Art and Crafts
ಕಲೆ ಮತ್ತು ಕರಕುಶಲ
Poetry
ಕವನ
Literature
ಸಾಹಿತ್ಯ
Travel Journal
ಪ್ರವಾಸ ಪತ್ರಿಕೆ
Theatre and Drama
ರಂಗಭೂಮಿ ಮತ್ತು ನಾಟಕ

ಸಿಟ್ಟು

August 24, 2016 – 7:09 am | By vijaya inamdar

ಸಿಟ್ಟಿಗೆ ಕಾರಣ ಸೋಕ್ಕು
ಅಂತ ಗೋತ್ತಿದ್ದರೂ ಅದನ್ನು ಒಪ್ಪದೆ ನಮ್ಮದೇ
ನಡಸುತ್ತ ಎಷ್ಟು ದಿನ ?
ಇಲ್ಲಾ ಇಂದಿನಿಂದ ಸೋಕ್ಕು ಬಿಟ್ಟರೆ ಶಾಂತ ಮನ.
ಕಾಡಿನಲ್ಲಿ ಗೆಣಸು ತಿಂದು ತೋಪ್ಪಲ ಹೋದ್ದುಕೋಂಡು ಸೋಕ್ಕಿಲ್ಲದ–
-ಜೀವನ ನಡೆಸಿದವರನ್ನು ನೆನಿಸಿಕೋಂಡರೆ,
ಈ ಸೋಕ್ಕು ಬಂದದ್ದು ಅನುಕೂಲಗಳ ಹಿಂದೆ ಎನೋ..ಅಥವಾ ಹೋನ್ನು,ಹಣದ ಹಿಂದೆಯೋ,
ಸೋಕ್ಕಿ (ಸಿಟ್ಟಿ)ಲ್ಲದ ಬದುಕೇ ನಿಜ ಜೀವನ.
ವಿಜಯ ಇನಾಮದಾರ
ಧಾರವಾಡ
 

ಓ ಗೆಲುವೇ….

August 24, 2016 – 6:58 am | By vijaya inamdar

ಓ ಗೆಲುವೇ ನೀ ಎಷ್ಟು ಸ್ಪೂರ್ತಿ ತರುವೆ.
ಗೆಲುವು ಹೇಗೇ ಬರಲಿ ಎಲ್ಲೆ ಬರಲಿ
ಸಂತಸ ತಂದೇ ತರುವೆ.
ಇವತ್ತ ಒಬ್ಬನ ಸರದಿ
ನಾಳೆ ಮತ್ತೋಬ್ಬನ ಸರದಿ
ಪ್ರಯತ್ನವಿಲ್ಲದೆ ಸಿಗದಿರುವೆ.
ನಾ ಕಾಣೆ ಯಾವಾಗ‌ ಬರುವದೋ ನನ್ನ‌ ಸರದಿ
ಆದರೂ ನಾ ನುಗ್ಗುತ್ತಿರುವೆ ಭಾರಿ ಭರದಿ.
ಬಾ ಬೇಗನೆ ಓ ಗೆಲುವೇ….
ವಿಜಯ.ಇನಾಮದಾರ
ಧಾರವಾಡ

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!

August 23, 2016 – 6:43 am | By Hosmane Muttu

ಬಾವಿಕಟ್ಟೆ ಮತ್ತು ಮಣ್ಣಿನ ಬಿಂದಿಗೆ…!
ಆತನಲ್ಲಿ ಆಸೆ ಏನೋ ದಂಡಿಯಾಗೇ ಇತ್ತು. ಅದು ತಾನು ಏನೇನೋ ಆಗಬೇಕೆಂಬ ಬಯಕೆ. ಆದರೆ ಕೂತು ಎರಡಕ್ಷರ ಕಲಿಯಲಾರದ ಸೋಮಾರಿ. ಅವನಿಗೋ ಓದು ಹತ್ತದು, ಬಯಕೆ ಬತ್ತದು. ಹೀಗಾಗಿ ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂಬಂತಾಯಿತು ಆತನ ಸ್ಥಿತಿ. ಗುರುಗಳು ಹೇಳುವಷ್ಟು ಹೇಳಿದರು, ತಿದ್ದುವಷ್ಟು …

ಕಹಿ ನೆನಪುಗಳು ಬೇಕು ಅರಿಯಲೀ ಬದುಕು

August 20, 2016 – 7:42 am | By nandagarge

ಕಹಿ ನೆನಪುಗಳು ಬೇಕು ಅರಿಯಲೀ ಬದುಕು
“ಸುನೀ ಚಹಾ” ಎಂದು ಕೂಗಿ ಮತ್ತೆ ಮುಸುಕೆಳೆದ ಅರವಿಂದ, ಚಹಾ ಬರುವವರೆಗೂ ಮತ್ತೈದು ನಿಮಿಷ ಮಲಗುವ ಆಸೆಯಿಂದ. ಕಿವಿಗಳು ಗೆಜ್ಜೆಯ ಶಬ್ದದ ನಿರೀಕ್ಷೆಯಲ್ಲಿದ್ದವು. ಯಾವುದೇ ಶಬ್ದವಿಲ್ಲ. ಮತ್ತೆರಡು ನಿಮಿಷಕ್ಕೆ “ಅರೂ ಚಹಾ” ಎಂದ ತಂದೆಯ ಧ್ವನಿ ಕೇಳಿ ಅಚ್ಚರಿಯಿಂದ ಮುಸುಕು ತೆಗೆದ.
“ಅಪ್ಪಾಜೀ …

ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು

August 19, 2016 – 10:53 am | By jogimane

ಹೂವು ತಂದವನಿಗೆ ವಯಸ್ಸಾಗಿತ್ತು, ಕಾಯುತ್ತಾ ಕೂತವಳು ಮುದುಕಿಯಾಗಿದ್ದಳು
ಮುಸ್ಸಂಜೆಗಳು ಅಪಾಯಕಾರಿ. ಹಗಲೂ ಅಲ್ಲದ ರಾತ್ರಿಯೂ ಅಲ್ಲ ಮುಸ್ಸಂಜೆಗಳಲ್ಲಿ ಮನಸ್ಸು ಇದ್ದಕ್ಕಿದ್ದಂತೆ ಮುದುಡಿಬಿಡುತ್ತದೆ. ಆಫೀಸು ಬಿಟ್ಟು ಮನೆಗೆ ಹೊರಟಾಗ, ಮನೆಯಲ್ಲೇ ಸುಮ್ಮನೆ ಕೂತಾಗ ಇದ್ದಕ್ಕಿದ್ದಂತೆ ಅದೆಂಥದ್ದೋ ಖಿನ್ನತೆ. ಇಳಿಸಂಜೆಯ ಮೌನದೊಳಗೊಂದು ಸ್ಫೋಟಿಸದ ಆರ್ತನಾದ.
ಲೈಫ್ ಈಸ್ ಎಲ್ಸ್ವೇರ್.
ನನ್ನ ಬದುಕು ಇನ್ನೆಲ್ಲೋ …

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

August 17, 2016 – 4:08 am | By narayan billava

ಸಂಸದ ಆದರ್ಶ ಗ್ರಾಮ ಯೋಜನೆಯು ಇತರೆ ಗ್ರಾಮಗಳಿಗೆ ಮಾದರಿಯಾಗಬಲ್ಲುದೇ?

ಭಾರತದಲ್ಲಿ ಗ್ರಾಮ ಅಥವಾ ಹಳ್ಳಿ, ವ್ಯವಸ್ಥೆಯು ಇತಿಹಾಸ ಕಾಲದಿಂದಲೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ರಾಜ ಮನೆತನಗಳ ಕಾಲದಲ್ಲಿ ಗ್ರಾಮ, ದಶಗ್ರಾಮ ಹಾಗೂ ಮಹಾಗ್ರಾಮಗಳೆಂದು ಮೂರು ಪಂಗಡಗಳಿದ್ದವು. ಗ್ರಾಮ ಕೇವಲ ಒಂದು ಗ್ರಾಮವಾಗಿರದೇ ದಶಗ್ರಾಮ (10 ಗ್ರಾಮಗಳನ್ನೊಳಗೊಂಡು) ಮತ್ತು …

ಇಚ್ಛೆ

August 12, 2016 – 5:52 am | By Uma Bhatkhande

ಇಚ್ಛೆ
ಸೃಷ್ಟಿ ಕರ್ತ ಪರಮಾತ್ಮನಿಚ್ಛೆ
ಭುವಿಗಿಳಿದ ಮನುಜನಿಚ್ಛೆ
ನಾನಂದುಕೊಂಡಂತೆ ಇರುವ ದರ್ಬಾರು ನನ್ನಿಚ್ಛೆ
ಸೃಷ್ಟಿಗೆ ಅಧಿಪತಿಯು ತಾನು ಇದು ದೇವರಿಚ್ಛೆ
ಸದಾ ನಗುಬೀರಿ ಸಿಹಿಯೊಂದೇ ಸಾಕೆನ್ನುವುದು ನನ್ನಿಚ್ಛೆ
ಬೇವು ಬೇಕು ವಜ್ರದಂತ ದೇಹಕ್ಕೆ ಇದು ದೇವರಿಚ್ಛೆ
ದೇಹ ಹೂವಸ್ಪರ್ಷದಿಂದ ಹಿತವನುಭವಿಸುವುದು ನನ್ನಿಚ್ಛೆ
ದೇಹದಂಡನೆಯಾಗಬೇಕು ಮನುಜನಾಗಲು ಇದು ದೇವರಿಚ್ಛೆ
ತಂಪಾದ ನವಿರಾದ …

ಪತ್ತೇದಾರ ಪುರುಷೋತ್ತಮ (ಒಂದು ಕತೆ)

August 9, 2016 – 9:48 am | By jogimane

ಪತ್ತೇದಾರ ಪುರುಷೋತ್ತಮ (ಒಂದು ಕತೆ)
ಎಂ ಎಸ್ ಪುಟ್ಟಣ್ಣಯ್ಯ `ಮಾಡಿದ್ದುಣ್ಣೋ ಮಹಾರಾಯ’, `ಮುಸುಕು ತೆಗೆಯೇ ಮಾಯಾಂಗನೆ’ ಮುಂತಾದ ಕಾದಂಬರಿಗಳನ್ನು ಬರೆದು ಅಜರಾಮರರಾದರು. ಕಾದಂಬರಿ ಪ್ರಕಾರದ ಹರಿಕಾರರೆಂದು ಹೆಸರಾದರು. ಆ ನಂತರ ಅನೇಕರು ಕಾದಂಬರಿ ಪ್ರಕಾರಕ್ಕೆ ನೀರೆರೆದು ಬೆಳೆಸಿದರು. ಬೇರೆ ಬೇರೆ ಪ್ರಕಾರದ ಕಾದಂಬರಿಗಳು ಬಂದವು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಪತ್ತೇದಾರಿ, …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು

August 6, 2016 – 11:57 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೧೦: ಭಾಗ ೨: ಸಾಹಿತಿಗಳೊಂದಿಗೆ ನಾವು
ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವನ್ನು ಪ್ರೀತಿಯಿಂದ ಓದಿಕೊಂಡು, ಸಾಹಿತಿಗಳೊಂದಿಗೆ. ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿರುವ ಸಾವಿರಾರು ಜನ ಸಾಹಿತ್ಯಾಸಕ್ತರಿದ್ದಾರೆ. ಇಂಥವರು ಸಾಹಿತ್ಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಕೇವಲ ಕೇಳುಗರಾಗಿ ಭಾಗವಹಿಸುದಕ್ಕಷ್ಟೇ ಸೀಮಿತರಾಗಿರುತ್ತಾರೆ. ಆದರೆ ಸಾಹಿತ್ಯದ ಪೋಷಣೆ, ಬೆಳವಣಿಗೆಗಳಲ್ಲಿ ಅವರ ಪಾಲು ದೊಡ್ಡದು. …

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೦: ಭಾಗ ೧: ಸಾಹಿತಿಗಳೊಂದಿಗೆ ನಾವು

August 6, 2016 – 11:49 pm | By ಧಾರವಾಡ ಸಾಹಿತ್ಯ ಸಂಭ್ರಮ

ಗೋಷ್ಠಿ ೧೦: ಭಾಗ ೧: ಸಾಹಿತಿಗಳೊಂದಿಗೆ ನಾವು
ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವನ್ನು ಪ್ರೀತಿಯಿಂದ ಓದಿಕೊಂಡು, ಸಾಹಿತಿಗಳೊಂದಿಗೆ. ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿರುವ ಸಾವಿರಾರು ಜನ ಸಾಹಿತ್ಯಾಸಕ್ತರಿದ್ದಾರೆ. ಇಂಥವರು ಸಾಹಿತ್ಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ ಕೇವಲ ಕೇಳುಗರಾಗಿ ಭಾಗವಹಿಸುದಕ್ಕಷ್ಟೇ ಸೀಮಿತರಾಗಿರುತ್ತಾರೆ. ಆದರೆ ಸಾಹಿತ್ಯದ ಪೋಷಣೆ, ಬೆಳವಣಿಗೆಗಳಲ್ಲಿ ಅವರ ಪಾಲು ದೊಡ್ಡದು. …