Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Archive by Month

Article Archive for December 2015

ಇನಿತೇನಿಲ್ಲವೊ ಈ ಚಳಿಗಾಲ

December 26, 2015 – 2:16 pm | By raghottam koppar

ಇನಿತೇನಿಲ್ಲವೊ ಈ ಚಳಿಗಾಲ
— ಶೈಲಜಾ ಹೂಗಾರ
ಇನ್ನೇನು ಕುಳಿರ್ಗಾಳಿ ಬೀಸುತಲಿದೆ ಅನ್ನುವಾಗಲೂ ಮಳೆಗಾಲದ ಹಸಿ ಹಸಿ ನೆನಪ ಮಳಿ ಹನಿಯುವುದು ನಿಂತಿರಲಿಲ್ಲ. ಹಳೆಯದರ ಹಳವಂಡ ಅಷ್ಟು ಬೇಗ ಹೋಗಲೊಲ್ಲದಲ್ಲ. ಆ ಗುಟುರುವ ಕಪ್ಪೆ, ಮಳೆಹನಿಗೆ ತೊಪ್ಪೆಯಾದ ಮನವೀಗ ಚಳಿಗೆ ನಿಧಾನವಾಗಿ ಹೇಗೆ ಹೊಂದಿಕೊಳ್ಳುವುದೆಂದು ಹಲವು ಹಾದಿ ಹೊಳಹು.

ಕನಸು ಕನವರಿಕೆಗಳಿಗೆಲ್ಲ …

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು

December 26, 2015 – 9:33 am | By raghottam koppar

ಆ ದಿನಗಳ ಸಂತೆಯ ಸೊಗಡು: ಈ ಶಿಲಾ ತೋಟದಲ್ಲಿ ನೋಡು
                                                                               — ರಘೋತ್ತಮ್ ಕೊಪ್ಪರ್
ಇಂದಿನ ದಿನಗಳಲ್ಲಿ ಹಳೆಯ ಕಾಲದ ಸಂತೆಗಳು ಸಿಗುವುದು ತೀರಾ ವಿರಳ. ಎಲ್ಲೊ ಹಳ್ಳಿಗಳಲ್ಲಿ, ಸಣ್ಣ ನಗರಗಳಲ್ಲಿ ಕಾಣಬಹುದು. ಈಗ ಎಲ್ಲಾ ಬದಲಾಗಿಬಿಟ್ಟಿದೆ. ಸೂಪರ್ ಮಾರ್ಕೆಟ್‍ಗಳು ಲಗ್ಗೆ ಇಟ್ಟು ಆ ಹಳೆಯ ಮಾರುಕಟ್ಟೆಯ ಸೊಗಡನ್ನು ನಮ್ಮಿಂದ ದೂರವಾಗಿಸಿಬಿಟ್ಟಿವೆ. …

ಬೋರು – ನೀರು – ಹನಿಗವನ

December 21, 2015 – 7:48 am | By raghottam koppar

ಬೋರು – ನೀರು
ಊರು ಹೊರಗೊಂದು ಬೋರು
ಅದರಲ್ಲಿ ಸಿಹಿ ನೀರು
ಊರು ಒಳಗೆ ಹಲವು ಬೋರು
ಅವುಗಳಲ್ಲಿ ಇಲ್ಲ ನೀರು

ವಿವಿಡ್ಲಿಪಿ – ಒಂದು ಪರಿಚಯ

December 19, 2015 – 2:53 am | By admin

ವಿವಿಡ್ಲಿಪಿ ಯೋಜನೆ, ೨೦೧೫ ಸಾಹಿತ್ಯ ಸಂಭ್ರಮದಲ್ಲಿ ವಿವರಿಸಿದ್ದು
ಪ್ರಸ್ತುತಿ : ಶ್ರೀನಿವಾಸ್ ಎಚ್ ಸಿ ಮತ್ತು ಮಧು ಜಂಭ
ವಿವಿಡ್ಲಿಪಿ ಯೋಜನೆಯ ಮುಖ್ಯ ಉದ್ಧೇಶಗಳು:
೧. ತಲೆಮಾರುಗಳ ತಳಕು
೨. ಗಮ್ಯಸ್ಥಳ ಛಾಪು
೩. ಇ ಸಮುದಾಯ
೧. ತಲೆಮಾರುಗಳ ತಳಕು :
ಈ ಉದ್ಧೇಶದಡಿ ನಾವು ವಿವಿಧ ತಲೆಮಾರುಗಳನ್ನು ಅಥವಾ ಪೀಳಿಗೆಗಲ್ಲನು ಒಂದೊಕ್ಕೊಂದು …

ಮಾಯೆ

December 18, 2015 – 5:11 am | By Uma Bhatkhande

ಮಾಯೆ 
ಮನುಜನೆ ಮಾಯೆಯ ಭಯವಿರಲಿ
ಅಂತರಗದಲ್ಲದು ಅವರಿಸದಿರಲಿ
ಮಾಯೆಯ ಬೆಂಬತ್ತಿದ ಮನುಜಗೆ
ಮಾಯಾ ಜಾಲವದು ಸುತ್ತುವುದು
ಮನುಜ ಬುದ್ಧಿಯ ಬದಿಗೊತ್ತುವುದು
ಚಿತ್ತವ ಜಾಲಾಡುವುದೀ ಮಾಯೆ
ಬಿಟ್ಟು ಬಿಡದೆ ಆಮಿಷ ಬಡ್ಡಿ
ಪರೀಕ್ಷೆಯ ಮಾಡುವುದೀ ಮಾಯೆ
ತಿಮ್ಮ ನಾಯ್ಕನಿಗೆ ಒದಗಿತು
ನಿಧಿರೂಪದಿ ಧರೆಯೊಳು ಮಾಯೆ
ಧನಕನಕಗಳ ಮಾಯೆಗೆ ಸಿಲುಕದೆ
ಜಯ ಸಾಧಿಸದನನ್ದು ತಿಮ್ಮನು

ಸಾಹಿತ್ಯ ಸಂಭ್ರಮ ೨೦೧೪ – ನಾಟಕ ಹುಟ್ಟುವ ರೀತಿ

December 17, 2015 – 11:58 pm | By pramodlns

ವಿವಿಡ್ಲಿಪಿ ತಂಡವು ಸಾಹಿತ್ಯ ಸಂಭ್ರಮ ಹಾಗು ಇತರೆ ಸಾಹಿತ್ಯದ ವಿವರಗಳನ್ನು ನಿಮಗಾಗಿ ಅಂತರ್ಜಾಲದ ತಾಣದಲ್ಲಿ ಪ್ರಕಟಿಸುತ್ತೇವೆ
ಭೇಟಿ ಕೊಡುತ್ತಿರಿ…..
ಸಾಹಿತ್ಯ ಸಂಭ್ರಮ ೨೦೧೪
ಗೊಷ್ಠಿ – ೧
ನಾಟಕ ಹುಟ್ಟುವ ರೀತಿ
ನಾಟಕವೊಂದರ ಬೀಜ ಮೊಳೆಯುವುದು ಹೇಗೆ? ಅದು ಬೆಳೆದು ಕೊನೆ ಮುಟ್ಟುವುದು ಹೇಗೆ? ಬರೆಯಲು ಆರಂಭಿಸುವಾಗ ಪೂರ್ತಿ ನಾಟಕದ ಶಿಲ್ಪ, ಪಾತ್ರ, ಸನ್ನಿವೇಶಗಳು ಮೊದಲೇ …

ಹನಿಗವನಗಳು

December 17, 2015 – 2:31 pm | By Anitha Nadig

ಸಿಕ್ಕು
ಕೇಳಲು ಶಬ್ದವೋ ಶಬ್ದ
ನೋಡಲು ಮಾತ್ರ ಎಲ್ಲಾ ಸ್ತಬ್ದ
ಇದೇನಿದು ಮ್ಯಾಜಿಕ್ಕು
ಅದು ಬೆಂಗಳೂರಿನ ಟ್ರಾಫ಼ಿಕ್ಕು!
——————————————

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬

December 17, 2015 – 2:17 am | By pramodlns

ದೇಶ, ವಿದೇಶದ ಜನೆತೆಗೆ ಧಾರವಾಡ ಸಾಹಿತ್ಯ ಸಂಭ್ರಮದ ಸವಿಯನ್ನು ತಲುಪಿಸಲು ಒಂದು ಹೊಸ ಪ್ರಯತ್ನ:
ವಿವಿಡ್ಲಿಪಿ ಸಂಸ್ಥೆಯೊಂದಿಗೆ ಕೈಗೂಡಿಸಿ, ೨೦೧೬ ವರುಷದ ಧಾರವಾಡ ಸಾಹಿತ್ಯ ಸಂಭ್ರಮವನ್ನು ಅಂತರ್ಜಾಲದ ಮುಖಾಂತರ ಜಗತ್ತಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
ಧಾರವಾಡ ಸಾಹಿತ್ಯ ಸಂಭ್ರಮ – ಒಂದು ಕಿರು ಪರಿಚಯ (೨೦೧೪ ಸಂಭ್ರಮದ ಮುನ್ನುಡಿಯಿಂದ ಕೆಲವು ಸಾಲುಗಳು …

The Journey Tread!

December 15, 2015 – 11:32 am | By Anitha Nadig

I stand here on the road
And look back and watch
The path I have walked
I see the shining asphalted road
With the beautiful curves
Running far and far
Touching the horizon
Beyond a point
There …

ಉತ್ಪಾತ

December 15, 2015 – 9:21 am | By gurumurthy mehendale

ಲೋಕ ವ್ಯಾಪಾರಕು
ಎನಗು ಸಂಬಂಧವಿಲ್ಲ
ಸುರಿದು ಮುಳುಗಿಸುವಂಥ
ಛಲವೇನು ಎನಗಿಲ್ಲ
ಹರಿಯುತಿದ್ದೆ ಹಿಂಗುತಿದ್ದೆ
ಸೇರುತಿದ್ದೆ ನೆದೊಡಲ
ಹಿಡಿದು ನಿಲಿಸುವರಿಲ್ಲ
ಗಿಡಮರಗಳುಳಿದಿಲ್ಲ
ಹರಿದೆಂದಿನಂತಾನು
ಸೇರೆ ಸಾಗರವನ್ನು
ರವಿ ಸೆಳೆದು ಕರೆದೊಯ್ದ
ನೀಲ ಮುಗಿಲಿಗೆ ತಾನು
ಹಗುರವೇ ನಾನೇನು
ಹಿಡಿಯಲಾರದ ಭಾನು
ಬಲಮೀರಿ ಹಿಡಿದಿದ್ದ
ತೋಳ ಸೆಳೆತದ ತನಕ
ಯಾರ ಹಣೆಬರಹ
ಹೇಗಿತ್ತೋ ಏನೋ
ಹೀಗಾಯತಲ್ಲ ಇದೆ
ವಿಧಿಬರಹವೇನೋ