Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ), ೨೦೧೫ 0

ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು

ಗೋಷ್ಠಿ ೮: ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು

ಕವಿಗಳು ತಮ್ಮ ಸ್ವಂತ ಕವಿತೆಗಳನ್ನು ಓದುವ ಕವಿಗೋಷ್ಠಿಗಳು ಸಾಮಾನ್ಯ. ಆದರೆ ಈ ಗೋಷ್ಠಿಯಲ್ಲಿ ಕವಿಗಳು ಪು. ತಿ. ನ. ಹಾಗು ವಿ. ಕೃ. ಗೋಕಾಕರ ತಮಗಿಷ್ಟವಾದ ಒಂದು ಕವನವನ್ನು ಓದಬೇಕು. ಕಾವ್ಯವಾಚನವೆಂದರೆ ಯಾಂತ್ರಿಕವಾಗಿ ಪ್ರತಿಯೊಂದೂ ಸಾಲನ್ನು ಎರಡೆರಡು ಸಲ ಓದುವದಲ್ಲ. ಕಾವ್ಯವಾಚನ ಒಂದು ಕಲೆ. ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಓದಬೇಕು. ಇಂಥ ಓದಿನ ಮೂಲಕ ಈ ಇಬ್ಬರು ಹಿರಿಯ ಕವಿಗಳ ಕಾವ್ಯವನ್ನು ಮುನ್ನೆಲೆಗೆ ತರುವುದು ಗೋಷ್ಠಿಯ ಉದ್ದೇಶ.
ಕವಿತೆಗಳು ಎಷ್ಟು ಹಳೆಯವಾಗಿದ್ದರೂ ಅವು ಪ್ರತಿಯೊಂದೂ ತಲೆಮಾರಿಗೆ ಹೊಸ ಸ್ಪೂರ್ತಿ, ಹೊಸ ಚಿಂತನೆಗೆ ಕಾರಣವಾಗುತ್ತವೆ ಎಂಬುದಕ್ಕೆ ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕಾವ್ಯವಾಚನದ ಈ ವಿಶಿಷ್ಟ ಗೋಷ್ಠಿ ಸಾಕ್ಷಿಯಾಯಿತು. ಹಿರಿಯ ಕವಿ ಚೆನ್ನವೀರ ಕಣವಿಯವರು ವಿ. ಕೃ. ಗೋಕಾಕರ “ನನ್ನ ನಾಡು” ಕವಿತೆಯನ್ನು ವಾಚಿಸುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು.

ನೋಡಿರಿ ಧಾರವಾಡ ಸಾಹಿತ್ಯ ಸಂಭ್ರಮ ೨೦೧೫ರ ಗೋಷ್ಠಿ “ಪು. ತಿ. ನ. ಹಾಗು ವಿ. ಕೃ. ಗೋಕಾಕರ ಕವಿತೆಗಳ ಓದು” ವಿವಿಡ್ಲಿಪಿ ಮಿಂಬರಹದಲ್ಲಿ…

Leave a comment