತ್ರಕೆ ಬದ್ಧಳು ನಾನು
ಕ್ಷಣಕೆ ಅಳಿಸಿ ಕ್ಷಣಕೆ ನಗಿಸಿ
ಕಷ್ಟದಲಿ ಸಹನೆ ಇರಿಸಿ
ಸುಖದಿ ಆನಂದ ಕೊಡುವವನೂ ನೀನು
ಧೈರ್ಯ, ಅಧೈರ್ಯ ನಿನ್ನಿಂದಲೇ
ಸಹನೆ, ಅಸಹನೆ ನಿನ್ನಿಂದಲೇ
ನಟನೆಯ ಮಾರ್ಗದರ್ಶಿ ನೀನೇ
ನಿರ್ದೇಶಕನೂ ನೀನೇ
ರಂಗಕ್ಕಿಳಿಸುವವ ನೀನು
ಸಾಕೆನಿಸಲು …

ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು

February 22, 2017 – 5:30 am | By ramachandrahegde
19

ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು

ಅಲ್ಲೂರಿ ಸೀತಾರಾಮರಾಜು: ಭಾರತದ ಸ್ವಾತಂತ್ರ್ಯಕ್ಕಾಗಿ, ಆದಿವಾಸಿ ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ, ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು …

ಬದುಕಿಗೆ ಭಗವದ್ಗೀತೆ -7

February 21, 2017 – 5:39 am | By arathivb

ಬದುಕಿಗೆ ಭಗವದ್ಗೀತೆ -೭
ಶೋಕಾನ್ವಿತನಾಗಿ ಕುಸಿದು ಕುಳಿತ ತನ್ನನ್ನು ಕೃಷ್ಣನು ಸಾಂತ್ವನ ಮಾಡಿಯಾನೆಂದು ಕೊಂಡನೇನೋ ಅರ್ಜುನ! ಆದರೆ ಕೃಷ್ಣನು ಛೀಮಾರಿ ಹಾಕಿ “ಸಾಕು ಈ ಹೃದಯದೌರ್ಬಲ್ಯ! ಎದ್ದೇಳು, ಕರ್ತವ್ಯವನ್ನು ಮಾಡು!” ಎಂದು ಗುಡುಗಿದಾಗ ಬೆಚ್ಚಿದ ಅರ್ಜುನ! ತನ್ನ ಗೋಳಾಟ ಅರ್ಥಹೀನವಾದದ್ದು. ಅದಕ್ಕೆ ಕೃಷ್ಣನಂತಹ ಪ್ರಾಜ್ಞನಿಂದ ಸಹಾನುಭೂತಿ ಸಿಗುವುದಿಲ್ಲವೆಂದು ಅರಿತ. ಈಗ …

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

February 20, 2017 – 5:54 am | By ಧ್ವನಿ
bose

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

ನೇತಾಜಿ ಸುಭಾಷಚಂದ್ರ ಬೋಸ್ ಭಾರತೀಯ ಆಡಳಿತಾತ್ಮಕ ಪರೀಕ್ಷೆಯಾಗಿದ್ದ ‘ಐ.ಸಿ.ಎಸ್.’ (Indian Civil Service) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು.
ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ …

ರಾಂಗ್ ನಂಬರ್!

February 17, 2017 – 5:37 am | By jogimane
4

ರಾಂಗ್ ನಂಬರ್!

ಅದೆಲ್ಲ ಶುರುವಾದದ್ದು ಒಂದೇ ಒಂದು ಫೋನ್ ಕಾಲ್ನಿಂದ. ನಿವೃತ್ತ ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನವರಿಗೆ ಆ ಮುಸ್ಸಂಜೆ ಇದ್ದಕ್ಕಿದ್ದಂತೆ ಹಾಸನದಲ್ಲಿರುವ ತಮ್ಮನ ಜೊತೆ ಮಾತಾಡಬೇಕು ಅನ್ನಿಸಿತು. ಆಗಷ್ಟೇ ಸಂಜೆ ಕರಗಿತ್ತು, ರಾತ್ರಿ ಇಳಿದಿರಲಿಲ್ಲ. ಅವರ ಮನೆಯ ಹಜಾರದಲ್ಲಿ ಇನ್ನೂ ಬೆಳಕಾಡುತ್ತಿತ್ತು. ಆ ಹೊತ್ತಲ್ಲಿ ಮೇಷ್ಟರು ಕಿಟಕಿಯ ಬಳಿ ಕುಳಿತುಕೊಂಡು …