Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Default Category (ಪೂರ್ವ ನಿಯೋಜಿತ ವರ್ಗ), Literature (ಸಾಹಿತ್ಯ), ೨೦೧೪ 0

ಧಾರವಾಡ ಸಾಹಿತ್ಯ ಸಂಭ್ರಮ ೨೦೧೪: ನಾಡೋಜ ಚೆನ್ನವೀರ ಕಣವಿ ಅವರ ಕವನ ವಾಚನ

ನಾಡೋಜ ಚೆನ್ನವೀರ ಕಣವಿ ಅವರಿಂದ ರಾಷ್ಟ್ರಕವಿ ಕುವೆಂಪು ಅವರ ಭಾದ್ರಪದ ಬಯಲುಸೀಮೆ ಕವನ ವಾಚನ

ಧಾರವಾಡ ಸಾಹಿತ್ಯ ಸಂಭ್ರಮ ೧೮ ಜನವರಿ ೨೦೧೪

ಭಾದ್ರಪದ ಬಯಲುಸೀಮೆ
(ಪಕ್ಷಿಕಾಶಿ ಕವನಸಂಕಲನ)

ನಾನು, ನಾಯಿ, ಮೆಟ್ಟು, ಕೊಡೆ
ನಾಲ್ವರೇ ತಿರುಗಾಟಕೆ,
ಹೊರಟೆವೆಂದು ನಸುಕು ಬಿಡೆ
ಬೆಳಗು ಹಿರಿಯೂ ನೋಟಕೆ,
ಬಾನು, ಭುವಿ, ಮುಗಿಲು, ರವಿ
ಹೊರಟರೊಡನೆ ನಮ್ಮ ಒಡನೆ
ರಸದೌತಣವದೂಟಕೆ,
ಸಹ್ಯಾದ್ರಿಯ ಪ್ರಕೃತಿ ಭಾಮೆ
ಸೌಂದರ್ಯ ಪರಾಕ್ರಮೆ,
ಭಾದ್ರಪದದ ಬಯಲುಸೀಮೆ
ರಮ್ಯತೆಯಲಿ ಸಂಯಮೆ,
ಅಡವಿ ಹುಚ್ಚು ಬೆಟ್ಟ ಕೆಚ್ಚು ಇಲ್ಲದದಕೆ
ಮಿತಿಯ ಮೆಚ್ಚು
ಸೊಬಗಿನೊಳು ಸಂಯಮೆ,
ಹಳದಿ ಹೊನಲು ಹರಿದು ಹೋಯ್ತು
ಮತ್ತೆ ಕೆಂಪಿನೋಕುಳಿ
ಮದುವೆಯಾಯ್ತು, ಒಸುಗೆಯಾಯ್ತು ಉಷೆಗೆ
ಮೂಡುಬಾನಲಿ,
ಕಂಪಿನುಸಿರ ನೆಸೆಯೆ ಸುಸಿಲು
ಹುಟ್ಟಿಬಂತು ಹಸುಳೆ ಬಿಸಿಲು
ಹಬ್ಬವಾಯ್ತು ಹೊಲದಲ್ಲಿ,
ಗುಬ್ಬಳಿಸಿದುವೆನಿತು ಛೋರೆ ಮರದ
ಸೊಪ್ಪಿನೊಡಲಲಿ,
ಕಿವಿಯೇ ದೋಣಿಯಾಯ್ತು ಬೇರೆ
ಹಕ್ಕಿ ದನಿಯ ಕಡಲಲಿ,
ಮೈಯ್ಯ ತೊರೆ ಹೊನ್ನ ಹೊತ್ತು
ಪಡುವಣೆಡೆಗೆ ನೀಳವಾಯ್ತು
ನೆರಳು ಮರದ ಬುಡದಲಿ,
ಜೋಳದ ಬೆಳೆ ಕೊಯ್ಯಲಾಯ್ತು
ಬಣವೆಯಾಯ್ತು ಹೊಲದಲ್ಲಿ,
ನೆತ್ತರರ್ಥ ಸೇರುವೆಯಾಯ್ತು ಒಕ್ಕಲಿಗನ ಬಲದಲಿ
ಹುರಳಿ ರಾಗಿ ಹರಳು ತವರಿ
ಹಸುರು ಬೀಸುತಿಹವು ಚಿಗುರಿ
ಮತ್ತೆ ಉತ್ತ ನೆಲದಲಿ,
ಕೆಣಿವೆಗಿಳಿದು ಗೋಡೆಗೇರಿ ಜೇನ್ ಗನಸಿನ
ಬಾಲೊಳು ನಿಲ್ಲುತೊಮ್ಮೆ ನಡೆಯುತೊಮ್ಮೆ
ಕಣ್ಣಾಲಗೆ ತೇಲಲು – ಕಬ್ಬಿಗನೆದೆಯ
ಕಬ್ಬಿಣ ಗಾಣ – ಕಬ್ಬು ಅದಕೆ ಜಗತ್ ಪ್ರಾಣ
ಕಬ್ಬವೇ ರಸವಾಗಲಿ,
ಮಲೆಯ ಹೆಣ್ಣೋ , ಬಯಲ ಹೆಣ್ಣೋ
ಒಲುಮೆಯಿದ್ದರೆದೆಯಲಿ ಎಲ್ಲ ಚೆನ್ನು; ಎಲ್ಲ ಹೊನ್ನು
ಭೇದವಿಹುದೆ ಬೆದೆಯಲಿ?
ಮಲೆಯ ನೆಲವೊ, ಬಯಲ ಹೊಲವೊ
ಬೇರೆ ಧೇನು ಆದರೇನು?
ಅಮೃತವಿರದೇ ಸೊದೆಯಲಿ?

ಕೃಪೆ:
ಮುದ್ರಿತ ವಿಡಿಯೋ – ಶ್ರೀ. ಶಿವಾನಂದ ಕಣವಿ
ಕವನದ ಸಾಲುಗಳು – ಶ್ರೀಮತಿ. ಗೌರಿ ಪ್ರಸನ್ನ

Leave a comment