Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ
Home » Philosophy (ತತ್ವಶಾಸ್ತ್ರ) 0

ಚಾತುರ್ವಣ್ಯದ ಅಪಮೌಲ್ಯೀಕರಣ

Submitted by arathivb arathivb on December 10, 2018 – 7:37 am One Comment

ಚಾತುರ್ವಣ್ಯದ ಅಪಮೌಲ್ಯೀಕರಣ

ಸ್ವಾಭಿಮಾನದ ಜಾಗದಲ್ಲಿ ‘ದುರಭಿಮಾನ’ ಮೊಳೆತರೆ, ವೃತ್ತಿ-ಪ್ರವೃತ್ತಿಗಳ ವೈವಿಧ್ಯವನ್ನು ಸೃಷ್ಟಿಯ ಸೋಜಿಗವೆಂಬ ದೃಷ್ಟಿಯಿಂದ ಕಾಣುವ ಬದಲು, ಮೇಲು-ಕೀಳೆಂದು ಬಗೆಯುತ್ತ, ದುರಹಂಕಾರಕ್ಕೆ ಬಲಿಯಾಗುತ್ತಾನೆ – ಎಂಬುದನ್ನೂ ರ್ಚಚಿಸಿದ್ದೆವು. ಈ ನಿರಭಿಮಾನಿಗಳೂ ದುರಭಿಮಾನಿಗಳು ಸೇರಿ ಅರ್ಥಪೂರ್ಣ ಚಾತುರ್ವಣ ವ್ಯವಸ್ಥೆಯನ್ನು ಅಂದಗೆಡಿಸುತ್ತ ಬಂದದ್ದು ದುರ್ದೈವ. ನಿರಭಿಮಾನಿಯಿಂದಾಗಿ ಚಾತುರ್ವಣ ಪದ್ಧತಿ ಹೇಗೆ ಅರ್ಥ ಕಳೆದುಕೊಂಡಿತೆಂಬುದನ್ನು ನೋಡೋಣ.
ತಮ್ಮ ಕುಲ-ನಾಡು-ನುಡಿಗಳ ಸತ್ವವನ್ನೂ ಸ್ವಾಭಿಮಾನವನ್ನೂ ಮೈಗೂಡಿಸಿಕೊಳ್ಳದ ನಿರಭಿಮಾನಿಗಳ ಅಂತರಂಗದಲ್ಲಿ ಪರಕೀಯ ಪ್ರಭಾವ ಸುಲಭವಾಗಿ ಪ್ರವೇಶಿಸುತ್ತದೆ. ಯಾವುದೇ ಸೈದ್ಧಾಂತಿಕ ನೆಲೆಯಿಲ್ಲದ ಇಂತಹವರನ್ನು ಯಾರು ಬೇಕಾದರೂ ಕಾಮದಿಂದಲೋ, ಆಮಿಷಗಳಿಂದಲೋ, ಮಿಥ್ಯಾನುಡಿಗಳಿಂದಲೋ ಸುಲಭವಾಗಿ ಮನೋದಾಸರನ್ನಾಗಿ ಮಾಡಿಕೊಳ್ಳಬಹುದು! ಸನಾತನಧರ್ವಿುಗಳ ಮನದಲ್ಲಿ ನಿರಭಿಮಾನ ಮೂಡಿಸಿ, ಪರಂಪರೆಯಿಂದ ಬೇರ್ಪಡಿಸಿ, ಅತಂತ್ರರನ್ನಾಗಿಸಿ, ವಶಪಡಿಸಿಕೊಳ್ಳುವ ಯತ್ನ ಶತಮಾನಗಳಿಂದ ಸಾಗಿದೆ. ಆ ಯತ್ನಗಳಲ್ಲಿ ‘ಚಾತುರ್ವಣದ ಬಗ್ಗೆ ಅತ್ಯಂತ ವಿಕೃತವಾದ ವ್ಯಾಖ್ಯಾನಗಳನ್ನು ಪ್ರಕಟಿಸಿ’ ಮತಿಗೆಡಿಸುವುದೂ ಒಂದಾಗಿದೆ. ಚಾತುರ್ವಣದಲ್ಲಿನ ವೃತ್ತಿ-ವೈವಿಧ್ಯವನ್ನು ‘ವಿರೋಧ’ ಅಥವಾ ‘ತಾರತಮ್ಯ’ವೆಂದೂ, ಕುಲಧರ್ಮದಲ್ಲಿನ ನಿಷ್ಠೆಯನ್ನು ‘ಜಾತಿ’ಗೀಳೆಂದೂ, ಪರಂಪರೆಯನ್ನು ಪಾಲಿಸುವ ಶ್ರದ್ಧೆಯನ್ನು ‘ಮೌಢ್ಯ’ವೆಂದೂ ಹೆಸರಿಸಿ, ಆಬಾಲವೃದ್ಧರಿಗೆ ನಿರಂತರವೂ ಹೇಳಿ ಅಪಾರ್ಥಗಳನ್ನು ಕಲ್ಪಿಸಲಾಗಿದೆ. ರಾಜಕೀಯದವರು ತಮ್ಮ ಲಾಭಕ್ಕಾಗಿ ಜಾತಿಯ ಹೆಸರಿನಲ್ಲಿನ ಅಪವ್ಯಾಖ್ಯಾನವನ್ನು ಹಿಡಿದರೆ, (ನಮ್ಮದಲ್ಲದ) ನಮ್ಮ ಶಿಕ್ಷಣವೂ, ಚಲನಚಿತ್ರಗಳೂ ಸೇರಿ ಚಾತುರ್ವಣವನ್ನು ‘ಜಾತಿಭೇದ’ವೆಂದೇ ನಿರಂತರವೂ ಅರ್ಥೈಸುತ್ತ ಬಂದಿದ್ದು, ಆ ಪದವನ್ನು ಅಪಮೌಲ್ಯಗೊಳಿಸಿದ್ದಾರೆ. ಇದೆಲ್ಲ ಧರ್ಮದ್ವೇಷಿಗಳಿಂದ ಶತಮಾನಗಳಿಂದಲೂ ವ್ಯವಸ್ಥಿತವಾಗಿ ಸಾಗುತ್ತಿದ್ದರೂ, ನಿರಭಿಮಾನಿಗಳಾದವರಿಗೆ ಅರ್ಥವಾಗದು, ಏನೂ ಅನಿಸದು! ನಮ್ಮಲ್ಲಿ ಅದೆಷ್ಟು ಬಗೆಬಗೆಯ ವೃತ್ತಿಗಳಿವೆ, ಸುಂದರ ಗೀತ-ನೃತ್ಯ-ನಾಟಕ-ಚಿತ್ರ-ಶಿಲ್ಪಾದಿ ಲಲಿತ ಕಲಾಪ್ರಕಾರಗಳು, ವಿದ್ಯೆಗಳೂ ಶಾಸ್ತ್ರಗಳೂ ಉಪಾಸನಾಪದ್ಧತಿಗಳೂ ದರ್ಶನಗಳೂ ಕ್ರೀಡೆಗಳೂ ಪ್ರಾಂತೀಯ ಭಾಷಾಸಾಹಿತ್ಯಗಳೂ ಪದ್ಧತಿಗಳೂ ಕೃಷಿವಿಜ್ಞಾನಪ್ರಕಾರಗಳೂ ಹಬ್ಬಹರಿದಿನಗಳೂ ಶಿಷ್ಟಾಚಾರಗಳೂ ವಿಚಾರಧಾರೆಗಳೂ ಅನಾದಿಯಿಂದ ಅರಳಿಬಂದಿವೆ, ಪರಸ್ಪರ ಪೂರಕವೂ ಪ್ರೇರಕವೂ ಆಗಿವೆ ಎನ್ನುವುದರ ವರ್ಣಮಯ ಚಿತ್ತಾರವನ್ನು ಒಮ್ಮೆಯೂ ನೋಡದವರಿಗೆ ಸ್ವದೇಶ-ಸ್ವಸಂಸ್ಕೃತಿಯ ಬಗ್ಗೆಯೂ ಕುಲಧರ್ಮದ ಬಗ್ಗೆಯೂ ಕೀಳರಿಮೆ ಮೂಡುವುದರಲ್ಲಿ ಆಶ್ಚರ್ಯವೇನಿದೆ? ನಮ್ಮ ಸ್ವಸ್ವರೂಪವನ್ನೂ ಸತ್ವ ಸಾಮರ್ಥ್ಯಗಳನ್ನೂ ಒಮ್ಮೆಯಾದರೂ ಅವಲೋಕಿಸಿಕೊಳ್ಳಲು ಅನುವು ಮಾಡಿಕೊಡದ ‘ನಮ್ಮ’(?) ಶಿಕ್ಷಣವ್ಯವಸ್ಥೆಯಲ್ಲಿ ಬೆಳೆದ ಮನಸ್ಸಿಗೆ ‘ಚಾತುರ್ವಣದ ಕಲ್ಪನೆ ಮೂಡುವುದಾದರೂ ಹೇಗೆ? ಹಗಲೂರಾತ್ರಿ ಎತ್ತೆತ್ತಿ ತೋರಿಸಲ್ಪಡುವ ‘ಜಾತಿಕಲಹ’ವನ್ನೇ ಚಾತುರ್ವಣವೆಂದು ಅರ್ಥಮಾಡಿಕೊಳ್ಳುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಹೇಗಿದೆ ನೋಡಿ ‘ನಮ್ಮ’ ಶಿಕ್ಷಣದ ಪರಿಣಾಮ! ಪಾಶ್ಚಾತ್ಯರಿಂದ ಹರಿದುಬರುವ ಯಾವುದೇ ವಸ್ತು ಮತ ಸಿದ್ಧಾಂತ ಪರಿಕಲ್ಪನೆಗಳನ್ನೂ ಪ್ರಮಾಣಿಸದೆ ಕಣ್ಮುಚ್ಚಿ ಅಂಗೀಕರಿಸುವ ಮನೋದಾಸ್ಯ! ಆದರೆ ವೃತ್ತಿ ಪ್ರವೃತ್ತಿ ದೇಶ ಎಲ್ಲದರ ಬಗ್ಗೆಯೂ ಭಯಂಕರ ತಾರತಮ್ಯ! ಹಳ್ಳಿಯವನಿಗೆ ತಾನು ಹಳ್ಳಿಯವನೆಂಬ ಕೀಳರಿಮೆ! ನಗರದವನಿಗೆ ಕನ್ನಡ ಮಾತನಾಡಲು ಕೀಳರಿಮೆ! ರೈತನಿಗೆ ವ್ಯವಸಾಯ ಮಾಡಲು ಕೀಳರಿಮೆ! ಸ್ತ್ರೀಗೆ ಸ್ತ್ರೀತ್ವದ ಬಗ್ಗೆಯೇ ಕೀಳರಿಮೆ! ಕೊನೆಗೆ ‘ತಾನು ಸನಾತನಧರ್ಮದವನು’ ಎಂದು ಹೇಳಿಕೊಳ್ಳಲೂ ಕೀಳರಿಮೆ! ಹೀಗೆ ಸ್ವಧರ್ಮವನ್ನರಿಯದೆ, ನಿರಭಿಮಾನಿಯಾಗುಳಿದ ವ್ಯಕ್ತಿಯ ಮನಸ್ಸು ಬಾಹ್ಯಪ್ರಭಾವವೆಂಬ ಬಿರುಗಾಳಿಗೆ ಸಿಕ್ಕ ಎಂಜಲೆಲೆಯಂತಾಗಿಬಿಡುತ್ತದೆ! ಇಂತಹ ಅತಂತ್ರ ಮನಃಸ್ಥಿತಿಯವರ ನಡೆನುಡಿಗಳಲ್ಲಿ ಚಾತುರ್ವಣರ್ವು ಅರ್ಥ ಕಳೆದುಕೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಚಾತುರ್ವಣದ ಮೇಲೆ ಉಂಟಾದ ದುರಭಿಮಾನಿಗಳ ದುಷ್ಪ್ರಭಾವವನ್ನು ಮುಂದೆ ನೋಡೋಣ!
(ಲೇಖಕರು ಸಂಶೋಧಕರು, ಸಂಸ್ಕೃತಿ ಚಿಂತಕರು)

ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ

One Comment »

Leave a comment